Tuesday, July 8, 2014

ಕಥೆ ಕಥೆ ಕಾರಣ

ಕಥೆ ಅಂತೆ ಕಥೆ ...  ಏನ್ ಕಥೆ. ಎಂಥ ಕಥೆ ಬರೆಯೋದು ..ಹಾ .. ಸಿಕ್ತು ಸಿಕ್ತು  ಅಲ್ನೋಡಿ  ಅಲ್ಲಿ ಇಲ್ಲಿ ಕೂತಲ್ಲಿ ಎದ್ದಲ್ಲಿ  ಕಂಡ ಮುಖಗಳೆಲ್ಲಾ ಉಧೋ  ಧೋ ಅಂತ ಮುಖದ ತುಂಬಾಕತೆ  ಬರಕೊಂಡು ಹೋಗ್ತಿವೆ ... ಕಾಲಿಗೆ ಬಿದ್ದ ಕಥೆ ಕಾಲಿಗೆ ಬೀಳಿಸಿ ಕೊಂಡ ಕಥೆ, ಸಣ್ಣ ಎಳೆಯಂತೆ ನಾಚಿದ ಕಥೆ ಹಿಡಿದು ಅಲಲೇ ಎಳೆದರೆ ಇಷ್ಟುದ್ದ ಧಾರಾವಾಹಿ ಅಥವಾ ಕಾದಂಬರಿ.. ಓದಿದೋರ ಕಣ್ಣಲ್ಲಿ ನಗುವ ಅಳುವೊ ಎಂಥದ್ದೋ ಒಂದು ಉಳಿಸಿ ಹೋಗುವಂಥವು..ಭಲೇ ಚಾಣಾಕ್ಷ ಕಥೆಗಳು

1
ಅವನಿಗೋ ಹೊಗಳಿಕೆ ಅಂದ್ರೆ ಪಂಚಪ್ರಾಣ. ಯಾರಾದ್ರೂ ಹೊಗಳಿದ್ರೆ ಸಾಕು ಅವರ ಒಂದು ಹೊಗಳಿಕೆಗೆ ಅವರು ಹೇಳದ್ದನ್ನೂ ಸೇರಿಸಿ ತನ್ನ ಡಂಗೂರ ಸಾರೋದು ಅಂದ್ರೆ ತುಂಬಾ ಇಷ್ಟ, ಒಳ್ಳೆ ಕೆಲಸ ಒಂದಷ್ಟು ಜೈಕಾರ ಹಾಕೊ ಸ್ನೇಹಿತರು ಮತ್ತು ಆತ್ಮರತಿ ಅನ್ನೋ ಸಿಹಿ ಸಿಹಿ ಪೆಪ್ಪೆರ್ ಮಿಂಟು... ಇಂಥವನ ಆಫೀಸಲ್ಲಿ ಅವಳು ಹೊಸದಾಗಿ ಕೆಲಸಕ್ಕೆ ಸೇರಿದ್ದಳು... ಅವಳಿಗೆ ಹೊಗಳಿಕೆ ಅಲರ್ಜಿ, ಇವನ ಚರ್ಬಿ ನೋಡಿ ಅವಳಿಗೆ ಅಸಹ್ಯ.. ಅವಳು ಕೆಲಸಕ್ಕೆ ಬಾರದವಳು ಅನ್ನೋದು ಇವನ ವಾದ...ಒಂದು ಹೊಸಾ ಪ್ರಾಜೆಕ್ಟು..ಇಂತವನಿಗೂ ಒಬ್ಬ ಬಾಸ್ ಇದ್ದೇ ಇದ್ದಾನಲ್ಲ.. ಅವನು ಇಬ್ಬರನ್ನೂ ಒಟ್ಟಿಗೆ  ಈ ಪ್ರಾಜೆಕ್ಟ್‌ಗೆ ಹಾಕಿದ.. ಕೆಲಸ ಬೇಗ ಮುಗಿದರೆ ಸರ್ಪ್ರೈಸ್ ಬೋನಸ್ ಕೂಡಾ ಇತ್ತು...
ಪ್ರಾಜೆಕ್ಟ್ ಮುಗಿಯಿತು... ಅವನನ್ನ ಹೊಗಳಿ ಹೊಗಳಿ ಅವಳು ಕೆಲಸ ಮಾಡಿಸಿದ್ದಳು ಮತ್ತು ಸರ್ಪ್ರೈಸ್ ಬೋನಸ್ ಗಿಟ್ಟಿಸಿದ್ದಳು.. ಮತ್ತು ಹೊಗಳಿಕೆಯ ಹೊನ್ನಶೂಲಕ್ಕೆ ಏರಿದವ ಅದೇ ಇನ್ನೂ ಸ್ವರ್ಗ ಅಂತ ತೇಲಾಡ್ಕೊಂಡು ಇದ್ದ... 
ಈಗ ಕಥೆ ಏನಪ್ಪಾ ಅಂದ್ರೆ ಎಲ್ಲರೂ ಅವಳನ್ನ ಹೊಗಳಲು ಶುರು ಮಾಡಿದ್ದಾರೆ ಮತ್ತುವನು ಅವಳನ್ನೇ ಮದುವೆ ಆಗೋದಾಗಿ ತೀರ್ಮಾನಿಸಿದ್ದಾನೆ... ದ ಎಂಡ್..(ಇನ್ನು ಹೊಗಳೊ ಕೆಲಸ ಅವನದ್ದು!!)

2
ಒಂದು ಹಳ್ಳಿ..ಅಲ್ಲಾ..ಹಳ್ಳಿ ಹಳ್ಳಿಯಾಗೆ ಎಲ್ಲಿದೆ ಹೇಳಿ..ಅಂತದ್ದೊಂದು ಹಳ್ಳಿ...ಆ ಹಳ್ಳೀಲಿ ವಯಸ್ಸಾದ ಅಜ್ಜ ಅಜ್ಜಿ(ಅವರೇ ಇರೋದು ಮತ್ತೆ ಈಗ) ಮನೇಲಿ ಇಬ್ಬರೇ...ಅಂತಾ ದೊಡ್ಡ ಮನೆ ಬಿಟ್ಟು ಮಗ ಪ್ಯಾಟೆ ಸೇರ್ಕೊಂಡಿದ್ದ..ಅಜ್ಜ ಅಜ್ಜಿಗೆ ಸಮಯ ಸಿಕ್ಕಾಗೆಲ್ಲ ಅಲ್ಲಿ ಹೋಗಿ ಬರ್ತಿದ್ರು, ಆದ್ರೆ ಮಗ ನಮ್ಮವನಾದರೂ ಸೊಸೆ ನಮ್ಮವಳೇ? ಅನ್ನೋ ಹಳೇ ಗಾದೆ ತರಾ ಪೇಟೇಲೆ ಬೆಳೆದ ಸೊಸೆ ಅತ್ತೆಗೆ ಏನೋ ಬೇರೆ ಭಾಷೆಲಿ ಅಂತಿದ್ಲು...ಪಾಪ ಗೊತ್ತಾಗದ ಅತ್ತೆ ಸುಮ್ಮನೆ ಕಣ್ಣು ಬಾಯಿ ಬಿಟ್ಟು ಕೇಳಿಸ್ಕೊಂಡು ಬರ್ತಿತ್ತು, ಇದ್ದವನೊಬ್ಬ ಮೊಮ್ಮಗ ರಜೆಗೆ ಅಜ್ಜಿ ಮನೆಗೆ ಬರ್ತಿದ್ದ,ಬಂದಾಗಲೆಲ್ಲ ಅಜ್ಜ ಅಜ್ಜಿ ಕೂರಿಸ್‌ಕೊಂಡು ಬರೆಯೋದು ಓದೋದು ಹೇಳ್ಕೊಡ್ತಿದ್ದ, ಅಂತಾ ಮೊಮ್ಮಗ ಈಗ ವಿದೇಶ ಸೇರಿದ್ದ,ಅಜ್ಜ ಅಜ್ಜಿಗೆ ಬರೋಕೆ ವೀಸಾ ರೆಡಿ ಮಾಡಿದ್ದ,ಸೊಸೆಯದ್ದು ಒಂದೇ ವರಾತ ಅವರಿಗೆ ಗೊತ್ತಾಗಲ್ಲ ಹಳ್ಳಿ ಜನಾ ಭಾಷೆ ಬರೋಲ್ಲ ನಿಂಗ್ಯಾಕೆ ಬೇಕಿತ್ತು ಉಸಾಬರಿ ಬೇಕಿತ್ತು ಅಂತೆಲ್ಲಾ, ಕೊನೆಗೂ ಅಜ್ಜ ಅಜ್ಜಿ ಹೊರಟೆ ಬಿಟ್ರು, ವೀಸಾ ಪಾಸ್ ಪೋರ್ಟ್ ಚೆಕ್ಕಿಂಗ್ ನಲ್ಲಿ ಅಜ್ಜಿಗೆ ಆಫೀಸರ್ ಕೇಳಿದ, ನೀವು ವಯಸ್ಸಾದವ್ರು, ಈ ವಯಸ್ಸಲ್ಲಿ ಹಳ್ಳೀಲಿ ಇರೊದ್ಬಿಟ್ಟು ಯಾವ್ದೋ ಕಾಣದ ದೇಶಕ್ಕೆ ಹೋಗ್ತಿದ್ದೀರಿ,ಅಲ್ಲಿ ಭಾಷೆ ಪ್ರಾಬ್ಲಂ ಆಗುತ್ತ್ ಅಂದ, ಅಜ್ಜಿ ಇಂಗ್ಲೀಷಲ್ಲಿ ಹೇಳ್ತು " ಐ ಸಾ ಇಂಗ್ಲಿಷ್ ವಿಂಗ್ಲಿಷ್ ಮೂವಿ,ವೀ ಬೋಥ್ ನೊ ಹೌ ಟು ಮ್ಯಾನೇಜ್" ಕಣ್ಣು ಕಣ್ಣು ಬಿಟ್ಟ ಆಫೀಸರ್ ಸುಮ್ಮನೆ ಸೀಲು ಒತ್ತಿ ಕಳಿಸಿದ, ಈಗ ಸೊಸೆ ಸರಿಯಾದ ಭಾಷೆ ಕಲಿತಿದ್ದಾಳಂತೆ!!

3

(ಮುಂದುವರೆಯುವುದು)