ಬದುಕೊಂದು ತಿರುವಲ್ಲಿ ಬಂದು ನಿಂತಿದೆ...ಎಲ್ಲ ನೋಡಿಯಾಯ್ತು ಅನ್ನುವ ಮೆಂಟಲೀ ರಿಟಾಯರ್ಡ್ ಸ್ಥಿತಿಯಲ್ಲೂ ಮತ್ತೇನೋ ಹುಡುಕೋ ಕುತೂಹಲ...ಒಮ್ಮೊಮ್ಮೆ ಮನಸ್ಸು ಅವಲೋಕನಕ್ಕೆ ತೊಡಗುವುದು, ಗತದ ಸಂಪತ್ತಿನಲ್ಲಿ ಏನೋ ಕಳಕೊಂಡಂತೆ ಎಗರಾಡುವುದು ಎಲ್ಲಾ ಗಮನಕ್ಕೆ ಬರುತ್ತಿರಲಿಲ್ಲ...ಕಣ್ಣಂಚು ಒದ್ದೆಯಾದಾಗ ಮಾತ್ರ ಅದೊಂದು ಗತ ಮತ್ತೆ ಅದಕ್ಕಾಗಿ ಹಂಬಲಿಸಿದ ಮನಸ್ಥಿತಿ ನೆನೆದು ಬೇಸರಾಗುತ್ತಿತ್ತೇನೋ...
ಈಗ ಎಲ್ಲ ಹಳವಂಡಗಳ ನೆನೆದು ಅಯ್ಯೋ ಅಷ್ಟಕ್ಕೇ ಎಷ್ಟು ಅತ್ತಿದ್ದೆ..ಅನ್ನಿಸೋದು..ತೀರಾ ನೋವಾದಾಗ ಅಳುವ ಕಾಲಕ್ಕೆ ಯಾಕೆ ಅಳು ಬಂತು ಅಂತ ಶೋಧಿಸುತ್ತಾ ಕಣ್ಣಂಚಲ್ಲಿ ಒದ್ದೊದ್ದೆ ಆಗುವ ಮುಂಚೆಯೇ ಹೊಟ್ಟೆ ಬಿರಿಯುವಷ್ಟು ನಗುಬರುವುದು...
ಅರೆರೆ ವಯಸ್ಸಾಯಿತೆ? ಎಲ್ಲಿ ವಯಸ್ಸಾಯಿತು...ಈಗಲೂ ನನ್ನ ಜೀವಂತಿಕೆಯನ್ನ ಹಿಡಿದಿಡೋ ಗೆಳೆಯರು...ಸಹೋದರರು...ಸಹೋದರಿಯರು ಗೆಳತಿಯರು...ಯಾವತ್ತೋ ಬರಬೇಕಿದ್ದ ಜಗತ್ತು ಇದು ಅಂತ ಬರಸೆಳೆದು ಅಪ್ಪುವ ಯಾವ ಕಳಂಕದ ಸೋಂಕಿಲ್ಲದ ಸಂಬಂಧಗಳು,ಆಪ್ತವಾಗಿ ಸದಾ ಜೊತೆಗಿರುವ ಜನುಮದ ಪ್ರಿಯತಮ ಪುಸ್ತಕದ ಸಖ್ಯ...ಒಳಗೆ ಕಾಡುವದೆಲ್ಲಾ ಲೇಖನಿಯಲ್ಲಿ ಅಳೆದು ಸುರಿದು ಬರುವ ಪದಗಳ ಜಿಪುಣತನದ ರೇಜಿಗೆ..
ಎಲ್ಲ ಇದ್ದು ಇಲ್ಲವೆನಿಸುವ ಕಾಲಕ್ಕೆ ಒಮ್ಮೊಮ್ಮೆ ನಾನು ಪ್ರಭುದ್ಧಳೇ ಅಲ್ಲವೇನೋ ಅನ್ನಿಸುತ್ತದೆ, ಹೌದು..ಕೆಲವೊಮ್ಮೆ ಮಕ್ಕಳಂತೆ ಆಡುವ ಮನಸ್ಸಿಗೆ ಇನ್ನೂ ವಯಸ್ಸಾಗಿಲ್ಲ...ಈಗಲೂ ಏನನ್ನೋ ಅತಿಯಾಗಿ ಮುಗ್ಧವಾಗಿ ನಂಬುವದನ್ನ ಬಿಟ್ಟಿಲ್ಲ,..ಈಗಲೂ ಮುಚ್ಚಿದ ಬಾಗಿಲುಗಳ ಹಿಂದೆ ಅಡಗಿರುವ ಬೆಳಕಿನ ಲೋಕ ಅಥವಾ ಯಾವುದೋ ಕತ್ತಲ ರಹಸ್ಯ ಕತೆಯಾಗಿ ಕಾಡುವುದ ಬಿಟ್ಟಿಲ್ಲ,ತಪ್ಪು ಅಂತ ಗೊತ್ತಿದ್ರೂ ಇದೆಲ್ಲ ಮಾಡೋ ಮನಸ್ಸು ಮರ್ಕಟ ಅಲ್ದೆ ಇನ್ನೇನು? ಪ್ರೀತಿ ಹೊತ್ತು ಬರೋ ಮನಸ್ಸುಗಳಿಗೆ ನಾನು ಬಯಲಾಗಿದ್ದೇನೆ...ಆಗಸದಷ್ಟು ವಿಶಾಲವಾಗುವ ಬಯಕೆ ಇದೆ...ಮುರಿದು ಕುಂತ ರೆಕ್ಕೆಗಳಿಗೆ ಕನಸಿನ ಜಾದೂ ಹುಡಿ ಅಂಟಿಸಿ ವಾಸ್ತವದ ಜಗತ್ತಲ್ಲಿ ಹಾರಬಿಡೋ ಮನಸ್ಸಿದೆ...
ಇಷ್ಟೆಲ್ಲದರ ನಡುವೆ ಒಮ್ಮೊಮ್ಮೆ ಮಾತನ್ನು ಮೀರಿದ ಕಸಿವಿಸಿ..ಅದು ಇಂಥಾದ್ದಕ್ಕೆ ಅಂತಿಲ್ಲ.. ಎಲ್ಲೋ ತಪ್ಪಿ ಹೋಗುವ ಕೊಂಡಿ..ಯಾವುದೋ ಸಣ್ಣ ಮುನಿಸು, ಸಮಾಜದ ಕೆಲ ಬೇಜವಾಬ್ದಾರಿಗಳಿಗೆಲ್ಲ ಅಪರೋಕ್ಷ ಕಣ್ಣಾಗುವ ಕಸಿವಿಸಿ...ಆಡದಿರುವ ಮಾತುಗಳು ಬಣ್ಣ ಬಂದು ಕಾಲಾಡಿಕೊಳ್ಳೋ ಕಸಿವಿಸಿ, ಅಷ್ಟೋ ಇಷ್ಟೋ ಬಚಾವಾದ ಖಾಸಗಿತನ ಜಗತ್ತಿಗೆ ಬೆತ್ತಲಾಗೋ ಕಸಿವಿಸಿ...ಯಾರಿದ್ದರೂ ಯಾರಿಲ್ಲ ಅಂತ ಅನ್ನಿಸೋ ಖಚಿತವಲ್ಲದ ಅನಾಥ ಮನಸ್ಥಿತಿ...
ಇಂಥ ಮನಸ್ಥಿತಿಯ ನಡುವೆ ಕಸಿವಿಸಿಗಳ ನಡುವೆ ಬದುಕೋ ಸಾವೊ ತಿಳಿಯದ ಭ್ರಮೆ ಒಮ್ಮೊಮ್ಮೆ ನನ್ನ ಆವರಿಸುವುದುಂಟು...ಅದೆಷ್ಟೋ ರಾತ್ರಿಗಳು ಇಂತಹ ವಿಚಿತ್ರ ಮಾಯೆ ನನ್ನ ಆವರಿಸುತ್ತದೆ..ಅಲ್ಲಿ ನನ್ನ ಹೆಣವಿದೆ ಅದರ ಸುತ್ತ ಅತ್ಯಂತ ಅಪರಿಚಿತ ಮುಖಗಳು..ಮತ್ತು ಯಾರದ್ದೋ ಭಾಷಣ..ಯಾರದ್ದೋ ಕೂಗು ಅಳು, ಬದುಕಿದ್ದು ಸತ್ತಂತೆ ಬದುಕುತ್ತಿರುವ ಅತೃಪ್ತ ಆತ್ಮಗಳ ಶಾಪ,ಎಲ್ಲೋ ನೋಡಿದ ಗೀಷಾಳ ನೃತ್ಯ ಇತ್ಯಾದಿ..ಇತ್ಯಾದಿ...ಕನಸುಗಳು ಕಮ್ಮಿ ಆದರೆ ಇವೆಲ್ಲಾ ನನ್ನ ಎಚ್ಚರದ ಸ್ಥಿತಿಯಲ್ಲೇ ಒಮ್ಮೊಮ್ಮೆ ನಡೆದಂತೆ ಅನ್ನಿಸುವದುಂಟು... ದೇಹಕ್ಕೆ ಸಾವು ಖಚಿತ..ಅದು ನನ್ನ ಆಪ್ತ ಸ್ನೇಹಿತ..ಅವನ ಬರವಿಗೆ ನಾನು ಬದುಕಿದ್ದೇನೆ...ಹಾಗೆ ನಿರೀಕ್ಷೆಯಲ್ಲೂ ಒಂಥರದ ಕಸಿವಿಸಿ...
ತುಂಬಾ ಯೋಚಿಸುತ್ತೇನೆ, ನನ್ನ ಹೊತ್ತ ಈ ದೇಹ ಅಷ್ಟು ಹೊರ ಜಗತ್ತಿಗೆ ನನ್ನ ಹೆಸರಿಂದ ಪರಿಚಿತ ಈ ದೇಹ ಕೊರಡಾದ ಸಮಯ..ನನ್ನ ಹೂಳಬೇಕೆ..ನನ್ನ ಸುಡಬೇಕೆ? ಇಷ್ಟು ಧರ್ಮಗಳು ಜಾತಿಗಳು..ನನ್ನದು ಒಂದು ಧರ್ಮವಿದೆ..ಅದು ನಿಮ್ಮ ಯಾವ ಧರ್ಮಕ್ಕೂ ಸೇರದ ಸ್ವಾತಂತ್ರ್ಯ ಕೇವಲ ನನ್ನದೇ ಧರ್ಮ...ಅದು ಹೇಳುತ್ತದೆ..ಈ ದೇಹ ನಿಮ್ಮೆದುರಿರುವ ಈ ದೇಹ ಕೇವಲ ಕೊರಡು...ಅದಕ್ಕೆ ಬೇಕಾದ ಸುಖ ದುಃಖ ಶೀತ ಉಷ್ಣ ನವರಸಗಳು ಎಲ್ಲ ಉಂಡು ಶಾಂತವಾದ ದೇಹ..ಅದನ್ನ ಎದುರಿಗಿಟ್ಟು ಅಳುವುದು ಚೆನ್ನವೇ...?? ನನ್ನ ಎದುರು ಅಳಬೇಡಿ...ನನ್ನ ಪ್ರೀತಿ ಪಾತ್ರರೆಲ್ಲಾ ತುಟಿಯಲ್ಲಿ ಮುಗುಳ್ನಗು ಹೊತ್ತಿರಿ..ಸಾಧ್ಯವಾದರೆ ನಾನು ನಿಮಗೆ ಹಂಚಿದ ಕುಶಿಯ ಕ್ಷಣವನ್ನು ನೆನೆದು ನಕ್ಕುಬಿಡಿ, ನಿಮ್ಮನ್ನ ನೋಯಿಸಿದ್ದಿದ್ದರೆ ಶಪಿಸಿಬಿಡಿ...
ನನ್ನ ಇಷ್ಟಪಡದವರು ಬನ್ನಿ..ಯಾಕೆಂದರೆ ನಾ ನಿಮ್ಮನ್ನು ಎಲ್ಲರಿಗಿಂತ ಜಾಸ್ತಿ ಪ್ರೀತಿಸಿದವಳು...ನನಗೆ ನಿಮ್ಮ ದರ್ಶನ ಬೇಕು... ಎಲ್ಲರ ಮುಖದಲ್ಲೊಂದು ನಗು..ತುಂಬು ಮನಸ್ಸಿನ ಬೀಳ್ಕೊಡುಗೆ ಸಾಕು..ನನ್ನ ದೇಹವನ್ನ ಯಾವುದೋ ಆಸ್ಪತ್ರೆಯ ದ್ರಾವಣದಲ್ಲಿ ಮುಳುಗಲು ಬಿಡಿ..ಕೊಯಿಸಿಕೊಂಡು ಯಾವುದೋ ಔಷಧಿ ಕಂಡು ಹಿಡಿಯಲು ಉಪಯೋಗವಾಗಲಿ...
ಇಷ್ಟೆಲ್ಲ ಹೇಳಿಯೂ ಇವೆಲ್ಲ ಆಗದೇ ಉಳಿವ .ನನ್ನ ಸಾವು ಸುಲಲಿತವಾಗಿರುತ್ತದೆಯೋ ಇಲ್ಲವೋ ಎನ್ನುವ ಕಸಿವಿಸಿ...ಬಿಡಿ ಇದು ಹತಾಶೆ ಅಲ್ಲ, ಅಥವಾ ನನ್ನ ಕನ್ಫೆಶನ್ ಕೂಡ ಅಲ್ಲ,ನಾನಷ್ಟು ಯೋಚಿಸೊದಿಲ್ಲ..ಕಸಿವಿಸಿಯುಳಿದು ಬದುಕಿದೆ..ಮತ್ತೆ ನೀಲ ನಭ, ವಯಸ್ಸಾಗದ ಪ್ರಕೃತಿಯ ನಡುವೆ ಸುಕ್ಕಾಗುವ ನನ್ನ ಚರ್ಮ,ನರೆತ ಕೂದಲುಗಳು,ಮತ್ತು ಹರೆಯ ತುಂಬಿದ ಮನಸ್ಸು ಸದಾ ಹರಿವ ನಿಮ್ಮ ಸ್ನೇಹ ತೊರೆ....!!ಇದ್ದೇ ಇದೆಯಲ್ಲ... ನನ್ನ ಮೆಂಟಲೀ ರಿಟಾಯರ್ಡ್ ಮನಸ್ಥಿತಿ!!