ಈ ಕೆಂಪುದೀಪದ
ಬೀದಿಗಳಲ್ಲಿ
ನಾನು ದಿನಾಲೂ ಓಡಾಡುವೆ
ಬತ್ತಿದ ಪುಟ್ಟ ಕೈಗಳ
ಬಾಲಕಿ
ತನ್ನಿರವಿನ ಅರಿವಿಲ್ಲದೆ
ಅಮ್ಮನ
ಧಂಧೆ ನೋಡುತ್ತಾ
ತನ್ನಷ್ಟಕ್ಕೆ ಒಳ ಲಂಗಕ್ಕೆ
ಕೈ
ಹಾಕುವಾಗುಮ್ಮೆ ತಣ್ಣಗೆ
ಬೆಚ್ಚಿದ್ದೇನೆ,
ನನ್ನ ಕೈಗಳಲ್ಲಿದ್ದ ಟೀ
ಲೋಟಗಳಂತೆ
ಬಿಸಿ ಬಿಸಿ ಎಂದು ಬದುಕ
ಮಾರುವದನ್ನು
ಕಾಣುತ್ತಲೇ ಇರುವೆ
ತಂತಿ ಮೇಲಿದ್ದ
ಕಾಗೆ ಗುಬ್ಬಿಯನ್ನ ಕಚ್ಚದಿರುವುದ
ಕಂಡು ಬೆರಗಾಗುತ್ತೇನೆ,
ಅಲ್ಲಿ ನಗರದ ದೊಡ್ದ ಹೋಟೆಲುಗಳಲ್ಲಿ
ಗಂಡನಿಲ್ಲದ
ನೀರವ ಮಧ್ಯಾಹ್ನಗಳಲ್ಲಿ
ದೊಡ್ಡ ಕುಂಕುಮದ ಪತಿವ್ರತೆಯರು
ಕಾಮಸೂತ್ರದ ಜಾಹೀರಾತಿನ
ಹೆಂಗಳೆಯರಾಗುವುದು
ನಿಜವೇ? ಇಲ್ಲಿ
ಕೆಂಪು ದೀಪದಡಿಯಲ್ಲಿ
ನಿಂತು ಇನ್ನೂ
ಮೀಸೆ ಮೂಡದ ನನ್ನ
ಕಣ್ಣು ಮಿಟುಕಿಸಿ ಎದೆ
ತೆರೆಯುವ ಹೆಣ್ಗಳು
ಇದು ಬದುಕಿಗಾಗಷ್ಟೇ
ಎನ್ನುವ ನಿರಾಳತೆಯಲ್ಲಿದ್ದರೆ
ಗಂಡನೊಡನೆ ರಾತ್ರಿ
ಎದೆಯ ಗಾಯ
ಮುಚ್ಚಿಟ್ಟು
ಮಿಥುನದಲ್ಲಿ ತೊಡಗುವ
ದೊಡ್ಡ ಕುಂಕುಮದ
ಪತಿವ್ರತೆಯರಿಗೆ
ಯಾವುದರ ಚಿಂತೆ?
hey.. nice poem.
ReplyDeleteನಿತ್ಯ-ಸುಮಂಗಲಿಯರ ಬದುಕಿನ ಇಣುಕು ನೋಟವನ್ನು ಅತ್ಯಂತ ಕ್ಲುಪ್ತವಾಗಿ ಸೆರೆಹಿಡಿದಿದ್ದೀರಿ....
ReplyDeleteಮನಕಲಕುವ ಕವಿತೆ