Tuesday, October 9, 2012

ವಿದಾಯ

ನೀ ಮಾತು ಬಿಟ್ಟ  ಕ್ಷಣದಿಂದ
ನಾ ಮೌನಿಯಾದೆ
ನನ್ನ ಜಗತ್ತು ಸ್ತಬ್ಧವಾಯ್ತು
ಎನ್ನಲಾರೆ
ನಿನ್ನ ಮಾತು ನಿಂತ ಮರು ಗಳಿಗೆಯೆ
ಹೃದಯ ಅರಳಿತು
ಹೊಸಾ ಕನಸೊಂದು ಮರಳಿತು

ಈ ದಡದಿಂದ ಆ ದಡಕ್ಕೆ ಮತ್ತೆ ನಿಲ್ಲದ ಪಯಣ
ನಡುವೆ ಆಸೆಗಳ ಮಹಾಪೂರ
ನಿನ್ನ ಕಂಗಳಲ್ಲಿ ಸುಖದ ಕೈ ಹುಟ್ಟು
ಹುಡುಕುವಾಸೆ ಬಿಟ್ಟು ಬಿಟ್ಟಿದ್ದೇನೆ
ಕನಸ ದೋಣಿಯನ್ನೇರಿ ಒಂಟಿಯಾಗಿ
ದಿಗ್ವಿಜಯಕ್ಕೆ ಹೊರಟಿದ್ದೇನೆ

ಸಾಧ್ಯವಾದರೆ ಒಮ್ಮೆ ನಿಂತು ಹಾರೈಸಿಬಿಡು
ವರ್ತಮಾನದಿಂದ ಭವಿಷ್ಯಕ್ಕೆ ನಿನ್ನ ಕ್ರೂರ ನಡತೆಯ
ನೆನಪುಗಳ ಕೊಂಡೊಯ್ಯುವಾಸೆ ಇಲ್ಲ
 ಈಗ ನನ್ನಲ್ಲಿ ನಿನಗಾಗಿ ದ್ವೇಷ ಕೂಡ ಇಲ್ಲ

ನೀ ನನ್ನ  ಭೂತಕಾಲಕ್ಕೆ ಸೇರಿದವನಾದ್ದರಿಂದಲೇ
ಮಾತು ಬಿಟ್ಟ ಕ್ಷಣದಿಂದ
ಆಪ್ತನಾದೆ!!

5 comments:

  1. ಸಿಸ್ಟರ್ ...ನಿಮ್ಮ ಕವನದಲ್ಲಿ ವಿದಾಯ ದಲ್ಲೂ ಹೊಸ ಕನಸು ಹೊಸ ಚಿಗುರು ಅಭಿವ್ಯಕ್ತಗೊಂಡಿದೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು

    ReplyDelete
  2. ಕವಿತೆ ಚೆನ್ನಾಗಿದೆ. ಶುಭಾಶಯಗಳು.

    ReplyDelete