Sunday, January 6, 2013

ಸಂಶಯ


ನೀ ಕರೆದದ್ದು ನನಗೆ ಕೇಳಲಿಲ್ಲವೇ!!??
ಅದಕ್ಕೇ ನೋಡು,
ದಾಟಿ ಯುಗಾಂತರಗಳ ಪಾಡು
ಆಡಿ ನೂರಾರು ಪಾತ್ರಗಳ ಮಾತು
ಬೆಚ್ಚಗೆ,ಬೆಚ್ಚದಂತೆ ಹೊದ್ದು
ಮಲಗಿದ್ದ ಮಾಯೆಗಳ ಮುಕ್ಕಿ
ಬಂದೇ ಬಿಟ್ಟೆ

ಅದೋ ಅಲ್ಲಿ! ಇಲ್ಲಿ!
ಎನ್ನುತ ಹಿಡಿಯ ಬರುವ
ಸಾವಿರಾರು ಆಮಿಷಗಳ ದಾಟಿ
ಮನದ ವೇಗದೆಲ್ಲೆಯ ಮೀರಿ
ನಿನ್ನೆಡೆಗೆ ಹೀಗೆ ಬಂದೇ ಬಿಟ್ಟೆ

ನಿನ್ನ ಕೂಗಿಗೆ ಅಲ್ಪಗಳ ಮೆಟ್ಟಿ
ಭೂಮದ ಕಲ್ಪನೆಯ ಕಟ್ಟಿ
ಮಕಾಡೆ ಮಲಗಿದ್ದ ಅಹಿಂಸೆಯ ಅಶ್ವವ ತಟ್ಟಿ
ಕಾಲಾಂತರಗಳ ಅಳಿಸಿ
ಓ ಇದೋ ಬಂದೇ ಬಿಟ್ಟೆ ಬುದ್ಧ!!
ನಿಜವಾಗಲೂ ಹೇಳು...
ನೀನೆ ಕರೆದದ್ದಾ??



7 comments:

  1. ವಾರೇವಾ, ಯುಗಾಂತರಿಸೋ ನಿಮ್ಮ ಕಾವ್ಯ ಪ್ರತಿಭೆ ಖುಷಿ ಹುಟ್ಟಿಸುತ್ತದೆ.

    ಬುದ್ಧ ಕರೆದದ್ದು ನಿಜ ಕವಿಯತ್ರೀ, ಆತನ ದನಿ ಆಲಿಸುವ ನಿರ್ಮಲ ಮನಸಂತೂ ತಮ್ಮದು.

    ReplyDelete
  2. ನಿನ್ನ ಕೂಗಿಗೆ ಅಲ್ಪಗಳ ಮೆಟ್ಟಿ
    ಭೂಮದ ಕಲ್ಪನೆಯ ಕಟ್ಟಿ
    ಮಕಾಡೆ ಮಲಗಿದ್ದ ಅಹಿಂಸೆಯ ಅಶ್ವವ ತಟ್ಟಿ
    ಕಾಲಾಂತರಗಳ ಅಳಿಸಿ
    ಓ ಇದೋ ಬಂದೇ ಬಿಟ್ಟೆ ಬುದ್ಧ!!
    ನಿಜವಾಗಲೂ ಹೇಳು...
    ನೀನೆ ಕರೆದದ್ದಾ??

    vaah !!

    Soooper lines.... !!

    ReplyDelete
  3. ಚೆನಾಗಿದೆ..ಇಷ್ಟವಾಯ್ತು :)

    ReplyDelete
  4. ಸುಂದರವಾದ ಸಾಲುಗಳು.....

    ReplyDelete
  5. ಕರೆದಾಗ ಬರುವೆ...ಬಂದಾಗಲೆಲ್ಲ ಕರೆವೆ...ಇದುವೇ ಯುಗಯುಗದಲ್ಲೂ ನಡೆದ ಪವಾಡ ಸದೃಶ ಘಟನೆಗಳು..ಅದನ್ನ ಎಳೆದು, ಬಳಿದು ಬಿಡಿಸಿದ ಪರಿ ಇಷ್ಟವಾಗುತ್ತದೆ.

    ReplyDelete
  6. ಚಂದದ ಕವಿತೆ ಇಷ್ಟವಾಯಿತು , ಮತ್ತಷ್ಟು ಬರಲಿ, ಓದಲು ನಾವಿದ್ದೇವೆ.

    ReplyDelete