Wednesday, March 13, 2013

ಗಂಧರ್ವ ಮತ್ತು ಅತ್ತರು

ಬರೆದ ಕವನಗಳಲ್ಲಿ ಸೂಸುತ್ತಿರುವುದು
ಕೇವಲ ನಿನ್ನ ನೆನಪುಗಳ ಪರಿಮಳ
ನನ್ನ ಕವನದ ಸಾರವೆಲ್ಲ ನಿನ್ನ ನೆನಪುಗಳ
ಒಟ್ಟೂ ಸಂಕಲನ!!

ನಿನ್ನೆದೆಯ ಕಡಲ ತಡಿಯ
ಮರಳ ರಾಶಿಯಲ್ಲಿ
ನನ್ನ ಒದ್ದೆಯಾದ ಹೆಜ್ಜೆ
ಗುರುತುಗಳ
ಹುಡುಕುವಾಸೆ ಹುಡುಗಾ!!

ಇಂದೇಕೆ ಸುಪ್ತ ಸಾಗರಕೆ ಈ ಅಬ್ಬರ
ನೂರು ಬಯಕೆಗಳ ಉಬ್ಬರ,
ಹುಣ್ಣಿಮೆಯೂ ಇಲ್ಲ ಎಂದಾಗ
ಕಂಡದ್ದು ನಿನ್ನ ಮುದ್ದು ಮುಖ!!

ಅಲೆಗಳೆಲ್ಲ ಬಂದು
ನನ್ನ ತೋಯಿಸುವಾಗ
ಬೊಗಸೆಯಲ್ಲಿದ್ದ
ಕಪ್ಪೆ ಚಿಪ್ಪಲ್ಲಿತ್ತು
ನೀ ಕೊಟ್ಟ ಮುತ್ತು!!

ಹೂಗಳ ತುಟಿಯಂಚಿನಲ್ಲಿ
ತುಳುಕಿದ ಮಧುವೆಲ್ಲ
ನಿನ್ನ ತುಂಟತನವ ನುಡಿದಿರಲು
ಮೌನದ ಬಾಹುಗಳಲ್ಲಿ ನಾನು ಬಂಧಿ!!

ಹೀಗೆಲ್ಲಾ ಮೈಮರೆತ ಮನಸಿಗೆ
ನಿನ್ನ ಸಾಕ್ಷಾತ್ಕಾರ
ಆದದ್ದು ಗಂಧರ್ವ
ಗೀತೆಯಂತೆ ನಿನ್ನ ದನಿ
ಕೇಳಿದಾಗಲೇ

ಹೇಳು ದೇವರ ಸ್ವಂತ ನಾಡಿನವನೇ!!

ದೂರದೂರಿನ ಗಾಳಿಯಲ್ಲಿ ಹೊತ್ತ
ನಿನ್ನ ಗಂಧವ ಕುಡಿದ
ಮನಸಿಗೆ ಮಾಯದ ಮತ್ತೇರಿದೆ,
ಮನೋವೇಗದಲ್ಲಿ ನಿನ್ನೂರ ತಲುಪಿ
ನಿನ್ನ ಕಣ್ಣಲ್ಲಿ ಕಣ್ಣನಿಡುವ ಹೊತ್ತು
ಕೇಳುವಾಸೆ
ಹೇಳು,
ನನ್ನ ಊರಲ್ಲಿ ಪ್ರೇಮದ ಅತ್ತರು
ಸೂಸುವ
ನಿನ್ನಂಥ
ಗಂಧರ್ವರಿಹರೇ??


11 comments:

  1. ಗಂಧರ್ವರ ಪರಿಮಳ ಮಾರು ದೂರವಿಲ್ಲ ಓದುತ್ತ ಹೋದ ಹಾಗೆ ಸಿಗುತ್ತದೆ. ನೀವು ಪದಗಳನ್ನು ಹೆಣೆದಿರುವ ಶೈಲಿ ಇಷ್ಟವಾಯಿತು

    ಗಾಳಿಯಲ್ಲಿ ಬೆರೆತ ಮಧುರ ಪರಿಮಳ
    ಹರಡುತ್ತದೆ ತನ್ನ ಒಡಲನ್ನು ಎಲ್ಲೆಲ್ಲಿಯೂ
    ಮೇಡಂ ಅವರ ಲಾಲಿತ್ಯ ತುಂಬಿದ ಪದಗಳು
    ಬೆರೆಸುತ್ತದೆ ಕೌತುಕದ ಭಾವಗಳನ್ನು ಓದಿದ ಪ್ರತಿಘಳಿಗೆಯಲ್ಲೂ
    ಸುಂದರ ಕವನದ ಸಾಲುಗಳು ಮೇಡಂ.

    ReplyDelete
    Replies
    1. sir..hIge nana blagige baruttiri..nimma protsaahakke chiraruNi

      Delete
  2. Tumba sundaravagide bhavanegalu. Nanna madhura nenapugalanna marukalisidavu. Hradhaya tumbi bantu.

    ReplyDelete
    Replies
    1. tumbaa dhanyavaadagaLu hIge erali nimma protsaaha

      Delete
  3. ಮೈಮರೆತ ಮನಸಿಗೆ ಗಂಧರ್ವ ಗೀತೆಯ ಸಾಕ್ಷಾತ್ಕಾರ, ವಾವ್
    ಸುಂದರ ಭಾವ ಮತ್ತು ಪದಗಳ ಜುಗಲ್ಬಂದಿ!!!
    ಇಷ್ಟವಾಯ್ತು ಕವನ, ಶಮ್ಮಿ

    ReplyDelete
  4. "ಹೇಳು ದೇವರ ಸ್ವಂತ ನಾಡಿನವನೇ!!" ಮನಸಿಲಾಯೋ....

    ಮೊದಲು ನನಗೆ ನಿಮ್ಮಂತೆ ಸರಳವಾಗಿ ಬರೆಯುವ ಸಿದ್ಧಿಯನ್ನು ಭಾಗವಂತ ಕರುಣಿಸಬೇಕು ಕವಿಯತ್ರಿ. ಭಾಷೆಯ ಬಳಕೆ ಮತ್ತು ಪದಗಳ ಲಾಲಿತ್ಯವು ಪುಳಕಗೊಳಿಸುವ ಮತ್ತು ಒಳ ಹೂರಣ ತುಂಬುವಾಗ ಭಾವ ರಸಾಯನ ಬೆರೆಸುವ ಕಲೆ ನಿಮಗೆ ಗೊತ್ತಿದೆ.

    "ಮನೋವೇಗದಲ್ಲಿ ನಿನ್ನೂರ ತಲುಪಿ
    ನಿನ್ನ ಕಣ್ಣಲ್ಲಿ ಕಣ್ಣನಿಡುವ ಹೊತ್ತು" ನಮಗೂ ಇಂತಹ ಶಕ್ತಿ ಇದ್ದರೇ......

    ReplyDelete
    Replies
    1. saar tumbaa dhanyavaadagaLu...tuMbaa doDDa maataMdiri..naaninnu akshara prapaMchada baale..nimma haaraike erali

      Delete
  5. ಇಷ್ಟವಾಯಿತು ಭಾವ ಲಹರಿ....

    ReplyDelete
    Replies
    1. puTTa geLeyaa hIge baruttiri nanna blaagige nimma prOtsaahavirali

      Delete
    2. puTTa geLeyaa hIge baruttiri nanna blaagige nimma prOtsaahavirali

      Delete