Sunday, June 30, 2013

ಮುಖಪುಸ್ತಕದ ಬರಹಗಳ ಸಂಗ್ರಹ

ಮುಖ ಪುಸ್ತಕದಲ್ಲಿ ಪ್ರಕಟವಾದ ಕೆಲ ಆಯ್ದ ಬರಹಗಳು....

ಮುಂಜಾವು ಕಣ್ ತೆರೆಯುವ ವೇಳೆ
ಹಾಸಿದ್ದನವ ನನ್ನ ಕನಸಿನ ದಾರಿಗೆ ಹೂವಿನ ಹಾಸಿಗೆ

ಮನದ ಮೂಲೆಯಲ್ಲೆಲ್ಲೋಆರಳುತಿಹುದು 
ನೋಡು ಶ್ಯಾಮ ನಿನ್ನ ನೆನಪಿನ ಮಲ್ಲಿಗೆ

ಕೊಳಲ ಹಿಡಿದಂತೆ ನನ್ನ ಹಿಡಿದು
ನಾದ ಹೊಮ್ಮಿಸಿದ ಕ್ಷಣಗಳು

ನೋಡಿ ನಮ್ಮ ಉಕ್ಕೇರುತ್ತಿತ್ತು
ಹೊಟ್ಟೆ ಉರಿಯಲಿ ಯಮುನೆಯ ತೆರೆಗಳು

ತಾರೆಗಳು ಮಿನುಗದ
ರಾತ್ರಿಗಳಲ್ಲಿ ನೀನೆ ನನ್ನ ಚಂದಿರ

ನಿನ್ನ ತುಟಿಗಳ ರಾಗ ಲೀಲೆಗೆ
ನನ್ನ ದೇಹ ನಾದ ಮಂದಿರ

ನೀನು ನಾನು ನಾನು ನೀನು
ಕಳೆದ ಕ್ಷಣಗಳವು ಜೇನು


ಕೇಳುತಿಹುದು ರಾಧ ಹೃದಯ
ಮತ್ತೆ ಎಂದು ಬರುವೆ ನೀನು??ಎಷ್ಟೊಂದು ರಾಗಗಳು ಗೆಳೆಯಾ..

ನನ್ನ ಬದುಕ ಭೂಮಿಯ ತುಂಬಾ ನೀ ಬೆಳೆದದ್ದು..

ಚಂದ್ರ ಕೌಂಸವೆ??

ನೀ ಇಲ್ಲದ ರಾತ್ರಿಗಳಲ್ಲಿ

ನನ್ನ ಖಾಲಿ ಏಕಾಂತದ ಮೇಘ ಮಲ್ಹಾರ...

ನಿನ್ನ ತೋಳ ಬಂಧನದಲ್ಲಿ ನಿಧಾನವಾಗಿ ನಾನಾಗಿ

ಕರಗುವಾಗ ನುಡಿದದ್ದು ಮಂದ್ರ

ಒಡಲ ಬಳ್ಳಿಯಲ್ಲೊಂದು ಸುಂದರ ಮೊಗ್ಗು ನಿನ್ನ ಒಲುಮೆಯ

ಕುರುಹು ಪಂಚಮ..ಮತ್ತೊಂದು ಷಡ್ಜ..

ಎಲ್ಲ ಅರಿತೆವು ಎನ್ನುವಾಗ ಎದೆಯಲ್ಲಿ ಒಂದಷ್ಟು ನೋವು

ವಿರಹದ ಅಸಹನೀಯ ಕಾವು

ದೀಪಕವೆ??

ನೋಡು ವರುಣನಿಲ್ಲದ ಆಗಸದಲ್ಲಿ ನಾನು ನಿರೀಕ್ಷೆಯ

ಹೊತ್ತ ಮಾಲಕೌಂಸ!!

ಎಷ್ಟೊಂದು ರಾಗಗಳು ಗೆಳೆಯಾ ಭಾವಗಳಂತೆ...
ನಿನ್ನ ಪ್ರೇಮದ ಹಟಕ್ಕೆ ಬಿದ್ದು

ಆಕಾಶದ ಅಷ್ಟು ತಾರೆಗಳ ಬಾಚಿ ತಂದೆ


ನಿನ್ನ ಕಂಗಳ ಹೊಳಪಿನ ಮುಂದೆ


ನಕ್ಷತ್ರಗಳೂ


ಹೊಳೆಯಲಿಲ್ಲ


ಎಂದ ನನ್ನ


ಹಟಮಾರಿ ಹುಡುಗ!!
ಹುಡುಕುತಿಹೆ ನಿನ್ನ..

ಬದುಕಿನ ಹಾದಿಯಲಿ ತಂದತಹ ಸುಖದ ಕೆಲಕ್ಷಣಗಳಲ್ಲಿ

ಜೊತೆಯಾಗಿ ಬಂದ ದು:ಖದ ನೆರಳಿನಲ್ಲಿ

ಇದ್ದರೂ ಇಲ್ಲದಂತಿರುವ ಸ್ನೇಹದ ಆಸರೆಯಲ್ಲಿ

ಮರೆತು ಹೋದ ಕಳೆದು ಹೋದ

ಹಲವಾರು ಮುಖಗಳಲ್ಲಿ

ಹೇಳು ಎಲ್ಲಿರುವೆ ನನ್ನ ಶ್ಯಾಮಾ?

ಎಲ್ಲೆಲ್ಲು ಕಾಣದಿರುವೆ..ಸೋತಿರುವೆ..

ಬೆಳಕೊಮ್ಮೆ ನೀಡು..ಅರಳಿದ ಹೂಗಳಲ್ಲು,ಮಗುವಿನ ನಗುವಿನಲ್ಲು, ಆಸೆ ತುಂಬಿದ ಕಂಗಳಲ್ಲು 

ಕಂಡೆ ಶ್ಯಾಮ ನಿನ್ನ ಇರುವನ್ನು...


ನನ್ನ ಮಂಜು ತೋಯಿಸಿದ ಕೆನ್ನೆಯ ಮೇಲೆ ಬಿಸಿಲಿನ 


ಹಿತವಾದ ಸ್ಪರ್ಶದಲ್ಲೂ 


ಒಂಟಿಯಾಗಿ ನಡೆವಾಗ ಮೂಡಿದ


ಹೆಜ್ಜೆಗುರುತಿನಲ್ಲೂ


ಕಂಡೆ ಶ್ಯಾಮ ನಿನ್ನೊಡನಿರುವ 


ನನ್ನ ಬದುಕಿನ ಗತಿಯನ್ನು ...
ಚುಮು ಚುಮು 

ಚಳಿಯ


ಈ ಸುಂದರ


ಮುಂಜಾವಿನಲಿ


ನನ್ನೆದೆಯ 


ತೊಟ್ಟಿಲಲಿ ಮಲಗಿದ್ದ


ನಿನ್ನ ನೆನಪುಗಳ 


ಮಗುವನ್ನ


ಚಿವುಟಿ 


ಎಬ್ಬಿಸಿದವರಾರು??

(ಅದು ನೀನೆ ಅನ್ನೋದು ನನ್ನ ಗುಮಾನಿ!!)
ಜೀವನದ ಯಾತ್ರೆಯಲ್ಲಿ ದು:ಖದ ಹಾದಿ

ಸವೆ ಸವೆದು

ಸುಖ ಬಂದದ್ದು ಗೊತ್ತಾಗುವ ಹೊತ್ತಿಗೆ

ಸಾವು ಕರೆದಿತ್ತು

ನಿನ್ನ ಕಂಗಳಲ್ಲಿ ಪ್ರೇಮವ ಹುಡುಕಿ ಮನವ ಸಂತೈಸಿಕೊಳ್ಳಲು

ದ್ವೇಷ ತಿರಸ್ಕಾರದ ಹಾದಿಯಲ್ಲಿ

ನೀನು ಮುಂದೆ ಹೋಗಿಯಾಗಿತ್ತು..ನಾತಿಚರಾಮಿ ಎಂಬ

ಕೊಟ್ಟ ಮಾತನ್ನೂ ಮರೆತು

ನಾನೀಗ ಬಯಲಲ್ಲಿ ನಿಂತ ಒಂಟಿ ಮರ

ಹಕ್ಕಿಗಳಿಗೆ ಆಶ್ರಯವನ್ನೂ ನೀಡಲಾಗದ

ಬರಡು ಬಾಳು ನನ್ನದು..
ನಾ ನಿನಗೆ ಅಪರಿಚಿತ..

ಕೈಗೆ ಎಟುಕದ ಚಂದಿರ 


ಎನ್ನದಿರು....


ಹಾಲಕಣಿವೆಯಲ್ಲಿ..


ನನ್ನ ಪ್ರಕಾಶಕ್ಕೆ ನಾನೆ ಸಾಟಿ 


ಗೆಳೆಯಾ..


ನಾ ನಿನಗೆ ನಿಲುಕದ


ನಕ್ಷತ್ರ..
ಪ್ರೀತಿಸದಿರು ಮನಸೇ!!

ಬದುಕ ಹಾದಿಯಲ್ಲಿ

ನೀ ನೆಟ್ಟ ತಂಪಾದ

ಆಸೆ ಕನಸುಗಳ ಗಿಡವ ಕಿತ್ತೆಸೆದು

ನಡು ನೀರಿನಲ್ಲಿ ನಿನ್ನನೆಸೆದು

ಬೇರೆ ದೋಣಿಯ ಹತ್ತಿ ಹೋದವ

ಬಹಳ ನೆನಪಾಗುತ್ತಾನೆ

ನಿನ್ನ ಕಣ್ಗಳಿಂದಿಳಿವ 

ನೀರಾಗುತ್ತಾನೆ!!

೧೦
ನೀ ಆಡದ ಮಾತುಗಳ

ನಾ ಕೇಳಿದಂತೆ

ಭಾವಿಸಿದೆ

ನೀ ಕೊಡದ ಭರವಸೆಗಳ 

ಕನಸುಗಳ ಹೊಳೆಯಲ್ಲಿ

ಮೀಯಿಸಿದೆ

ನನ್ನ ಅಸ್ತಿತ್ವವ ಕೊಂದು

ನನ್ನ ಆಸೆಗಳ

ಗೋರಿಯ ಮೇಲೆ

ನೀ ಇಡುವ ಹೂ ಗುಚ್ಚ

ಯಾರಿಗಾಗಿ ಗೆಳೆಯಾ??
3 comments:

 1. ಚೆಂದದ ಸಾಲುಗಳು ಶಮ್ಮಿ ಅವರೆ.. ನಿಮ್ಮ ಬ್ಲಾಗಿಗೆ ಇದೇ ಮೊದಲ ಭೇಟಿ.. ಇಷ್ಟವಾಯ್ತು!

  ReplyDelete
 2. ಇದನ್ನೇ ಮಹೀ ಅವರೇ ನಾನು ಹೇಳುತ್ತಾ ಬಂದದ್ದು, ಫೇಸ್ ಬುಕ್ಕಿನಲ್ಲಿ ಕವನಗಳು ಹಾಕಿದ್ದು ಒಳ್ಳೆಯದೇ ಆದರೆ, ಓದುಗನಿಗೆ ತಟ್ಟನೆ ಸಿಗಲು ಅವು ನಿಮ್ಮ ಬ್ಲಾಗಿನಲ್ಲೇ ಪ್ರಕಟವಾಗಬೇಕು ಎನ್ನುವುದು. ಈಗ ಸಂತೋಷವಾಯಿತು.

  "ನಾನೀಗ ಬಯಲಲ್ಲಿ ನಿಂತ ಒಂಟಿ ಮರ" ತುಂಬಾ ಅರ್ಥಗರ್ಭಿತ ಸಾಲು.

  ReplyDelete
 3. ಹೃದಯಸ್ಪರ್ಷಿ ಸಾಲುಗಳು ಮಹಿ ಅವರೇ, ತುಂಬ ಚೆನ್ನಾಗಿದೆ :)

  ReplyDelete