ನಿನ್ನ ಕಣ್ಣುಗಳಿಂದ ಜಾರಿದ ಬಿಂದುವಿಗೆ ಕೊಡದಿರು
ನನ್ನ ಹೆಸರು
ನಿನ್ನ ಸಂತಸಕ್ಕೆ ಸಾಕ್ಷಿ ನಿನ್ನ
ಈ ಬಿಸಿಯುಸಿರು
ನೀರವ ರಾತ್ರಿಗಳಲ್ಲಿ
ನಿನ್ನ ನೆನಪಲ್ಲಿ ನಾನಷ್ಟು
ತಾರೆಗಳ ನೋಯಿಸಿರುವೆ
ನಿನ್ನ ಹೆಸರ ಬೆಳದಿಂಗಳಿಗೆ ಇಟ್ಟು
ನನ್ನ ಕಣ್ಣ ಇಬ್ಬನಿಯಲ್ಲಿ ತೋಯಿಸಿರುವೆ
ಇಂದು ಬೆಳದಿಂಗಳಿಗೊಂದು ಉದ್ವೇಗವಿದೆ
ನಿನ್ನ ಕನಸಿನ ಮರಕ್ಕೆ ಹಬ್ಬಿದ ನನ್ನ ಆಸೆಗಳ
ಹೂ-ಬಳ್ಳಿಯಿದೆ
ಒಂಟಿ ನೀನಲ್ಲ
ಒಂಟಿ ನಾನಲ್ಲ
ನಡುವೆ ಪಿಸುಗುಟ್ಟುವ ಒಂಟೊಂಟಿ
ಏಕಾಂತವಿದೆ
ನಾ ಬಲ್ಲೆ ಬೆಳಗಾದರೆ ನಡುವೆ ನನ್ನ
ನಿನ್ನ ನಡುವೆ ತೀರಗಳ ಅಂತರವಿದೆ
ಈ ದಿನ ಈ ಕ್ಷಣ
ದೂಡು ಎಲ್ಲ ಅಂತರಗಳ
ನನ್ನ ಭಾವಗಳ ಸಾಗರ ಉಕ್ಕೇರಲಿ
ಈ ದಿನ ನನ್ನ ಮನದ ಕಡಲಿಗೆ ನಿನ್ನ
ಬಯಕೆಗಳ ಚೆಲ್ವ ಬೆಳದಿಂಗಳಿಳಿಯಲಿ
ನಿನ್ನ ಬಾಹುಗಳ ಬಂಧನದಿ
ಭದ್ರ ಕೋಟೆಯಲ್ಲಿ
ಏಳು ಸುತ್ತಿನ ಮಲ್ಲಿಗೆಯು
ಅರಳಲಿ....
ನಿಮ್ಮ ಏಳುಸುತ್ತಿನ ಮಲ್ಲಿಗೆಗೆ ನಮ್ಮ ಶುಭಾಶಯಗಳು ಶಮ್ಮಿ.. ಬಹಳ ಚನ್ನಾಗಿ ಮೂಡಿ ಬಂದಿದೆ ಕವನ... ಅಜ್ಞಾತವಾಸದ ನಂತರ ಹಿಡಿತ ಬಿಟ್ಟಿಲ್ಲ ಅದೂ ಒಂದು ವಿಶೇಷವೇ.. ಇನ್ನು ಭೇಟಿ ಆಗುತ್ತಿರಲಿ...ನಿರಂತರ
ReplyDeletechennagide yaake nillisidri
ReplyDeleteಇಷ್ಟವಾಯಿತು. ಬರೆಯುತ್ತಿರಿ. ಅರಳಿದ ಮಲ್ಲಿಗೆ ಮತ್ತೆಂದೂ ಮುದುಡದಿರಲಿ
ReplyDeleteವಾಹ್ !!
ReplyDeleteಬಹಳ ಸುಂದರವಾಗಿ ಬರೆದಿರುವಿರಿ.....
ಮುಂದುವರೆಯಲಿ......
Nice one...
ReplyDelete