ಒಮ್ಮೊಮ್ಮೆ ಮನಸು ಯೋಚಿಸುವ ವಿಷಯಗಳು ಕವನಗಳಾಗಿ ಬಂದರೆ??ಕೆಳಗಿನ ಕವನಗಳು ಹಾಗೆಯೇ ಕೆಲವೊಂದು ಭಾವಗಳ ಅನಾವರಣ..ನಿಮಗೂ ಹೀಗನ್ನಿಸಿರಬಹುದೆ??
ಎದೆಯ ಅಗ್ನಿಕುಂಡದಲ್ಲಿ
ಚಿಗಿದು ಚಿಮ್ಮುವ ಉರಿಯ ಜ್ವಾಲೆ
ಜಗದ ಎಲ್ಲ ನಿಯಮ ಮೀರಿ
ಸುಡುವ ಆಸೆ ನಿರಾಸೆ ವಿರಹ!!
ಸುರಿದ ಮುತ್ತು ಜೇನ ಸವಿಯ
ನಮ್ಮ ತೋಳ ಸೆರೆಯಲ್ಲಿ
ನಲುಗಿದಂಥ ಹೂಗಳ ಕಥೆಯ
ನೆನೆದು ಮನವು ಅಳುತಿದೆ
ಕಾಲವನ್ನು ಹಿಂದೆ ತಳ್ಳಿ
ನಿನ್ನ ಜೊತೆಗೆ ಕಳೆದ
ಕ್ಷಣಗಳ ಕದ್ದು ಶಾಶ್ವತ
ಹಿಡಿಯ ಬಯಸಿದೆ
ತೀರದ ದೂರದ ಮೋಹ ವಿರಹ!!
ಬೇಕೊಂದು ಕಿಟಕಿ
ಎಲ್ಲ ಬಂಧನಗಳ ಕಳಚಿ ದೂರ ದೇಶಕೆ
ಹಾರುವುದೆ ಮನಸು?
ದೇಹದ ಅರಿವಿಲ್ಲದ ಯಾವುದೋ
ಅಮೂರ್ತ ಭಾವವೊಂದು
ಕಾಡುತಿದೆ
ನಾನು
ಈ ಜಗತ್ತು
ಸಕಲ ಚರಾಚರಗಳು
ಭಾವನೆಗಳೇ ಇಲ್ಲದ ಬೆಂಗಾಡಿನಂತೆ
ಅನಿಸುತ್ತಿದೆ
ಈ ಚಕ್ರವ್ಯೂಹದ ಸುಳಿಗೆ ಸಿಕ್ಕು
ಕಾಣೆಯಾಗುವ ಮುನ್ನ
ನನ್ನ ನಾನು ಹುಡುಕಬೇಕು
ಮತ್ತೆ ಹೊಸತನ ಪಡೆಯಬೇಕು
ಮರಳಿ ಬರದ ವಸಂತಗಳ ಎಣಿಸಿ
ಹಣದ ಮಾಯೆಯ ಹಿಂದೆ
ನನ್ನತನವ ಬೆತ್ತಲಾಗಿಸಿದ
ಈ ಜಗತ್ತಿನ ಅರಿವು ಏಕೆ ಬೇಕು??
ನನ್ನ ಒಳಮನದೊಳಗೊಂದು
ನೀನಿತ್ತ ಅರಿವಿನ ಕಿಟಕಿಯಿರಲಿ
ಅಷ್ಟೇ ಸಾಕು!!
ವಿರಹ...
೧
ನನ್ನ ಮನದ ಶರಧಿಯಲ್ಲಿ
ನಿನ್ನ ನೆನಪಿನಲೆಯ ವಿರಹ
ಕಾದು ಕಾದು ದಡಕೆ ಬಡಿದು
ಮೊರೆವ ತೆರದಿ ಆಳ ಶರಧಿ ವಿರಹ
ನಿನ್ನ ಮಾತು ನಿನ್ನ ನೋಟ
ನಿನ್ನ ಜೊತೆಗಿನಾಟ ಬೇಟ
ಕೂಡಿ ಕಳೆದ ಪ್ರೇಮ ಕೂಟ
ತಣಿಯದಾದ ದಾಹ ವಿರಹ
ಎದೆಯ ಅಗ್ನಿಕುಂಡದಲ್ಲಿ
ಚಿಗಿದು ಚಿಮ್ಮುವ ಉರಿಯ ಜ್ವಾಲೆ
ಜಗದ ಎಲ್ಲ ನಿಯಮ ಮೀರಿ
ಸುಡುವ ಆಸೆ ನಿರಾಸೆ ವಿರಹ!!
೨
ನಮ್ಮ ತುಟಿಯ ಅಂಚುಗಳಲಿಸುರಿದ ಮುತ್ತು ಜೇನ ಸವಿಯ
ನಮ್ಮ ತೋಳ ಸೆರೆಯಲ್ಲಿ
ನಲುಗಿದಂಥ ಹೂಗಳ ಕಥೆಯ
ನೆನೆದು ಮನವು ಅಳುತಿದೆ
ಕಾಲವನ್ನು ಹಿಂದೆ ತಳ್ಳಿ
ನಿನ್ನ ಜೊತೆಗೆ ಕಳೆದ
ಕ್ಷಣಗಳ ಕದ್ದು ಶಾಶ್ವತ
ಹಿಡಿಯ ಬಯಸಿದೆ
ತೀರದ ದೂರದ ಮೋಹ ವಿರಹ!!
ಕ್ರಾಂತಿ-ಮಗು
ಹಸಿವನ್ನು ಸೂಸುವ
ನಿನ್ನ ವಿಶಾಲ
ಶೂನ್ಯಕ್ಕೆ
ತೆರೆದ ಕಂಗಳಲ್ಲಿ
ನಾಳೆಯ
ಭರವಸೆಯ ಕಾಣಲಾರೆ
ಮಗು, ಹೆದರಬೇಡ
ನಾನಿದ್ದೇನೆ
ನನ್ನೊಡಲಲ್ಲೂ
ಒಂದು ಉರಿವ
ತಣ್ಣನೆಯ
ಕ್ರಾಂತಿಯ
ಜ್ವಾಲಾಮುಖಿಯಿದೆ
ನಿನ್ನ ಹಸಿವಿನ
ಕಿಚ್ಚು ನನ್ನ ಕ್ರಾಂತಿಯ
ಕಿಡಿಯ ಒಮ್ಮೆ
ಸೋಕಲಿ
ಮೈ-ಮನಗಳಲ್ಲಿ
ಈ ದೇಶದ
ಎಲುಬುಳಲ್ಲಿರುವ
ಕೀಲುನೋವುಗಳ
ಹೊರತಳ್ಳಲಿ
ಮಗು...ಒಮ್ಮೆ
ನಿನ್ನ ಅರೆತೆರೆದ ಹಸಿದ
ಕಣ್ಣುಗಳಿಂದ ನೋಡು
ಕ್ರಾಂತಿಯ ಕಿಡಿ
ಹೊತ್ತಬೇಕು!!
ಎಲ್ಲಾ ಕವನಗಳೂ ಸೊಗಸಾಗಿವೆ...ಅದರಲ್ಲೂ ಕ್ರಾಂತಿ-ಮಗು ತುಂಬಾ ಚೆನ್ನಾಗಿದೆ...
ReplyDeleteಬೇಕೊಂದು ಕಿಟಕಿ:
ReplyDeleteಒಂದು ಅನಿರ್ವಚನೀಯ ಆನಂದ ಕೊಟ್ಟ ಕವಿತೆ. ಧನಾತ್ಮಕ ಯೋಚನೆಯ ಪ್ರೇರಕ.
ವಿರಹ:
೧. ಹೀಗೆ ಹಾಡಿದರೆ, ಬಂದೇ ಬರತಾನ ನಲ್ಲ. ಆಮೇಲೆ ನಲ್ಲ ದೂರ..
೨. ಮೋಹವೇ ವಿರಹ? ಇರಬಹುದು ಕಾಯುವಿಕೆಯಲ್ಲೂ ಕನವರಿಕೆ ಸರಸ.
ಕ್ರಾಂತಿ-ಮಗು:
ಹೆಣ್ಣಿನ ಮನೋ ಧೈರ್ಯವನ್ನು ತುಂಬುವುದು ಮಗು. ಆಕೆ ಕೊಟ್ಟ ಮನೆಯಲ್ಲೋ, ತವರಿನಲ್ಲೋ ಅನುಭವಿಸಿದ ಶತ ಹಿಂಸೆಗಳನ್ನು ಆ ಮಗುವಿನ ಲಾಲನೆಯಲ್ಲಿಮರೆಯುತ್ತಾಳೆ.
ಅವಳಲ್ಲಿ ಮೊಳೆಯುವ ಈ ಕ್ರಾಂತಿಯ ಬಯಕೆ ಖಂಡಿತ ಒಳ್ಳೆಯದು. ಅದು ಮಗುವಿನ ಮುಖೇನ ಜಗಕೂ ಉಪಕಾರಿ.
ತುಂಬಾ ಚೆನ್ನಾಗಿದೆ ಎಲ್ಲಾ ಕವಿತೆಗಳು
ReplyDeleteತುಂಬಾ ಚೆನ್ನಾಗಿದೆ ಎಲ್ಲಾ ಕವಿತೆಗಳು
ReplyDeleteಚೆನ್ನಾಗಿದೆ
ReplyDelete