Friday, November 30, 2012

ನಾ ಯಶೋದೆ...

 ತಾಯ್ತನ ಅನ್ನೋದು ಸುಂದರ ವರ...ನನ್ನ ಪುಟ್ಟ ಭಾವತರಣ(ನನ್ನ ಮಗ) ನನ್ನ ಬದುಕನ್ನು ನಿಜಕ್ಕು ಗುರುವಾಗಿ ತಿದ್ದಿದ್ದಾನೆ,ನಾನು ಅವನಲ್ಲಿ ನನ್ನ ಜಗತ್ತು ಕಂಡಿದ್ದೀನಿ..ಅವನು ಬರೆಸಿದ ಕವನ ಇದು..

ನಿನ್ನ ಪುಟ್ಟ ಕೈಗಳಲ್ಲಿ
ನನ್ನ ಕೊರಳ ಬಳಸಿದಾಗ
ನೋಡು ನಾನೀಗ ಯಶೋದೆ!!

ನಿನ್ನ ಮುದ್ದು ಮುಖದಲ್ಲಿ ಸುಂದರ
ನಗುವು ಹೊಮ್ಮಿದಾಗ
ಕತ್ತಲ ತೆರೆ ಸರಿದು
ಹೃದಯದ ಕೋಣೆಯಲ್ಲಿ
ಬೆಳಗಿನ ಬೆಳಕು

ತುಟಿಗಳ ಅಂಚಿನಲ್ಲಿ
ಸುರಿವ ಸಿಹಿಮಾತುಗಳ
ಮುತ್ತಿನ ಧಾರೆಗೆ
ವಸುಂಧರೆ ಹೊಟ್ಟೆಕಿಚ್ಚಿಗೆ
ಮತ್ತೊಮ್ಮೆ ಬಿಮ್ಮನಸಿಯಾದಾಳು!!


ನೀ ನನಗೆ ಶ್ಯಾಮ,
ನೀ ನನಗೆ ರಾಮ
ಜಗದ ಎಲ್ಲ
ಸೌಂದರ್ಯಗಳ ಮೊತ್ತ
ನೀ ನನ್ನ ಕಾಮ,
ನವಿಲುಗರಿಯ
ಕಣ್ಣಲ್ಲಿರುವ ಅಷ್ಟೂ ಬಣ್ಣ
ನೀ ನನಗೆ ನನ್ನ ಮುದ್ದು ಕಣ್ಣಾ!!

3 comments:

  1. ಮಗುವಿನ ಲಾಲನೆಯಲ್ಲಿ ಜಗದ ನೋವೆಲ್ಲ ಮರೆಯುವ ತಾಯಿ, ಒಮ್ಮೆ ಯಶೋದೆ ಮತ್ತೊಮ್ಮೆ ದೇವಕಿ.

    ಈ ಶೈಲಿ ನನಗೂ ಮೈಗೂಡಲಿ ಎಂದು ಆಶೀರ್ವಾದ ಮಾಡಿ.

    ReplyDelete
  2. ಮಗುವ ತಬ್ಬಿ ಜಗವ ಮರೆವ ಅಮ್ಮ ತಾನೂ ಮತ್ತೆ ಮಗುವೇ ಆಗುತ್ತಾಳೇನೋ...ಚಂದದ ಬರಹ.

    ReplyDelete
  3. ತಾಯ್ತನನ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ನನ್ನ ಲೆಕ್ಕದಲ್ಲಿ ಅದು ಒಂದು ಸಂದರ ಅನುಭೂತಿ

    ReplyDelete