೧
ನಿನ್ನ ಬೆವರಿನ ಗಂಧವಿಲ್ಲದ ತಂಗಾಳಿಗೆ
ನನ್ನ ಮನೆಯಂಗಳದಿ ಪ್ರವೇಶ
ನಿರಾಕರಿಸಲಾಗಿದೆ!!
೨
ಸ್ನಾನ ಮಾಡುವಾಗ ಕದ್ದು ನೋಡುವ ಕನ್ನಡಿಯೇ !!
ನಿನ್ನ ಮರ್ಯಾದೆಯ ಮಿತಿ ಮೀರದಿರು,
ಅವನಂತೆ !!
೩
ಹೆರಳಿಂದ ಉದುರಿದ ನೀರ ಹನಿಗಳ ಉಂಡು
ಹುಲುಸಾದೆ ನನ್ನ ಗುಲಾಬಿ ಗಿಡವೇ..
ನಾಚು ಸ್ವಲ್ಪ..ದುಂಬಿ ಬರುವ ಸಮಯಕ್ಕೆ!!
೪
ಯಾಕೆ ಪ್ರೇಮ ಕವಿತೆಗಳ ಬರೆವೆ ಎಂದ...
ನಿಜಕ್ಕೆ ನಿಲುಕದ ನಿನ್ನ ನನ್ನ ಪದಗಳಲ್ಲಿ
ಹಿಡಿದಿಡುವ ಪ್ರಯತ್ನ ಎಂದೆ ...
೫
ಕಥೆ ಕೇಳಲು ನಾನೇ ಬೇಕಾಗಿಲ್ಲ ಈ ಕಿಟಕಿ..
ತೆರೆದ ಬಾಗಿಲು.. ಮಡಿಯದ ಹಾಸಿಗೆಯ
ಸುಕ್ಕುಗಳ ಕೇಳಿ ..
೬
ಮಧುವು ರುಚಿಸುತ್ತಿಲ್ಲವಂತೆ ಅವನಿಗೆ
ಇತ್ತೀಚೆಗೆ, ನನ್ನ ಕಣ್ಣ ರೆಪ್ಪೆಯಲ್ಲಿ ಕರಗಿದ
ಕಾಡಿಗೆಯ ಮತ್ತೇರಿರಬೇಕು!!
೭
ಪ್ರೇಮವೆಂದರೆ ಬಿಸಿಯುಸಿರಿನ ರಾತ್ರಿಗಳ
ನಂತರ ಉಳಿವ ಬಂಧ..ನನ್ನ ನಾಚಿಕೆ...
ಅವನ ಬೆವರಿನ ಗಂಧ!!
೮
ಪೋಲಿ ಎಂದು ದೂರದಿರಿ ನನ್ನವನ,
ಅವ ಉಬ್ಬುತಗ್ಗುಗಳ ಮೀರಿ ಮನದ ಮಡಿಕೆಯಲ್ಲಿ
ಬಣ್ಣ ಬಿಡಿಸುವ ಅಜಾತ ಕಲಾವಿದ!!
ಚಿತ್ರ ಕೃಪೆ-ಗೂಗಲ್
ನಿನ್ನ ಬೆವರಿನ ಗಂಧವಿಲ್ಲದ ತಂಗಾಳಿಗೆ
ನನ್ನ ಮನೆಯಂಗಳದಿ ಪ್ರವೇಶ
ನಿರಾಕರಿಸಲಾಗಿದೆ!!
೨
ಸ್ನಾನ ಮಾಡುವಾಗ ಕದ್ದು ನೋಡುವ ಕನ್ನಡಿಯೇ !!
ನಿನ್ನ ಮರ್ಯಾದೆಯ ಮಿತಿ ಮೀರದಿರು,
ಅವನಂತೆ !!
೩
ಹೆರಳಿಂದ ಉದುರಿದ ನೀರ ಹನಿಗಳ ಉಂಡು
ಹುಲುಸಾದೆ ನನ್ನ ಗುಲಾಬಿ ಗಿಡವೇ..
ನಾಚು ಸ್ವಲ್ಪ..ದುಂಬಿ ಬರುವ ಸಮಯಕ್ಕೆ!!
೪
ಯಾಕೆ ಪ್ರೇಮ ಕವಿತೆಗಳ ಬರೆವೆ ಎಂದ...
ನಿಜಕ್ಕೆ ನಿಲುಕದ ನಿನ್ನ ನನ್ನ ಪದಗಳಲ್ಲಿ
ಹಿಡಿದಿಡುವ ಪ್ರಯತ್ನ ಎಂದೆ ...
೫
ಕಥೆ ಕೇಳಲು ನಾನೇ ಬೇಕಾಗಿಲ್ಲ ಈ ಕಿಟಕಿ..
ತೆರೆದ ಬಾಗಿಲು.. ಮಡಿಯದ ಹಾಸಿಗೆಯ
ಸುಕ್ಕುಗಳ ಕೇಳಿ ..
೬
ಮಧುವು ರುಚಿಸುತ್ತಿಲ್ಲವಂತೆ ಅವನಿಗೆ
ಇತ್ತೀಚೆಗೆ, ನನ್ನ ಕಣ್ಣ ರೆಪ್ಪೆಯಲ್ಲಿ ಕರಗಿದ
ಕಾಡಿಗೆಯ ಮತ್ತೇರಿರಬೇಕು!!
೭
ಪ್ರೇಮವೆಂದರೆ ಬಿಸಿಯುಸಿರಿನ ರಾತ್ರಿಗಳ
ನಂತರ ಉಳಿವ ಬಂಧ..ನನ್ನ ನಾಚಿಕೆ...
ಅವನ ಬೆವರಿನ ಗಂಧ!!
೮
ಪೋಲಿ ಎಂದು ದೂರದಿರಿ ನನ್ನವನ,
ಅವ ಉಬ್ಬುತಗ್ಗುಗಳ ಮೀರಿ ಮನದ ಮಡಿಕೆಯಲ್ಲಿ
ಬಣ್ಣ ಬಿಡಿಸುವ ಅಜಾತ ಕಲಾವಿದ!!
ಚಿತ್ರ ಕೃಪೆ-ಗೂಗಲ್
"ಪ್ರೀತಿ ತುಂಬಿದ ನಿಮ್ಮ ಹಾಯ್ಕುಗಳಲ್ಲಿ ವಿಶೇಷವಾದ ರೂಪಕಗಳಿವೆ" ನನಗೆ ಇದು ತುಂಬಾ ಇಷ್ಟವಾಯಿತು..
ReplyDeleteಪೋಲಿ ಎಂದು ದೂರದಿರಿ ನನ್ನವನ,
ಉಬ್ಬುತಗ್ಗುಗಳ ಮೀರಿ ಮನದ ಮಡಿಕೆಯಲ್ಲಿ
ಬಣ್ಣ ಬಿಡಿಸುವ ಅಜಾತ ಕಲಾವಿದ!!
ಶಮ್ಮಿ... ಹನಿಗಳು ಎನ್ನೋಣವೇ..?? ಹಾಯ್ಕುವಿನ ಸೂತ್ರಕ್ಕೆ ಇಲ್ಲ ಇವು.. ಆದ್ರೆ ಈ ಹನಿಗಳ ಗಹನತೆ ಮತ್ತು ಮನದಾಳಕ್ಕೆ ಇಳಿಯುವ ತೀಕ್ಷ್ಣತೆ ಬಹಳ ಇದೆ..
ReplyDeleteಮಧುವು ರುಚಿಸುತ್ತಿಲ್ಲವಂತೆ ಅವನಿಗೆ
ಇತ್ತೀಚೆಗೆ, ನನ್ನ ಕಣ್ಣ ರೆಪ್ಪೆಯಲ್ಲಿ ಕರಗಿದ
ಕಾಡಿಗೆಯ ಮತ್ತೇರಿರಬೇಕು!!
ಕಣ್ಣಲ್ಲೇ ಕಳೆದುಹೋಗಬಯಸುವ ರಸಿಕ ಪ್ರಿಯಕರನ ಮನದಿಂಗಿತವಾಗಲೀ...
ಹೆರಳಿಂದ ಉದುರಿದ ನೀರ ಹನಿಗಳ ಉಂಡು
ಹುಲುಸಾದೆ ನನ್ನ ಗುಲಾಬಿ ಗಿಡವೇ..
ನಾಚು ಸ್ವಲ್ಪ..ದುಂಬಿ ಬರುವ ಸಮಯಕ್ಕೆ!!
ಬಿದ್ದ ಹನಿಗೆ ನಾಚುವ ಗುಲಾಬಿಗೇ ಭಾವ ತುಂಬುವಂತೆ ಮಾಡಿದ ಮಂಥನವಾಗಲೀ..... ಅಸದಳ.
ಸರಸವಾಗಿದೆ. ಚೆನ್ನಾಗಿದೆ..:)
ReplyDeletesooooooooooooooooooper !!
ReplyDeleteಎಲ್ಲ ಹನಿಗಳೂ ತುಂಬಾ ತುಂಬಾ ಖುಷಿಕೊಟ್ಟವು. ಒಲುಮೆಯ ನಂದಾ ದೀಪ ಸದಾ ಉರಿಯಲು ಪರಸ್ಪರತೆ ಬಲು ಮುಖ್ಯ.
ReplyDeleteThe Best:
"ಕಥೆ ಕೇಳಲು ನಾನೇ ಬೇಕಾಗಿಲ್ಲ ಈ ಕಿಟಕಿ..
ತೆರೆದ ಬಾಗಿಲು.. ಮಡಿಯದ ಹಾಸಿಗೆಯ
ಸುಕ್ಕುಗಳ ಕೇಳಿ .."
ಹಲವು ಆಯಾಮಗಳ ಹನಿ ಇದು. ಒಂದು ಸಂಕೋಚ, ಆ ತುಂಟತನ ಮತ್ತು ರಸಿಕತೆಯ ಅನಾವರಣ ಇಲ್ಲಿದೆ.
wow..superb ..
ReplyDeleteಅದ್ಭುತವಾಗಿವೆ.
ReplyDeleteಅವನನ್ನ ಅಭಿಜಾತ ಕಲಾವಿದ ಎಂದ ಕವಯಿತ್ರಿಗೊಂದು ಸಲಾಂ
ಎಲ್ಲ ಹನಿಗಳೂ ನೆನಪಲ್ಲುಳಿಯುತ್ತವೆ, ತುಟಿಯಂಚಲ್ಲೊಂದು ಮಿಂಚು ಹೊಳೆವಂತೆ ಮಾಡುತ್ತವೆ
ಇವು ಹಾಯ್ಕುಗಳಲ್ಲ... ಅದರೆ ಪ್ರೇಮದ ಹನಿಗಳು ಎಂದು ಹೇಳಬಹುದು! ಮನದಾಳದ ಪ್ರೇಮ ಪಲ್ಲವಿ ಚೆನ್ನಾಗಿ ಸ್ಫೋಟಿಸುತ್ತಿವೆ... ಹೀಗೇ ಬರೆಯಿರಿ...
ReplyDelete