ಇತಿಹಾಸವನ್ನೊಮ್ಮೆ ಓದಬೇಕು, ಮಾನವ ನಿರ್ಮಿತ ಧರ್ಮಗಳ ಸೃಷ್ಟಿಯನ್ನು ಮತ್ತೊಮ್ಮೆ ಓದಬೇಕು ,ಅಲ್ಲೆಲ್ಲಾ ರಕ್ತ ಚೆಲ್ಲಿದ ಕಲೆಗಳನ್ನೊಮ್ಮೆ ಮೂಸಬೇಕು ,ಅವೆಲ್ಲಾ ಹೊಸಾ ಧರ್ಮದ ಹುಟ್ಟಿನ ಗುರುತುಗಳು, ಹಿಂಸೆ ಇಂದ ಹುಟ್ಟಿದ ಧರ್ಮಗಳು ಅಹಿಂಸೆಯನ್ನ ಪ್ರತಿಪಾದಿಸುತ್ತಾವಾದರು ಹೇಗೆ? ಇಲ್ಲಿ ಮಾನವತೆಯನ್ನ ರಾಜ್ಯಗಳ ವಿಸ್ತಾರ ಪ್ರಕ್ರಿಯೆಯಲ್ಲಿ ಹೂಳಲಾಗಿದೆ, ಬಡವರ ಶೋಷಣೆಯನ್ನ ಗಡಿ ವಿಸ್ತಾರಕ್ಕೆ ಕಣ್ಣೀರ ಹನಿಯನ್ನ ಆಯುಧಗಳಿಗೆ ಮಾರಲಾಗಿದೆ, ಇನ್ನು ಹಿಂದೆ ಹೋದರು ಅಷ್ಟೇ .. ಬೆಂಕಿಯನ್ನ ಮತ್ತು ಅಹಾರವನ್ನ ತಿನ್ನುವದನ್ನ ಕಂಡು ಹಿಡಿದ ನಿಯಾಂಡರ್ಥಲ್ ಮಾನವ ತನ್ನ ಅವಾಸ ಸ್ಥಾನಕ್ಕೆ ಯುದ್ಧ ಮತ್ತು ತನ್ನ ಗುಂಪಿನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದ. ಅ ಲ್ಲಿ ಉಳಿವಿಗಾಗಿ ನಡೆಯುತ್ತಿದ್ದ ಹೋರಾಟ ಇಲ್ಲಿ ದೇಶ ವಿಸ್ತರಣೆಗೆ,ಧರ್ಮ ವಿಸ್ತರಣೆಗೆ ನಡೆಯುತ್ತಿದ್ದ ಹೋರಾಟ ಎಲ್ಲೆಲ್ಲು ಒಂದು ಲಿಂಗದವರು ಮಾತ್ರ ಅವರ ಇತಿಹಾಸವನ್ನ ಬರೆದರು .... ಅಥವಾ ಉಳಿಸಿ ಹೋದರು .. ಅಲ್ಲಿ ನನ್ನ ಕುಲದ ಮೂಲಸೆಲೆ ಕಾಣಲೇ ಇಲ್ಲ ..ಸತ್ಯವಾದರು ವಿಪರ್ಯಾಸ!!
ಇವತ್ತಿಗೂ ವೇದಕಾಲ ಎಂದರೆ ಗಾರ್ಗಿ ಮೈತ್ರೇಯಿ ಮಾತ್ರ ಸಿಕ್ಕುತ್ತಾರೆ, ಇನ್ನು ಮುಂದೆ ಬಂದರೆ ಜಗತ್ತಿನ ಶ್ರೇಷ್ಠ ನಾಗರಿಕತೆಗಳಲ್ಲಿ ಒಂದಾದ ಗ್ರೀಸ್ ಮತ್ತು ರೋಮನ್ನರಲ್ಲೂ ಅಶ್ಟೆ... sappo , Aesara ,ಕ್ಲಿಯೋಪಾತ್ರ ದಿ ಆಲ್ಕೆಮಿಸ್ಟ್ ,Corinna ಇತ್ಯಾದಿ .... ಇತ್ಯಾದಿ, ರೋಮನ್ನರಲ್ಲಿ ಸಲ್ಪ ಜಾಸ್ತಿಯೇ ನನ್ನವರ ದನಿಗಳಿದ್ದವು , , ಆದರೆ ನನ್ನ ನೆಲ ಸಮಷ್ಟಿಯ ಹೆಸರಲ್ಲಿ ನನ್ನ ಕಟ್ಟಿ ಹಾಕಿತು, ಇದರಲ್ಲಿ ಏನಿದೆ ಯೋಚಿಸೋದು ಅನ್ನಬೇಡಿ, ನೀವು ಬರೆದದ್ದಷ್ಟೇ ಇತಿಹಾಸವೇ?? ಅ ಪುಟಗಳಲ್ಲಿ ಕೇವಲ ಪುರಾಣ ಪುಣ್ಯಕಥೆಗಳ ದೇವಿಯರ ಸ್ಥಾನ ಅಷ್ಟೇ ನೋಡಲು ಸಿಕ್ಕುವುದು, ಅಪ್ಪಟ ಹೆಣ್ಣಾದ ಸೀತೆಯನ್ನು ದೇವತೆ ಮಾಡಿ, ಅಕೆಗೆ ಅಮಾನುಷ ಗುಣಗಳ ತುಂಬಿ ಆಕೆಯ ಬಾಯಿ ಕಟ್ಟಿದ್ದೀರಿ .... ರಾವಣನ ಹೆಂಡತಿಯನ್ನು ಕೂಡ ಅದೇ ಪತಿವ್ರತೆಯರ ಪೈಕಿಗೆ ಸೇರಿಸಿದ್ದೀರಿ...
ಅಮಿಬಾದಂಥ ಏಕಕೋಶ ಜೀವಿಯನ್ನುಳಿದು ,ಪ್ರತಿಯೊಂದು ಜೀವಿಯು ತನ್ನ ವಂಶಾಭಿವೃದ್ಧಿಗೆ ತನ್ನಂಥದ್ದೆ ಆದರೆ ಮೂಲಭೂತವಾಗಿ ಕೆಲ ವ್ಯತ್ಯಾಸಗಳುಳ್ಳ ಜೀವಿಯನ್ನ ವಿಕಾಸ ಪ್ರಕ್ರಿಯೆಯಲ್ಲಿ ಜೊತೆಯಾಗಿ ಪಡೆದಿರುತ್ತದೆ... ಇಲ್ಲಿ ಮೇಲು ಕೀಳುಗಳಿರುವುದಿಲ್ಲ.... ಯಾಕೆಂದರೆ ಹೋರಾಟ ಕೇವಲ ದಿನ ಗಂಟೆಗಲದ್ದಾಗಿರುತ್ತದೆ ಮತ್ತು ನಿರ್ಧಿಷ್ಟ ಸ್ವರೂಪದ್ದಾಗಿರುತ್ತದೆ... ಅಕಶೇರುಕಗಳಿಂದ ಸಲ್ಪ ಮೇಲ್ಮಟ್ಟದ ಜೀವಿಗಳು ಸಸ್ತನಿಗಳು ಮತ್ತು ಕಶೇರುಕಗಳು.ಕೂಡ .. ಪ್ರತೀ ಜೀವಿಯ ಸೃಷ್ಟಿಗೂ ಬ್ರಹ್ಮಾಂಡ ದ ಎಲ್ಲ ಪರಿಸ್ಥಿತಿಗಳು ಸಹಕರಿಸುವುದರ ಜೊತೆ ಭೂಮಿಯೂ ಲಕ್ಷಗಟ್ಟಲೆ ವರ್ಷ ತೆಗೆದುಕೊಂಡಿದೆ ... ಜೀವವಿಕಾಸ ಪ್ರಕ್ರಿಯೆಯ ಜೊತೆಗೆ ಅವುಗಳ ಉಳಿವಿಗಾಗಿ ಹೋರಾಟ ಅಥವಾ ಜೀವನ ವಿಧಾನಗಳು ಸಮಯದಿಂದ ಸಮಯಕ್ಕೆ ಬದಲಾಗಿವೆ.... ಹಿಮಯುಗದ ನಂತರ ಹುಟ್ಟಿದ ಮಾನವನ ಉಗಮ ಪ್ರಕ್ರಿಯೆಗೆ ಅವನ ಮೆದುಳಿನ ವಿಕಾಸಕ್ಕೆ ಪೂರಕ ವಾತಾವರಣ ವಿತ್ತು ... ಹೀಗೆ ಹುಟ್ಟಿದ ಮಾನವ ಜೀವಿಯಲ್ಲಿ ಮೊದ ಮೊದಲು ಭೇದಗಳಿರಲಿಲ್ಲ... ಅಲ್ಲಿ ನಿತ್ಯದ ಹಸಿವಿಗಾಗಿ ಹೋರಾಟವಿತ್ತು .. ಬಟ್ಟೆಯ ಉತ್ಪತ್ತಿ ಆಗಿರಲಿಲ್ಲ... ಬೆಂಕಿಯ ಉಪಯೋಗ ಮತ್ತು ಬೇಯಿಸಿ ತಿನ್ನುವುದು ಗೊತ್ತಿರಲಿಲ್ಲ.... ಬಹುಶಃ ಸಂತಾನೋತ್ಪತ್ತಿ ಕೂಡ ಆಗಿನ ಅ ವಶ್ಯಕತೆಯೇ ಅಗಿತ್ತು... ಹೀಗೆ ನಿಧಾನವಾಗಿ ಜನಸಂಖ್ಯೆ ಹೆಚ್ಚಿದಂತೆಲ್ಲಾ ಗುಂಪುಗಳು ವಿಭಜನೆಯಾಗಿ... ಅನೇಕ ಪ್ರದೇಶಗಳಲ್ಲಿ ವಾಸಿಸಲು ಆರಂಭಿಸಿದವು.. ಅದು ಈಗಿನ ಸೋ ಕಾಲ್ಡ್ ಸಮಾಜದ ಮುಂಚಿನ ದಿನಗಳು ... ಅಲ್ಲಿ ಒಂದು ವರ್ಗ ಮನೆಯಲ್ಲುಳಿಯಿತು... ಮತ್ತೊಂದು ವರ್ಗ ಆಹಾರಕ್ಕೆ, ಕಾದಾಟಕ್ಕೆ ಹೊರಜಗತ್ತಿಗೆ ತೆರಕೊಂಡಿತು . ಮ ತ್ತು ಅವರು ಮನೆಯಲ್ಲುಳಿದವರನ್ನ ಅಷ್ಟಕ್ಕೇ ಸೀಮಿತಗೊಳಿಸಿ ತಮ್ಮ ಹಿಡಿತವನ್ನು ಕುಟುಂಬಗಳ ಮೇಲೆ ಹಿಡಿದಿತ್ತು ಕೊಂಡರು ಮನೆಯ ಯಜಮಾನರೆಂದು ಕರೆಸಿಕೊಂಡರು.ಹೀಗೆ ಹೆಣ್ಣು ಗಂಡುಗಳ ವರ್ಗೀಕರಣ ಆರಂಭವಾಯ್ತು ತನ್ನ ಸುಖ ಸೌಲಭ್ಯಗಳಿಗೆ ರಕ್ಷಣೆಯ ಉದ್ದೇಶಕ್ಕೆ ಗುಂಪು ಗುಂಪು ಜನಗಳು ಒಟ್ಟಾಗಿ ವಾಸಿಸಲು ಅರಂಭಿಸಿದರು... ನಗರಗಳ ಪರಿಕಲ್ಪನೆ ಮೊದಲಾದ್ದು ಆಗ.. ತಮ್ಮಲ್ಲಿಲ್ಲದ ವಸ್ತುಗಳನ್ನ ಬೇರೆಯವರಿಂದ ಪಡೆಯುವುದು,ತಮ್ಮಲ್ಲಿನ ವಸ್ತುಗಳಿಗೆ ಬದಲಾಯಿಸಿಕೊಳ್ಳುವುದು ಮುಂತಾದ ಕ್ರಿಯೆಗಳು ಆರಮ್ಭವಾದಂತೆಲ್ಲ ವ್ಯಾಪಾರದ ಪರಿಕಲ್ಪನೆ ಶುರುವಾಯಿತು... ಪ್ರತಿ ಗುಂಪು ನಿರ್ಧಿಷ್ಟವಾದ ಒಂದು ದೈವಕ್ಕೆ ತಲೆಬಾಗುತ್ತಿತ್ತು.. ಮತ್ತು ಸಂಮಾಜಿಕ ಕಟ್ಟು ಕಟ್ಟಲೆಗಳನ್ನ ಚಾಚು ತಪ್ಪದೆ ಅನುಸರಿಸುತ್ತಿತ್ತು...ಜೀವನ ವಿಧಾನಗಳು ಮತ್ತು ಪಾಪ ಪುಣ್ಯಗಳ ಪರಿಕಲ್ಪನೆಗಳು ಪರಿಚಿತವಿದ್ದ ಕೆಲ ಕಥೆಗಳೊಮ್ದಿಗೆ ಬೆಸೆದುಕೊಂಡು ಪುರಾಣ ಪುಣ್ಯಕಥೆಗಳು ಹುಟ್ಟಿಕೊಂಡವು ..ವಸ್ತುಗಳಂತೆ ಮನುಷ್ಯರನ್ನು ಅದರಲ್ಲೂ "ಮಾತಿಲ್ಲದ" ವರ್ಗವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಹೀನ ಕ್ರಿಯೆಗಳು ಈ ಕಾಲದಲ್ಲೇ ಅರಂಭವಾಯಿತು...
ಅಕ್ಷರ ಜ್ಞಾನ ಬಾಯ್ದೆರೆಯ ಮೂಲಕ ಬಂದ ಕಥೆಗಳನ್ನ ಸಂಜ್ಞೆ ಮತ್ತು ಆಕಾರಗಳಲ್ಲಿ ಚಿತ್ರಿಸುವದನ್ನ ಬಿಟ್ಟು ನಿರ್ಧಿಷ್ಟ ರೂಪದಲ್ಲಿ ಅದನ್ನು ದಾಖಲಿಸಲು ಸಹಾಯ ಮಾಡಿತು ... ಅಲ್ಲೂ ಮನೆಯಲ್ಲುಳಿದ ವರ್ಗವನ್ನ ಸಂಪೂರ್ಣ ನಿರ್ಲಕ್ಷಿಸಲಾಯಿತು.. ಬಹುಶಃ ಸೊಲ್ಲೆತ್ತಿದ ಕೆಲವರು ಬಿಟ್ಟರೆ ಮತ್ತೆಲ್ಲ ಅವರ ಸ್ಥಾನಗಳಿಗೆ ಹೋರಾಡುವ ಪ್ರಕ್ರಿಯೆಯನ್ನೇ ಮರೆತಿದ್ದರೇನೊ.... ಕಾಲ ಬದಲಾಯಿತು.ಆ ಧುನಿಕತೆ ಮೊದಲಾಯಿತು... ಕೇವಲ ಸುಶ್ರುತ ಚರಕ ಮುಂತಾದವರಿದ್ದ ಕಡೆ ಮೇರಿ ಕ್ಯೂರಿ ಯಂಥವರು ಬಂದರು ... ಅಸ್ತಿತ್ವಕ್ಕಾಗಿ ಹೋರಾಟ ಶುರುವಾದ ಕಾಲಕ್ಕೆ ತಾವು ಕಳಕೊಂಡ ಜಗತ್ತುಗಳು ಈ ನಿರ್ಲಕ್ಷಿತ ಜನಾಂಗಕ್ಕೆ ಗೋಚರಿಸಿತೇನೊ... ಅಂತುಹದಿನಾಲ್ಕು ಹದಿನೈದು ಹದಿನಾರು ಹದಿನೇಳನೆಯ ಶತಮಾನದ ಹೊತ್ತಿಗೆ ಮಾತುಗಳು ಹುಟ್ಟಿಕೊಂಡವು ... ಅವುಗಳನ್ನ ಕೂಡ ಮೊದ ಮೊದಲು ನಿರ್ಲಕ್ಷಿಸಲಾಯ್ತು... ಅನೇಕ ಕ್ರಾಂತಿಗಳು ನಡೆದ ನಂತರ ಅವುಗಳ ದನಿ ಕೂಗು ಜಗತ್ತಿಗೆ ಸ್ಪಷ್ಟ ಕೇಳಿಸಲಾರಂಭಿಸಿತು ... ಇದೀಗ ಹೋರಾಟ ಎಲ್ಲ ಸ್ತರಗಳಲ್ಲಿದೆ ಆದರೆ ಈಗಿನ ಹೋರಾಟ ಬರೀ ನಿರ್ಲಕ್ಷಿತ ಜನಾಂಗಕ್ಕೆ ಸೀಮಿತವಾಗಿಲ್ಲ.... ಹೆಣ್ಣು ತನ್ನ ಹಕ್ಕುಗಳಿಗೆ ಪರಿಪುರ್ನವಾಗಲ್ಲದಿದ್ದರು ತನ್ನ ಸ್ವಂತ ನೆಲೆಯಲ್ಲಿ ಪ್ರತಿ ದಿನ ಪ್ರತಿ ಕ್ಷಣ ಹೋರಾಡುವುದು ಇಂದಿನ ಅನಿವಾರ್ಯತೆ ಅಂದರೆ ತಪ್ಪಾಗಲಾರದು...
ಎಲ್ಲಿ ನೋಡಿ...ಒಂದು ಲಿಂಗದ ಕೂಸುಗಳನ್ನ ಹುಟ್ಟಿನಿಂದಲೇ ನೀನು ಹೀಗೆಯೇ ಇರಬೇಕು ಎಂದು ತಿದ್ದಲಾಗುತ್ತದೆ... ಹಾಗೆ ರೂಪುಗೊಂಡ ಮನಸ್ಸುಗಳು ಬದಲಾವಣೆ ಯನ್ನ ಸುಲಭಕ್ಕೆ ಒಪ್ಪಿಕೊಳ್ಳಲಾರವು ..ಇವತ್ತಿಗೂ ಹಳ್ಳಿಯಲ್ಲಿ ಜೀನ್ಸ್ ಹಾಕುವದನ್ನ ದೊಡ್ಡ ತಪ್ಪೆಂದು ಭಾವಿಸಲಾಗುತ್ತದೆ...ನಾನು ಬಟ್ಟೆಯನ್ನ ಯಾಕೆ ಎಳೆದು ತಂದೆ ಈ ವಿಷಯಕ್ಕೆ ಎಂದರೆ , ಮನುಷ್ಯನ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಅದು ಒಂದು ಮತ್ತು ಆ ಅವಶ್ಯಕತೆಗಳ ಮೇಲೂ ಒಂದು ಜನಾಂಗ ನಿರಂತರವಾಗಿ ಹೇಗೆ ಹತೋಟಿ ಸಾಧಿಸಲು ಯತ್ನಿಸುತ್ತಿದೆ ...ಆ ಮೂಲಕ ಮತ್ತೆ ಮತ್ತೆ ಒಂದು ಲಿಂಗದ ಜನರನ್ನ ವ್ಯವಸ್ಥಿತವಾಗಿ ಕೆಳ ತಳ್ಳಲು ಬಳಸಿಕೊಳ್ಳುತ್ತಿದೆ ಎನ್ನುವುದು... ಪರಂಪರಾಗತ ರೂಢಿ ಯಲ್ಲಿ ಅಷ್ಟೆಲ್ಲಾ ಅತ್ಯಾಚಾರ ಆಗುತ್ತಿರಲಿಲ್ಲ ಎಂದು ಮಾತಾಡುವವರು ಈಗ ಅದೇ ವಿಷಯದಲ್ಲಿ ಮುಂದುವರೆದು ಆಗುತ್ತಿರುವ ಅನಾಚಾರಗಳಿಗೆ ನಮ್ಮ ಉಡುಗೆ ತೊಡುಗೆ ಕಾರಣ ಎನ್ನಲಾರಂಭಿಸಿದ್ದಾರೆ..ಇದು ಅತ್ಯಂತ ಹಾಸ್ಯಾಸ್ಪದ ... ಜಗತ್ತಿನ ಒಂದೊಂದು ಖಂಡಗಳಲ್ಲಿ ಒಂದೊಂದು ರೀತಿಯ ವಾತಾವರಣ ..ಆಯಾ ವಾತಾವರಣಕ್ಕೆ ತಕ್ಕುದಾದ ಮತ್ತು ಸರಿ ಎನ್ನಿಸುವ ಉಡಿಗೆಗಳನ್ನ ತೊಟ್ಟುಕೊಳ್ಳುವುದು ಅದು ತೀರಾ ಸಹಜ ವಿಚಾರ...ಈಗಿನ ದಿನಮಾನ ಜಗತ್ತು ಬೇರೆ ಖಂಡಗಳಲ್ಲಿ ಗುರುತಿಸಲ್ಪದುತ್ತಿಲ್ಲ, ಅಂಥಾದ್ದರಲ್ಲಿ ಬಟ್ಟೆಯ ಕಟ್ಟು ಕಟ್ಟಲೆಗಳು ಸರಿ ಎನ್ನಿಸುವುದು ಇಲ್ಲ, ನಿರ್ಲಕ್ಷಿತ ಜನಾಂಗದ ಮೇಲೆ ಹಿಂದೆ ನಾನು ಹೇಳಿದ ಸಮಾಜ ಪ್ರಕ್ರಿಯೆ ವ್ಯಾಪಾರಿಕರಣ ಆರಂಭ ಆದಾಗಿನಿಂದಲೂ ನಿರಂತರವಾಗಿ ಮಾನಸಿಕ ಧಾರ್ಮಿಕ ಮತ್ತು ದೈಹಿಕ ಅತ್ಯಾಚಾರಗಳು ನಡೆಯುತ್ತಲೇ ಇವೆ... ಅದಕ್ಕೆ ಬಟ್ಟೆಯಲ್ಲ ಕಾರಣ ಗಂಡು ಎಂಬ ಲಿಂಗ ಹೆಣ್ಣನ್ನು ತನ್ನಂತೆಯೇ ಒಂದು ಜೀವಿ ಎಂದು ಒಪ್ಪಿಕೊಳ್ಳಲಾಗದಿರುವುದು...ಬಟ್ಟೆಗಳ ಬಗ್ಗೆ ಮಾತಾಡುವವರನ್ನ, ಹೆಣ್ಣಿನ ನಡುವಳಿಕೆಗಳು ಹೀಗೆ ಇರಬೇಕು ಅನ್ನುವವರನ್ನ, ಅಕೆಯನ್ನ ಇನ್ನು ಅಬಲೇ ಎಂದು ಟ್ರಂಪ್ ಕಾರ್ಡ್ ಮಾಡಿ ಕೂರಿಸುವದನ್ನ ನಾನು ವಿರೋಧಿಸುತ್ತೇನೆ...
ಅತ್ಯಾಚಾರಕ್ಕೆಳಸುವ ಮನಸ್ಸಿಗೆ ವಯಸ್ಸು ಅಂತಸ್ತು ಬಟ್ಟೆ ಯಾವುದು ಕಾಣಿ ಸುವದಿಲ್ಲ... ಅದು ಒಂದು ಹೀನ ಸ್ಥಿತಿ... ಅದಕ್ಕೆ ಆಧುನಿಕತೆ ಕಾರಣ ಅದು ಕಾರಣ ಇದು ಕಾರಣ ಎಂದು ಹೇಳುವ ಮನಸ್ಥಿತಿ ಅತ್ಯಂತ ಹೇಯ ಮನಸ್ಥಿತಿ... ಮತ್ತು ಒಂದು ಹೆಣ್ಣನ್ನ ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎನ್ನುವ ಧೋರಣೆ, ಗೌರವದ ಕೊರತೆ ,ಇದು ಕೂಡ ನಮ್ಮ ಪರಂಪರಾಗತ ವಿಚಾರಗಳೇ ಕಟ್ಟಿ ಕೊಟ್ಟ ಚಿತ್ರಣ ... ಸಿನೆಮಾ ನೋಡಿ.. ಅಲ್ಲಿ ಹೆಣ್ಣು ಪಾತ್ರಗಳನ್ನು"ಬಳಸಿಕೊಳ್ಳಲಾಗುತ್ತದೆ" ಮತ್ತೆ ಗಂಡು ಸಮಾಜ ತನ್ನ "ಮಾಚೋ" ಇಮೇಜನ್ನು ಮಾತ್ರ ಒಪ್ಪಿಕೊಳ್ಳುತ್ತದೆ.....
ಇತ್ತೀಚಿಗೆ ಒಂದು ಸಣ್ಣ ಮೂಲೆಯಲ್ಲಿ ಜಗತ್ತು ಬದಲಾಗುವ ಎಲ್ಲ ಪ್ರಕ್ರಿಯೆಗಳು ಆರಂಭವಾಗಿದೆ,ಕೇಳಿಸದ ನನ್ನವರ ದನಿಗಳು ಕೂಡ ಅತಿ ಸ್ಪಷ್ಟವಾಗಿ ಕೇಳಿ ಸಲಾರಂಭಿಸಿವೆ, ಇನ್ನು ನೀವು ನಿರ್ಲಕ್ಷಿಸಲಾರಿರಿ, ಲಿಂಗಭೇಧ ಮುಕ್ತ ಸಮಾಜಕ್ಕಾಗಿ ನಮ್ಮ ಮನೆಯಲ್ಲಿನ ಮನಸ್ಸುಗಳನ್ನ ನಾವೇ ತಿದ್ದ ಬೇಕು..ನಿಜ ಸ್ವಾತಂತ್ರ್ಯ ಸ್ವೇಚ್ಚೆಯಲ್ಲ, ವ್ಯಕ್ತಿಗತ ಸ್ವಾತಂತ್ರ್ಯ ಸಮಾಜದ ಆರೋಗ್ಯಕ್ಕೆ ಧಕ್ಕೆ ತರಬಾರದು..ಆದರೆ ಅವರುಗಳ ವೈಯುಕ್ತಿಕ ಇಚ್ಛೆಯನ್ನ ಗೌರವಿಸುವುದು ಕೂಡ ಸಮಾಜದ ಅತ್ಯುಚ್ಚ ಮನಸ್ಥಿತಿಯೇ ಸರಿ. ಹಾಗೊಂದು ಹೊಸಾ ಜಗತ್ತಿಗೆ ಮತ್ತಷ್ಟು ಲಿಂಗಭೇದವಿಲ್ಲದ ಆರೋಗ್ಯಕರ ಮನಸ್ಸುಗಳು ಒಟ್ಟುಗೂಡಬೇಕು, ಮಾನವ ಜನಾಂಗದ ಉಳಿವಿಗಾಗಿ ಎರಡು ಜೀವಿಗಳು ಪರಸ್ಪರ ಪೂರಕ ಅನ್ನುವದನ್ನ, ಪರಸ್ಪರ ಗೌರವ ಪ್ರೀತಿ ಮಾತ್ರ ಸುಂದರ ಸಮಾಜ ಕಟ್ಟಿಕೊಳ್ಳಬಲ್ಲದು ಎನ್ನುವದನ್ನ ತಿಳಿಸುವ(ಪ್ರಾಕ್ಟಿಕಲ್ ) ಕ್ರಿಯೆಗಳು ಈಗಿವ ಅತಿ ಅವಶ್ಯಕತೆಗಳು, ಕಾನುನಿನಲ್ಲು ಕೂಡ ಹೀನ ಕೃತ್ಯಗಳಿಗೆ ಅಷ್ಟೇ ಹೀನತರದ ಸ ಕಠಿಣ ಶಿಕ್ಷೆಗಳು ಮೊದಲಾಗಬೇಕು... ನಿಮ್ಮೊಳಗೆ ನೀವು ನಮ್ಮೊಳಗೇ ನಾವು ಬದಲಾಗಬೇಕು.. ಹೊಲಸು ಮನಸ್ಥಿತಿಗಳಿಗೆ ಮುಚ್ಚಿದ ಸಭ್ಯತೆಯ ಬಟ್ಟೆಗಳು ಆದಷ್ಟು ಬೇಗ ಕಳಚಿ ಬೀಳಲಿ. ನಾನು ನನ್ನ ವೈಯುಕ್ತಿಕ ನೆಲೆಯಲ್ಲಿ ಯಾವ ಲಿಂಗಭೇದ ಇಟ್ಟುಕೊಳ್ಳದವಳು.. ಇತಿಹಾಸದ ಕ್ರೂರ ಸತ್ಯಗಳನ್ನ ಅರಗಿಸಿಕೊಳ್ಳುತ್ತಲೆ ವಾಸ್ತವದ ಕಹಿಯನ್ನು ಆಶಾಭಾವದಿಂದ ನೋಡುವ ಮನಸ್ಥಿತಿ .ಮ ತ್ತು ಅಂಥಾದ್ದೊಂದು ಬದಲಾವಣೆಗೆ ಸ್ವಂತ ಮತ್ತು ಸುತ್ತಮುತ್ತಲಿನ ಕೊಳೆ ಯನ್ನ ಸಲ್ಪ ಮಟ್ಟಿಗಾದರೂ ದೂರಗೊಳಿಸುವ ಜವಾಬ್ದಾರಿ ನಮ್ಮದು ..ನಿಮ್ಮದು ಕೂಡ .....

Sariyagi helidira,yochisbekagirode edu
ReplyDeletethank you gelati...hige bheti niduttiri
DeleteMeaning writing Shammi...
ReplyDeletethank you sir..hige bheti niduttiri
Delete(ಅಂತುಹದಿನಾಲ್ಕು ಹದಿನೈದು ಹದಿನಾರು ಹದಿನೇಳನೆಯ ಶತಮಾನದ ಹೊತ್ತಿಗೆ ಮಾತುಗಳು ಹುಟ್ಟಿಕೊಂಡವು ) ... ಈ ಭಾಗವನ್ನು ಮತ್ತೆ ಖಚಿತಪಡಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಮಾತು ಏಸು ಕ್ರಿಸ್ತನ ಕಾಲದಲ್ಲಿಯೂ ಇತ್ತೆಂಬುದು ನನ್ನ ಅನಿಸಿಕೆ. ನೇರವಾಗಿ ಹೇಳುವುದು ಸೂಕ್ತವೋ ಅಲ್ಲವೋ ಗೊತ್ತಿಲ್ಲ ಆದರೂ ಅದೇಕೋ ಈ ಬರವಣಿಗೆ ನಿನ್ನ ಮಟ್ಟಕ್ಕಿಲ್ಲವೆನಿಸಿತು ನನಗೆ.
ReplyDeleteಆಣ್ಣಾ ಮಾತು ಹುಟ್ಟಿತು ಅನ್ನುವುದು ಧ್ವನ್ಯಾರ್ಥ ಇಲ್ಲಿ...ಇದು ಇತಿಹಾಸ ಮತ್ತು ನಿತ್ಯ ಸತ್ಯ..ಇದನ್ನು ಬರೆಯುವಾಗ ನಾನು ವಿಶಯಗಳನ್ನ ಆದಷ್ಟೂ ಸಂಕ್ಷಿಪ್ತಗೊಳಿಸಲು ಯತ್ನಿಸಿದೆ ಅಷ್ಟೇ...ಕೆಲವೊಮ್ಮೆ ಬರಹಗಳಲ್ಲಿ ಗುಣಮಟ್ಟಕ್ಕಿಂತ ಕಂಟೆಂಟ್ ಮುಖ್ಯ ಆಗುತ್ತೆ ಅನಿಸುತ್ತೆ ನನಗೆ....ನಿಮ್ಮ ಪ್ರಾಮಾಣಿಕ ಅಭಿವ್ಯಕ್ತಿಗೆ ವಂದನೆಗಳು
Deleteಮಾನವ ಜನಾಂಗದ ಉಳಿವಿಗಾಗಿ ಎರಡು ಜೀವಿಗಳು ಪರಸ್ಪರ ಪೂರಕ ಅನ್ನುವದನ್ನ, ಪರಸ್ಪರ ಗೌರವ ಪ್ರೀತಿ ಮಾತ್ರ ಸುಂದರ ಸಮಾಜ ಕಟ್ಟಿಕೊಳ್ಳಬಲ್ಲದು ಎನ್ನುವದನ್ನ ತಿಳಿಸುವ(ಪ್ರಾಕ್ಟಿಕಲ್ ) ಕ್ರಿಯೆಗಳು ಈಗಿವ ಅತಿ ಅವಶ್ಯಕತೆಗಳು, ಕಾನುನಿನಲ್ಲು ಕೂಡ ಹೀನ ಕೃತ್ಯಗಳಿಗೆ ಅಷ್ಟೇ ಹೀನತರದ ಸ ಕಠಿಣ ಶಿಕ್ಷೆಗಳು ಮೊದಲಾಗಬೇಕು... ನಿಮ್ಮೊಳಗೆ ನೀವು ನಮ್ಮೊಳಗೇ ನಾವು ಬದಲಾಗಬೇಕು.. ಹೊಲಸು ಮನಸ್ಥಿತಿಗಳಿಗೆ ಮುಚ್ಚಿದ ಸಭ್ಯತೆಯ ಬಟ್ಟೆಗಳು ಆದಷ್ಟು ಬೇಗ ಕಳಚಿ ಬೀಳಲಿ. ನಾನು ನನ್ನ ವೈಯುಕ್ತಿಕ ನೆಲೆಯಲ್ಲಿ ಯಾವ ಲಿಂಗಭೇದ ಇಟ್ಟುಕೊಳ್ಳದವಳು.. ಇತಿಹಾಸದ ಕ್ರೂರ ಸತ್ಯಗಳನ್ನ ಅರಗಿಸಿಕೊಳ್ಳುತ್ತಲೆ ವಾಸ್ತವದ ಕಹಿಯನ್ನು ಆಶಾಭಾವದಿಂದ ನೋಡುವ ಮನಸ್ಥಿತಿ .ಮ ತ್ತು ಅಂಥಾದ್ದೊಂದು ಬದಲಾವಣೆಗೆ ಸ್ವಂತ ಮತ್ತು ಸುತ್ತಮುತ್ತಲಿನ ಕೊಳೆ ಯನ್ನ ಸಲ್ಪ ಮಟ್ಟಿಗಾದರೂ ದೂರಗೊಳಿಸುವ ಜವಾಬ್ದಾರಿ ನಮ್ಮದು ..ನಿಮ್ಮದು ಕೂಡ .....
ReplyDeletearthapurna chintane...illi vyavasteyannu arthisikollabekide..illiya nade nudi galige naavu kaarana ennuva satya aritukondaaga namma chintane drustikona hosa haadi tulidaaga badalaavane saadya..aa nittinalli hejje hakabekaagide...baraha manatattuvantide echharisuvantide...
thank you...bheti nIduttiri
Deleteನಿಮ್ಮ ಬರವಣಿಗೆ ವಿಚಾರ ಶ್ರೇಷ್ಠತೆ ತಲುಪಿಲ್ಲವಾದರೂ ; ಭಾವನೆಗಳು ಅರ್ಥಪೂರ್ಣವಾಗೆ ಇದೆ ಹಾಗು ಇದು ಈ ಸಮಯದ ಅನಿವಾರ್ಯ ಕೂಡ. ಜೀವಶಾಸ್ತ್ರ ಮತ್ತು ವಿಕಾಸದ ಹಂತದಿಂದ ನೀವು ಶುರು ಮಾಡಿದರೆ ತಾತ್ವಿಕವಾಗಿ ಎಲ್ಲವೂ(ಲಿಂಗ, ಪ್ರಭೇದ ) "ಜೀವಿ ಎಂಬ ಸಂಕೀರ್ಣ " ಸೃಷ್ಟಿಗಳೇ !! ಒಂದು ಸುಂದರ ಹಾಗು ತಿಳಿಯಾದ ಶುಭ್ರ ಮನಸಿನ ಪ್ರಚೋದಕತೆಯಲ್ಲೇ ಹೇಳುವುದಾದರೆ, " ಅರೋಗ್ಯಕರ ಮನಸ್ಸು ಯಾರ ಜವಾಬ್ದಾರಿ ? ..ಲಿಂಗ? ಪ್ರಭೇದ ? ಅಥವಾ ತಾತ್ವಿಕವಾಗಿ ಆರೋಗ್ಯಕರ ಎನ್ನುವ ಪದದ ಒಂದು ರೂಪು ಮಾನವ ಪ್ರಬೇಧದ ಬೇಡಿಕೆ ಅಷ್ಟೇ , ಅದರಂತೆ ಮಾತ್ರ ಯೋಚಿಸಿದರೆ ನೀವು ಹೇಳಿದ ತಾತ್ವಿಕ, ಧಾರ್ಮಿಕ ನಂಬಿಕೆ , ಶಿಲೆ, ಸಂಸ್ಕೃತಿ ಎಲ್ಲವನ್ನೂ ಬಿಡಿಸಿ " ಆರೋಗ್ಯಕರ" ಎನ್ನುವ ಅಂಶ ಹುಡುಕಲೇ ಬಹುದು . ನಾನು ಮೇಲೆ ಅಥವಾ ನಾನೇ ಮೇಲು ; ಹಾಗೆ ಮುಂದುವರೆದು ನನಗೆ ಆಗಿದ್ದೆ ಅನ್ಯಾಯ ಎನ್ನುವ ಭಾವ , ಅಬಿಪ್ರಾಯ ಬೆಳೆದಷ್ಟು ಬೇಕಿರುವ "ಅರೋಗ್ಯ" ರೂಪ ದೂರವೇ ನಿಲ್ಲುತ್ತೆ , ಅದೇ ಆಗಿದ್ದು ಕೂಡ. ಯಾವ ಪ್ರಕೃತಿ, ಭೂಮಿ ತಾಯಿಯು ಒಂದು ಜೀವ ಪ್ರಭೇದವನ್ನು ಪ್ರೀತಿಸಲು ಅದಕ್ಕೆ ತಾತ್ವಿಕ ಕಾರಣಗಳೂ ಇಲ್ಲ ; ಯಾವುದು ಜೀವಿಯನ್ನು ಪ್ರೀತಿಸುವುದೂ ಇಲ್ಲ . ಎಲ್ಲವೂ ನಿಯಮಗಳ ಭಂದಿಯಾಗಿ ಕೆಲವೇ ಕಾಲದಲ್ಲಿ ಒಂದು ಜೀವಿ ಪ್ರಭೇದದ ಸಂಖ್ಯೆ ಹೆಚ್ಚಿಸಿ ಅದರಿಂದಲೇ ನಾಮವಷೇಶ ಎಂಬ ಅನಂತ ಚಕ್ರದ ಹಾಗೆ. ಒಂದು ಪ್ರಕಾರ ನಿಮ್ಮ ಈ ಯೋಚನೆಯ ಮುಂದಿನ ಹಂತ ಲಿಂಗ ಭೇದ ಮರೆತು ಎಲ್ಲವನ್ನೂ ಜೀವಿಯಾಗಿ ಕಾಣಬೇಕಾದ ಅನಿವಾರ್ಯ . ಎರಡು ಸಾವಿರ ವರ್ಷದಿಂದ ಬೆಳೆದು ಬಂದಾ ಮಾನವ ತಾತ್ವಿಕ ರಚನೆಗೆ ಬೇಕಿರುವುದು ಹೊಸ ಅನುಭವ ಮತ್ತು ಮಾತು ಹೊಸ ರೀತಿಯ ಕಷ್ಟ ಪ್ರಯತ್ನ !! ಅದು ವಾಸ್ತವದಲ್ಲಿ ಸರಿಯಾದ ಹಾಗು ಶ್ರೇಷ್ಠವಾದ ಜವಾಬ್ದಾರಿ ; ಅಲ್ಲಿ ಲಿಂಗ ಭೇದದ ಬಗೆಗಿಂತಲೂ ಮುಂದಿನ ಪೀಳಿಗೆಗಳ ಸಾಮಾನ್ಯ ವಿಶ್ವ ಭಾವದ ಆಲೋಚನೆಗಳು ಮೂರ್ತ ರೂಪು ಪಡೆದು, ಒಂದು ಮುಂದಿನ ಪೀಳಿಗೆಯ ಚಿಕ್ಕ ಮೆದುಳಿನ ಯೋಚನೆಗೆ ಅಂಶವಾದರೆ ಸಾಕು...ಅದೇ ಹೊಸರೀತಿಯ ಹೊಸ ಸಂತೋಷ ..ಮುಂದೆ ಒಂದು ದಿನ ಪರಿಹಾರ ಕೂಡ ...
ReplyDeleteಕೇವಲ ಆಡುನಿಕ ಬಟ್ಟೆಗಳಿಂದ, ಮಾಡ್ಯಮಗಳಲ್ಲಿ ಪ್ರಸಾರವಾಗುವ ಮಾನಹಾನಿ ಸುದ್ದಿಗಳಿದಲಾಗಲಿ ಅಥವಾ ಅಂತರ್ಜಾಲದ ಅಪಾಯಕಾರಿ ತಾಣಗಳ ಹೂರಣದಿಂದಲಾಗಲೀ ಬ್ಲತ್ಕಾರಗಳು ಹೆಚ್ಚುತ್ತಿವೆ ಎನ್ನುವವರ ವಾದಕ್ಕೆ ನನ್ನ ವಿರೋಧವಿದೆ.
ReplyDeleteಈನಡುವೆ ನಾನು ಓದಿದ ಅತ್ಯುತ್ತಮ ಮನೋವಿಶ್ಲೇಷಕ ಬರಹವಿದು.
shared at:
https://www.facebook.com/photo.php?fbid=602047969839656&set=gm.483794418371780&type=1&theater

ಕುತೂಹಲ, ಇತಿಹಾಸ, ನಾಗರೀಕತೆ, ಮೂಢನಂಬಿಕೆಗಳು, ಭಿನ್ನಾಭಿಪ್ರಾಯಗಳು ಹಾಗೂ ಸಾಮಾಜಿಕ ಚಿಂತನೆಗಳನ್ನು ಒಟ್ಟುಗೂಡಿಸಿರುವ ಸುಂದರವಾದ ಲೇಖನ .. :)
ReplyDeleteರೀತಿ ನೀತಿಗಳ ಬದಲಾವಣೆ ಕಾಲಕಾಲಕ್ಕೆ ಅತ್ಯುತ್ತಮ .. ಆದರೆ ಅದು ಉತ್ತಮವಾದ ಬೆಳವಣಿಗೆಯ ಹಾದಿಯಲ್ಲಿರಬೇಕು .. :)
ಹೇಳುತ್ತಾ ಹೋದಲ್ಲಿ ಇತಿಹಾಸದ ಪುಟಗಳ ಮತ್ತೊಮ್ಮೆ ಮೆಲುಕು ಹಾಕಬೇಕು .. ಆದರೆ ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸುವೆ .. !! ಸರ್ವರಿಗೂ ಶುಭವಾಗಲಿ .. :)
nice article.
ReplyDelete