ಎಮ್ಮನೆ ಮಾಣಿಗೊಂದು ಹೆಣ್ಣು ಬೇಕು
ಖಾಲಿ ಮನೆಗೊಂದು ಕಣ್ ಬೇಕು
ಹುಡುಗಿ ಸಲ್ಪ ಸಣ್ಣಕ್ಕಿದ್ರು ಅಡ್ಡಿಲ್ಲೆ
ಉದ್ದ ಎತ್ರ ನೋಡ್ತ್ವಲ್ಲೆ
ಎಂಗಳ ಭಾಷೆ ಅರ್ಥಾದ್ರೆ ಸಾಕು
ಚಂದ ಎಲ್ಲ ಸುಮ್ನೆ ಶೋಕು
ಅಡಿಕೆ ಆರ್ಸಕ್ಕೆ ಬರಕ್ಕು
ಹಾಲು ಕರೆಯದ್ ಗೊತ್ತಿಕ್ಕು
ಕೊಟ್ಟಿಗೆ ಕೆಲಸ ಮಾಡಕ್ಕು
ತ್ವಾಟಕ್ಕೆಲ್ಲ ಹೋಯಕ್ಕು
ಎಮ್ಮನೆ ಮಾಣಿ ಒಬ್ಬನೆಯಾ
ಹತ್ತೆಕರೆ ತ್ವಾಟ ಗದ್ದೆ ನಮ್ದೆಯಾ
ಕೃಷಿ ಬಿಏ ಮಾಡ್ಕ್ಯೈಂದ
ಕಷ್ಟ ಸುಖ ತಿಳ್ಕೈಂದಾ
ಹಗಲು ರಾತ್ರಿ ದುಡೀತ
ನಂಗ್ಳಂದ್ರೆ ಜೀವ ತುಡೀತ,
ಮನೆಗೊಂದು ಹೆಣ್ಣು ಗತಿ ಇಲ್ಲೆ
ಕೈ ಕಾಲು ಎಂಗೆ ಹರಿತಲ್ಲೆ
ಎಮ್ಮನೆ ಮಾಣಿಗೊಂದು ಹೆಣ್ಬೇಕು
ಅವನ ಖಾಲಿ ಮನಸಿಗೊಂದು ಕಣ್ಬೇಕು....
ಶಮ್ಮಿ
ವಾಹ್ ವಾಹ್, ಹಳ್ಳಿಯ ಬದುಕನ್ನು ಕಟ್ಟಿಕೊಂಡ ಮಾಣಿಯ ಕಥೆ ಕವಿತೆಯಾಗಿ ಹರಿದಿದೆ . ಇದು ಮಾಣಿಯ ಕಥೆ ಅಷ್ಟೇ ಅಲ್ಲಾ, ಕೃಷಿಯನ್ನು ನಂಬಿ ಬದುಕಲು ಹೊರಟ ಬಹಳಷ್ಟು ಹಳ್ಳಿಯ ಗಂಡು ಮಕ್ಕಳ ಕಥೆ ಇದೇನೇ. ಇಲ್ಲಿ ಮಾಣಿ ಹಳ್ಳಿಯ ಗಂಡುಮಕ್ಕಳ ಪ್ರತಿನಿಧಿ ಅಷ್ಟೇ . ಚಂದದ ಕವಿತೆ .
ReplyDeleteThank u Anna, hedge baruttiri
Delete