ಓದು ಯಾಕೆ ಬೇಕು..ಅನ್ನೋ ಪ್ರಶ್ನೆಗೆ ಹಲವಾರು ಉತ್ತರ ಸಿಗುತ್ತೆ, ಜ್ಞಾನಾರ್ಜನೆಗೆ ಅನ್ನೋದು ಸಾಮಾನ್ಯ ಉತ್ತರವಾದರೆ ಓದುವದು ಚಟ ಅನ್ನೋ ಮಂದಿಯೂ ಬಹಳಿದ್ದಾರೆ....ನನಗೆ ಓದು ಅದ್ಯಾವುದಕ್ಕೂ ಅಲ್ಲ, ನನ್ನ ಬಿಟ್ಟು ಹೋದ ಪುರಾತಾನತೆಯ ಕೊಂಡಿಗೆ ವರ್ತಮಾನವನ್ನ ನಾನು ಬೆಸೆದುಕೊಳ್ಳುತ್ತಾ ನನ್ನಿಂದ ನನ್ನೊಳಗೆ ನಾನೇ ಅನಾವರಣಗೊಳ್ಳುತ್ತಾ ಮತ್ತಷ್ಟು ಮಗದಷ್ಟು ಮನುಷ್ಯ ಜೀವಿಯಂತೆ ಬದುಕಲು, ನನ್ನನ್ನ ನನ್ನ ಇರುವಿಕೆಯನ್ನ ಅರ್ಥೈಸಿಕೊಂಡು ಆದಷ್ಟು ಇತರರಿಗೆ ಸಹಾಯ ಆಗೋ ಹಾಗೆ ಬದುಕೋಕೆ ಓದು ಬೇಕು, ಅದು ನನಗೆ ವಿದೇಶ ಸುತ್ತಿಸುತ್ತೆ,ಕೂತಲ್ಲೇ ಅಲ್ಲಾದೀನನ ಮಾಯಾ ಚಾಪೆಯಂತೆ ಯಾವುದೋ ಕಾಣದ ಭೂತಕ್ಕೆ, ಮತ್ತು ನಿಲುಕದ ಭವಿಶ್ಯತ್ತನ್ನ ತೋರಿಸುತ್ತೆ, ಒಂಥರಾ ಮತ್ತು ಅದು...ನನ್ನ ಬಳಿ ಈಗ ೩೫೦ ರಿಂದ ೪೦೦ ಪುಸ್ತಕ ಇರಬಹುದು...ಪಟ್ಟಿ ಮಾಡಿಲ್ಲ, ಅವೆಲ್ಲ ಓದಿದ್ದೀನಿ ಆದರೂ ಹಿಂದೆ ಓದಿದ ಯಾವುದೋ ಸಾಲುಗಳು ಇಡೀ ರಾತ್ರಿ ನನ್ನ ನಿದ್ದೆ ಕೆಡಿಸುವುದು ಉಂಟು... ನೀವು ಹಂಚಿಕೊಳ್ಳಿ..ಓದು ಯಾಕೆ ಬೇಕು? ನೀವ್ಯಾಕೆ ಓದುತ್ತೀರಾ? ಯಾವುದಾದರೂ ಪುಸ್ತಕ ನಿಮ್ಮ ಬದುಕು ಬದಲಿಸಿತಾ...ಅಂತರಂಗದೆಡೆಗೆ ನಿಮ್ಮ ಪಯಣ ಪುಸ್ತಕದೊಡನೆ ಸಲೀಸಾಗಿ ಸಾಗುತ್ತಿದೆಯೆ....
ಓದು ಸರ್ವತ್ರ ಸಹಕಾರಿ. ಯಾವ ರೀತಿ ಓದಿಗೆ ಒಗ್ಗಿದ್ದೇವೆ ಅನ್ನುವುದರ ಮೇಲೆ ನಮ್ಮ ಮನೋ ದಿಕ್ಕು ಸಾಗುವುದು. ಒಳ್ಳೆಯ ಕಿರು ಬರಹ.
ReplyDelete