Wednesday, December 10, 2014

ಬಟ್ಟೆ ಬಲಾತ್ಕಾರ ಮತ್ತು ಆಧುನಿಕತೆ

ಇತಿಹಾಸವನ್ನೊಮ್ಮೆ ಓದಬೇಕು, ಮಾನವ ನಿರ್ಮಿತ ಧರ್ಮಗಳ  ಸೃಷ್ಟಿಯನ್ನು ಮತ್ತೊಮ್ಮೆ ಓದಬೇಕು ,ಅಲ್ಲೆಲ್ಲಾ ರಕ್ತ ಚೆಲ್ಲಿದ ಕಲೆಗಳನ್ನೊಮ್ಮೆ  ಮೂಸಬೇಕು ,ಅವೆಲ್ಲಾ ಹೊಸಾ ಧರ್ಮದ ಹುಟ್ಟಿನ ಗುರುತುಗಳು, ಹಿಂಸೆ ಇಂದ  ಹುಟ್ಟಿದ ಧರ್ಮಗಳು ಅಹಿಂಸೆಯನ್ನ ಪ್ರತಿಪಾದಿಸುತ್ತಾವಾದರು ಹೇಗೆ? ಇಲ್ಲಿ  ಮಾನವತೆಯನ್ನ   ರಾಜ್ಯಗಳ ವಿಸ್ತಾರ ಪ್ರಕ್ರಿಯೆಯಲ್ಲಿ ಹೂಳಲಾಗಿದೆ, ಬಡವರ ಶೋಷಣೆಯನ್ನ ಗಡಿ ವಿಸ್ತಾರಕ್ಕೆ  ಕಣ್ಣೀರ ಹನಿಯನ್ನ ಆಯುಧಗಳಿಗೆ ಮಾರಲಾಗಿದೆ, ಇನ್ನು ಹಿಂದೆ ಹೋದರು ಅಷ್ಟೇ .. ಬೆಂಕಿಯನ್ನ ಮತ್ತು ಅಹಾರವನ್ನ  ತಿನ್ನುವದನ್ನ ಕಂಡು  ಹಿಡಿದ ನಿಯಾಂಡರ್ಥಲ್  ಮಾನವ ತನ್ನ ಅವಾಸ ಸ್ಥಾನಕ್ಕೆ ಯುದ್ಧ  ಮತ್ತು ತನ್ನ ಗುಂಪಿನ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದ. ಅ ಲ್ಲಿ ಉಳಿವಿಗಾಗಿ ನಡೆಯುತ್ತಿದ್ದ ಹೋರಾಟ ಇಲ್ಲಿ ದೇಶ ವಿಸ್ತರಣೆಗೆ,ಧರ್ಮ ವಿಸ್ತರಣೆಗೆ ನಡೆಯುತ್ತಿದ್ದ ಹೋರಾಟ ಎಲ್ಲೆಲ್ಲು ಒಂದು ಲಿಂಗದವರು ಮಾತ್ರ ಅವರ ಇತಿಹಾಸವನ್ನ ಬರೆದರು .... ಅಥವಾ ಉಳಿಸಿ ಹೋದರು ..  ಅಲ್ಲಿ ನನ್ನ ಕುಲದ ಮೂಲಸೆಲೆ ಕಾಣಲೇ ಇಲ್ಲ ..ಸತ್ಯವಾದರು ವಿಪರ್ಯಾಸ!!
ಇವತ್ತಿಗೂ ವೇದಕಾಲ ಎಂದರೆ ಗಾರ್ಗಿ ಮೈತ್ರೇಯಿ ಮಾತ್ರ ಸಿಕ್ಕುತ್ತಾರೆ, ಇನ್ನು ಮುಂದೆ ಬಂದರೆ ಜಗತ್ತಿನ ಶ್ರೇಷ್ಠ ನಾಗರಿಕತೆಗಳಲ್ಲಿ ಒಂದಾದ ಗ್ರೀಸ್ ಮತ್ತು ರೋಮನ್ನರಲ್ಲೂ ಅಶ್ಟೆ... sappo , Aesara ,ಕ್ಲಿಯೋಪಾತ್ರ ದಿ ಆಲ್ಕೆಮಿಸ್ಟ್ ,Corinna ಇತ್ಯಾದಿ .... ಇತ್ಯಾದಿ, ರೋಮನ್ನರಲ್ಲಿ ಸಲ್ಪ ಜಾಸ್ತಿಯೇ ನನ್ನವರ ದನಿಗಳಿದ್ದವು , , ಆದರೆ ನನ್ನ ನೆಲ ಸಮಷ್ಟಿಯ ಹೆಸರಲ್ಲಿ ನನ್ನ  ಕಟ್ಟಿ  ಹಾಕಿತು, ಇದರಲ್ಲಿ ಏನಿದೆ ಯೋಚಿಸೋದು ಅನ್ನಬೇಡಿ, ನೀವು ಬರೆದದ್ದಷ್ಟೇ  ಇತಿಹಾಸವೇ?? ಅ ಪುಟಗಳಲ್ಲಿ ಕೇವಲ ಪುರಾಣ ಪುಣ್ಯಕಥೆಗಳ ದೇವಿಯರ ಸ್ಥಾನ ಅಷ್ಟೇ ನೋಡಲು ಸಿಕ್ಕುವುದು, ಅಪ್ಪಟ ಹೆಣ್ಣಾದ ಸೀತೆಯನ್ನು ದೇವತೆ ಮಾಡಿ, ಅಕೆಗೆ ಅಮಾನುಷ ಗುಣಗಳ ತುಂಬಿ ಆಕೆಯ ಬಾಯಿ ಕಟ್ಟಿದ್ದೀರಿ .... ರಾವಣನ ಹೆಂಡತಿಯನ್ನು ಕೂಡ ಅದೇ ಪತಿವ್ರತೆಯರ ಪೈಕಿಗೆ ಸೇರಿಸಿದ್ದೀರಿ...
ಅಮಿಬಾದಂಥ ಏಕಕೋಶ ಜೀವಿಯನ್ನುಳಿದು ,ಪ್ರತಿಯೊಂದು ಜೀವಿಯು ತನ್ನ ವಂಶಾಭಿವೃದ್ಧಿಗೆ ತನ್ನಂಥದ್ದೆ ಆದರೆ ಮೂಲಭೂತವಾಗಿ ಕೆಲ ವ್ಯತ್ಯಾಸಗಳುಳ್ಳ ಜೀವಿಯನ್ನ ವಿಕಾಸ ಪ್ರಕ್ರಿಯೆಯಲ್ಲಿ ಜೊತೆಯಾಗಿ ಪಡೆದಿರುತ್ತದೆ... ಇಲ್ಲಿ ಮೇಲು ಕೀಳುಗಳಿರುವುದಿಲ್ಲ.... ಯಾಕೆಂದರೆ ಹೋರಾಟ ಕೇವಲ ದಿನ ಗಂಟೆಗಲದ್ದಾಗಿರುತ್ತದೆ ಮತ್ತು ನಿರ್ಧಿಷ್ಟ ಸ್ವರೂಪದ್ದಾಗಿರುತ್ತದೆ... ಅಕಶೇರುಕಗಳಿಂದ ಸಲ್ಪ ಮೇಲ್ಮಟ್ಟದ ಜೀವಿಗಳು ಸಸ್ತನಿಗಳು ಮತ್ತು ಕಶೇರುಕಗಳು.ಕೂಡ .. ಪ್ರತೀ ಜೀವಿಯ ಸೃಷ್ಟಿಗೂ ಬ್ರಹ್ಮಾಂಡ ದ ಎಲ್ಲ ಪರಿಸ್ಥಿತಿಗಳು ಸಹಕರಿಸುವುದರ ಜೊತೆ ಭೂಮಿಯೂ ಲಕ್ಷಗಟ್ಟಲೆ  ವರ್ಷ ತೆಗೆದುಕೊಂಡಿದೆ ... ಜೀವವಿಕಾಸ ಪ್ರಕ್ರಿಯೆಯ ಜೊತೆಗೆ ಅವುಗಳ ಉಳಿವಿಗಾಗಿ ಹೋರಾಟ ಅಥವಾ ಜೀವನ ವಿಧಾನಗಳು ಸಮಯದಿಂದ ಸಮಯಕ್ಕೆ ಬದಲಾಗಿವೆ.... ಹಿಮಯುಗದ ನಂತರ ಹುಟ್ಟಿದ  ಮಾನವನ ಉಗಮ ಪ್ರಕ್ರಿಯೆಗೆ ಅವನ ಮೆದುಳಿನ ವಿಕಾಸಕ್ಕೆ ಪೂರಕ ವಾತಾವರಣ ವಿತ್ತು  ... ಹೀಗೆ ಹುಟ್ಟಿದ ಮಾನವ ಜೀವಿಯಲ್ಲಿ ಮೊದ  ಮೊದಲು ಭೇದಗಳಿರಲಿಲ್ಲ... ಅಲ್ಲಿ ನಿತ್ಯದ ಹಸಿವಿಗಾಗಿ ಹೋರಾಟವಿತ್ತು .. ಬಟ್ಟೆಯ ಉತ್ಪತ್ತಿ ಆಗಿರಲಿಲ್ಲ... ಬೆಂಕಿಯ ಉಪಯೋಗ ಮತ್ತು ಬೇಯಿಸಿ ತಿನ್ನುವುದು ಗೊತ್ತಿರಲಿಲ್ಲ.... ಬಹುಶಃ ಸಂತಾನೋತ್ಪತ್ತಿ  ಕೂಡ ಆಗಿನ ಅ ವಶ್ಯಕತೆಯೇ ಅಗಿತ್ತು... ಹೀಗೆ ನಿಧಾನವಾಗಿ ಜನಸಂಖ್ಯೆ ಹೆಚ್ಚಿದಂತೆಲ್ಲಾ ಗುಂಪುಗಳು ವಿಭಜನೆಯಾಗಿ... ಅನೇಕ ಪ್ರದೇಶಗಳಲ್ಲಿ ವಾಸಿಸಲು ಆರಂಭಿಸಿದವು.. ಅದು ಈಗಿನ ಸೋ ಕಾಲ್ಡ್ ಸಮಾಜದ ಮುಂಚಿನ ದಿನಗಳು ... ಅಲ್ಲಿ  ಒಂದು ವರ್ಗ ಮನೆಯಲ್ಲುಳಿಯಿತು... ಮತ್ತೊಂದು ವರ್ಗ ಆಹಾರಕ್ಕೆ, ಕಾದಾಟಕ್ಕೆ ಹೊರಜಗತ್ತಿಗೆ ತೆರಕೊಂಡಿತು . ಮ ತ್ತು ಅವರು ಮನೆಯಲ್ಲುಳಿದವರನ್ನ ಅಷ್ಟಕ್ಕೇ ಸೀಮಿತಗೊಳಿಸಿ  ತಮ್ಮ ಹಿಡಿತವನ್ನು ಕುಟುಂಬಗಳ ಮೇಲೆ ಹಿಡಿದಿತ್ತು ಕೊಂಡರು ಮನೆಯ ಯಜಮಾನರೆಂದು ಕರೆಸಿಕೊಂಡರು.ಹೀಗೆ ಹೆಣ್ಣು ಗಂಡುಗಳ ವರ್ಗೀಕರಣ ಆರಂಭವಾಯ್ತು  ತನ್ನ ಸುಖ ಸೌಲಭ್ಯಗಳಿಗೆ  ರಕ್ಷಣೆಯ ಉದ್ದೇಶಕ್ಕೆ ಗುಂಪು ಗುಂಪು ಜನಗಳು ಒಟ್ಟಾಗಿ ವಾಸಿಸಲು ಅರಂಭಿಸಿದರು... ನಗರಗಳ ಪರಿಕಲ್ಪನೆ  ಮೊದಲಾದ್ದು ಆಗ.. ತಮ್ಮಲ್ಲಿಲ್ಲದ ವಸ್ತುಗಳನ್ನ ಬೇರೆಯವರಿಂದ ಪಡೆಯುವುದು,ತಮ್ಮಲ್ಲಿನ ವಸ್ತುಗಳಿಗೆ ಬದಲಾಯಿಸಿಕೊಳ್ಳುವುದು ಮುಂತಾದ ಕ್ರಿಯೆಗಳು ಆರಮ್ಭವಾದಂತೆಲ್ಲ ವ್ಯಾಪಾರದ ಪರಿಕಲ್ಪನೆ ಶುರುವಾಯಿತು... ಪ್ರತಿ ಗುಂಪು ನಿರ್ಧಿಷ್ಟವಾದ ಒಂದು ದೈವಕ್ಕೆ ತಲೆಬಾಗುತ್ತಿತ್ತು.. ಮತ್ತು ಸಂಮಾಜಿಕ ಕಟ್ಟು ಕಟ್ಟಲೆಗಳನ್ನ ಚಾಚು ತಪ್ಪದೆ ಅನುಸರಿಸುತ್ತಿತ್ತು...ಜೀವನ ವಿಧಾನಗಳು ಮತ್ತು ಪಾಪ ಪುಣ್ಯಗಳ ಪರಿಕಲ್ಪನೆಗಳು ಪರಿಚಿತವಿದ್ದ ಕೆಲ ಕಥೆಗಳೊಮ್ದಿಗೆ ಬೆಸೆದುಕೊಂಡು ಪುರಾಣ ಪುಣ್ಯಕಥೆಗಳು ಹುಟ್ಟಿಕೊಂಡವು ..ವಸ್ತುಗಳಂತೆ ಮನುಷ್ಯರನ್ನು ಅದರಲ್ಲೂ "ಮಾತಿಲ್ಲದ" ವರ್ಗವನ್ನು ತಮ್ಮ ಉಪಯೋಗಕ್ಕೆ  ಬಳಸಿಕೊಳ್ಳುವ ಹೀನ  ಕ್ರಿಯೆಗಳು ಈ ಕಾಲದಲ್ಲೇ ಅರಂಭವಾಯಿತು...
ಅಕ್ಷರ ಜ್ಞಾನ ಬಾಯ್ದೆರೆಯ ಮೂಲಕ ಬಂದ ಕಥೆಗಳನ್ನ ಸಂಜ್ಞೆ ಮತ್ತು ಆಕಾರಗಳಲ್ಲಿ ಚಿತ್ರಿಸುವದನ್ನ ಬಿಟ್ಟು ನಿರ್ಧಿಷ್ಟ ರೂಪದಲ್ಲಿ ಅದನ್ನು ದಾಖಲಿಸಲು ಸಹಾಯ ಮಾಡಿತು ... ಅಲ್ಲೂ ಮನೆಯಲ್ಲುಳಿದ ವರ್ಗವನ್ನ ಸಂಪೂರ್ಣ ನಿರ್ಲಕ್ಷಿಸಲಾಯಿತು.. ಬಹುಶಃ ಸೊಲ್ಲೆತ್ತಿದ ಕೆಲವರು ಬಿಟ್ಟರೆ ಮತ್ತೆಲ್ಲ ಅವರ ಸ್ಥಾನಗಳಿಗೆ ಹೋರಾಡುವ ಪ್ರಕ್ರಿಯೆಯನ್ನೇ ಮರೆತಿದ್ದರೇನೊ.... ಕಾಲ ಬದಲಾಯಿತು.ಆ ಧುನಿಕತೆ ಮೊದಲಾಯಿತು... ಕೇವಲ ಸುಶ್ರುತ  ಚರಕ ಮುಂತಾದವರಿದ್ದ ಕಡೆ ಮೇರಿ ಕ್ಯೂರಿ ಯಂಥವರು ಬಂದರು ... ಅಸ್ತಿತ್ವಕ್ಕಾಗಿ ಹೋರಾಟ ಶುರುವಾದ ಕಾಲಕ್ಕೆ ತಾವು ಕಳಕೊಂಡ ಜಗತ್ತುಗಳು ಈ ನಿರ್ಲಕ್ಷಿತ ಜನಾಂಗಕ್ಕೆ ಗೋಚರಿಸಿತೇನೊ... ಅಂತುಹದಿನಾಲ್ಕು ಹದಿನೈದು  ಹದಿನಾರು ಹದಿನೇಳನೆಯ ಶತಮಾನದ ಹೊತ್ತಿಗೆ ಮಾತುಗಳು ಹುಟ್ಟಿಕೊಂಡವು ... ಅವುಗಳನ್ನ  ಕೂಡ ಮೊದ  ಮೊದಲು ನಿರ್ಲಕ್ಷಿಸಲಾಯ್ತು... ಅನೇಕ ಕ್ರಾಂತಿಗಳು ನಡೆದ ನಂತರ ಅವುಗಳ ದನಿ ಕೂಗು ಜಗತ್ತಿಗೆ ಸ್ಪಷ್ಟ ಕೇಳಿಸಲಾರಂಭಿಸಿತು ... ಇದೀಗ ಹೋರಾಟ ಎಲ್ಲ ಸ್ತರಗಳಲ್ಲಿದೆ ಆದರೆ ಈಗಿನ ಹೋರಾಟ ಬರೀ ನಿರ್ಲಕ್ಷಿತ ಜನಾಂಗಕ್ಕೆ ಸೀಮಿತವಾಗಿಲ್ಲ.... ಹೆಣ್ಣು ತನ್ನ ಹಕ್ಕುಗಳಿಗೆ ಪರಿಪುರ್ನವಾಗಲ್ಲದಿದ್ದರು ತನ್ನ ಸ್ವಂತ ನೆಲೆಯಲ್ಲಿ ಪ್ರತಿ ದಿನ ಪ್ರತಿ ಕ್ಷಣ ಹೋರಾಡುವುದು ಇಂದಿನ ಅನಿವಾರ್ಯತೆ ಅಂದರೆ ತಪ್ಪಾಗಲಾರದು...

ಎಲ್ಲಿ ನೋಡಿ...ಒಂದು ಲಿಂಗದ ಕೂಸುಗಳನ್ನ  ಹುಟ್ಟಿನಿಂದಲೇ  ನೀನು ಹೀಗೆಯೇ ಇರಬೇಕು ಎಂದು ತಿದ್ದಲಾಗುತ್ತದೆ... ಹಾಗೆ ರೂಪುಗೊಂಡ  ಮನಸ್ಸುಗಳು ಬದಲಾವಣೆ ಯನ್ನ ಸುಲಭಕ್ಕೆ ಒಪ್ಪಿಕೊಳ್ಳಲಾರವು ..ಇವತ್ತಿಗೂ ಹಳ್ಳಿಯಲ್ಲಿ ಜೀನ್ಸ್ ಹಾಕುವದನ್ನ  ದೊಡ್ಡ ತಪ್ಪೆಂದು ಭಾವಿಸಲಾಗುತ್ತದೆ...ನಾನು ಬಟ್ಟೆಯನ್ನ ಯಾಕೆ ಎಳೆದು ತಂದೆ ಈ ವಿಷಯಕ್ಕೆ ಎಂದರೆ , ಮನುಷ್ಯನ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಅದು ಒಂದು ಮತ್ತು ಆ ಅವಶ್ಯಕತೆಗಳ  ಮೇಲೂ ಒಂದು ಜನಾಂಗ ನಿರಂತರವಾಗಿ ಹೇಗೆ  ಹತೋಟಿ ಸಾಧಿಸಲು ಯತ್ನಿಸುತ್ತಿದೆ ...ಆ ಮೂಲಕ ಮತ್ತೆ ಮತ್ತೆ ಒಂದು ಲಿಂಗದ ಜನರನ್ನ ವ್ಯವಸ್ಥಿತವಾಗಿ ಕೆಳ ತಳ್ಳಲು ಬಳಸಿಕೊಳ್ಳುತ್ತಿದೆ ಎನ್ನುವುದು... ಪರಂಪರಾಗತ ರೂಢಿ ಯಲ್ಲಿ ಅಷ್ಟೆಲ್ಲಾ ಅತ್ಯಾಚಾರ ಆಗುತ್ತಿರಲಿಲ್ಲ ಎಂದು ಮಾತಾಡುವವರು ಈಗ ಅದೇ ವಿಷಯದಲ್ಲಿ ಮುಂದುವರೆದು ಆಗುತ್ತಿರುವ ಅನಾಚಾರಗಳಿಗೆ ನಮ್ಮ ಉಡುಗೆ ತೊಡುಗೆ ಕಾರಣ ಎನ್ನಲಾರಂಭಿಸಿದ್ದಾರೆ..ಇದು ಅತ್ಯಂತ ಹಾಸ್ಯಾಸ್ಪದ ... ಜಗತ್ತಿನ ಒಂದೊಂದು ಖಂಡಗಳಲ್ಲಿ ಒಂದೊಂದು ರೀತಿಯ ವಾತಾವರಣ ..ಆಯಾ ವಾತಾವರಣಕ್ಕೆ ತಕ್ಕುದಾದ ಮತ್ತು ಸರಿ ಎನ್ನಿಸುವ ಉಡಿಗೆಗಳನ್ನ  ತೊಟ್ಟುಕೊಳ್ಳುವುದು ಅದು ತೀರಾ  ಸಹಜ ವಿಚಾರ...ಈಗಿನ ದಿನಮಾನ ಜಗತ್ತು  ಬೇರೆ ಖಂಡಗಳಲ್ಲಿ ಗುರುತಿಸಲ್ಪದುತ್ತಿಲ್ಲ, ಅಂಥಾದ್ದರಲ್ಲಿ ಬಟ್ಟೆಯ ಕಟ್ಟು ಕಟ್ಟಲೆಗಳು ಸರಿ ಎನ್ನಿಸುವುದು ಇಲ್ಲ, ನಿರ್ಲಕ್ಷಿತ ಜನಾಂಗದ ಮೇಲೆ ಹಿಂದೆ ನಾನು ಹೇಳಿದ ಸಮಾಜ ಪ್ರಕ್ರಿಯೆ ವ್ಯಾಪಾರಿಕರಣ ಆರಂಭ ಆದಾಗಿನಿಂದಲೂ ನಿರಂತರವಾಗಿ  ಮಾನಸಿಕ ಧಾರ್ಮಿಕ ಮತ್ತು ದೈಹಿಕ ಅತ್ಯಾಚಾರಗಳು ನಡೆಯುತ್ತಲೇ ಇವೆ... ಅದಕ್ಕೆ ಬಟ್ಟೆಯಲ್ಲ  ಕಾರಣ ಗಂಡು ಎಂಬ ಲಿಂಗ ಹೆಣ್ಣನ್ನು ತನ್ನಂತೆಯೇ ಒಂದು ಜೀವಿ ಎಂದು ಒಪ್ಪಿಕೊಳ್ಳಲಾಗದಿರುವುದು...ಬಟ್ಟೆಗಳ  ಬಗ್ಗೆ ಮಾತಾಡುವವರನ್ನ, ಹೆಣ್ಣಿನ ನಡುವಳಿಕೆಗಳು ಹೀಗೆ ಇರಬೇಕು ಅನ್ನುವವರನ್ನ, ಅಕೆಯನ್ನ ಇನ್ನು ಅಬಲೇ ಎಂದು ಟ್ರಂಪ್ ಕಾರ್ಡ್ ಮಾಡಿ ಕೂರಿಸುವದನ್ನ ನಾನು ವಿರೋಧಿಸುತ್ತೇನೆ...
ಅತ್ಯಾಚಾರಕ್ಕೆಳಸುವ ಮನಸ್ಸಿಗೆ ವಯಸ್ಸು ಅಂತಸ್ತು ಬಟ್ಟೆ ಯಾವುದು ಕಾಣಿ ಸುವದಿಲ್ಲ... ಅದು ಒಂದು ಹೀನ ಸ್ಥಿತಿ... ಅದಕ್ಕೆ ಆಧುನಿಕತೆ ಕಾರಣ  ಅದು ಕಾರಣ ಇದು ಕಾರಣ ಎಂದು ಹೇಳುವ ಮನಸ್ಥಿತಿ ಅತ್ಯಂತ ಹೇಯ ಮನಸ್ಥಿತಿ... ಮತ್ತು ಒಂದು ಹೆಣ್ಣನ್ನ  ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು ಎನ್ನುವ ಧೋರಣೆ, ಗೌರವದ ಕೊರತೆ ,ಇದು ಕೂಡ ನಮ್ಮ ಪರಂಪರಾಗತ ವಿಚಾರಗಳೇ ಕಟ್ಟಿ ಕೊಟ್ಟ ಚಿತ್ರಣ ... ಸಿನೆಮಾ ನೋಡಿ.. ಅಲ್ಲಿ ಹೆಣ್ಣು  ಪಾತ್ರಗಳನ್ನು"ಬಳಸಿಕೊಳ್ಳಲಾಗುತ್ತದೆ" ಮತ್ತೆ ಗಂಡು ಸಮಾಜ ತನ್ನ "ಮಾಚೋ" ಇಮೇಜನ್ನು ಮಾತ್ರ ಒಪ್ಪಿಕೊಳ್ಳುತ್ತದೆ.....

ಇತ್ತೀಚಿಗೆ ಒಂದು ಸಣ್ಣ ಮೂಲೆಯಲ್ಲಿ ಜಗತ್ತು ಬದಲಾಗುವ ಎಲ್ಲ ಪ್ರಕ್ರಿಯೆಗಳು ಆರಂಭವಾಗಿದೆ,ಕೇಳಿಸದ ನನ್ನವರ ದನಿಗಳು ಕೂಡ ಅತಿ ಸ್ಪಷ್ಟವಾಗಿ ಕೇಳಿ ಸಲಾರಂಭಿಸಿವೆ, ಇನ್ನು ನೀವು ನಿರ್ಲಕ್ಷಿಸಲಾರಿರಿ, ಲಿಂಗಭೇಧ  ಮುಕ್ತ ಸಮಾಜಕ್ಕಾಗಿ ನಮ್ಮ ಮನೆಯಲ್ಲಿನ  ಮನಸ್ಸುಗಳನ್ನ ನಾವೇ ತಿದ್ದ ಬೇಕು..ನಿಜ ಸ್ವಾತಂತ್ರ್ಯ ಸ್ವೇಚ್ಚೆಯಲ್ಲ, ವ್ಯಕ್ತಿಗತ ಸ್ವಾತಂತ್ರ್ಯ ಸಮಾಜದ ಆರೋಗ್ಯಕ್ಕೆ ಧಕ್ಕೆ ತರಬಾರದು..ಆದರೆ ಅವರುಗಳ ವೈಯುಕ್ತಿಕ ಇಚ್ಛೆಯನ್ನ ಗೌರವಿಸುವುದು ಕೂಡ ಸಮಾಜದ ಅತ್ಯುಚ್ಚ ಮನಸ್ಥಿತಿಯೇ ಸರಿ. ಹಾಗೊಂದು ಹೊಸಾ ಜಗತ್ತಿಗೆ ಮತ್ತಷ್ಟು  ಲಿಂಗಭೇದವಿಲ್ಲದ ಆರೋಗ್ಯಕರ ಮನಸ್ಸುಗಳು ಒಟ್ಟುಗೂಡಬೇಕು, ಮಾನವ ಜನಾಂಗದ ಉಳಿವಿಗಾಗಿ ಎರಡು ಜೀವಿಗಳು ಪರಸ್ಪರ ಪೂರಕ ಅನ್ನುವದನ್ನ, ಪರಸ್ಪರ ಗೌರವ ಪ್ರೀತಿ ಮಾತ್ರ ಸುಂದರ ಸಮಾಜ ಕಟ್ಟಿಕೊಳ್ಳಬಲ್ಲದು ಎನ್ನುವದನ್ನ ತಿಳಿಸುವ(ಪ್ರಾಕ್ಟಿಕಲ್ ) ಕ್ರಿಯೆಗಳು ಈಗಿವ ಅತಿ ಅವಶ್ಯಕತೆಗಳು, ಕಾನುನಿನಲ್ಲು ಕೂಡ ಹೀನ ಕೃತ್ಯಗಳಿಗೆ ಅಷ್ಟೇ  ಹೀನತರದ ಸ ಕಠಿಣ  ಶಿಕ್ಷೆಗಳು ಮೊದಲಾಗಬೇಕು... ನಿಮ್ಮೊಳಗೆ ನೀವು ನಮ್ಮೊಳಗೇ ನಾವು ಬದಲಾಗಬೇಕು.. ಹೊಲಸು ಮನಸ್ಥಿತಿಗಳಿಗೆ ಮುಚ್ಚಿದ ಸಭ್ಯತೆಯ ಬಟ್ಟೆಗಳು ಆದಷ್ಟು ಬೇಗ ಕಳಚಿ ಬೀಳಲಿ. ನಾನು ನನ್ನ ವೈಯುಕ್ತಿಕ ನೆಲೆಯಲ್ಲಿ ಯಾವ ಲಿಂಗಭೇದ ಇಟ್ಟುಕೊಳ್ಳದವಳು.. ಇತಿಹಾಸದ ಕ್ರೂರ ಸತ್ಯಗಳನ್ನ ಅರಗಿಸಿಕೊಳ್ಳುತ್ತಲೆ ವಾಸ್ತವದ ಕಹಿಯನ್ನು ಆಶಾಭಾವದಿಂದ  ನೋಡುವ ಮನಸ್ಥಿತಿ .ಮ ತ್ತು ಅಂಥಾದ್ದೊಂದು  ಬದಲಾವಣೆಗೆ ಸ್ವಂತ ಮತ್ತು ಸುತ್ತಮುತ್ತಲಿನ ಕೊಳೆ ಯನ್ನ ಸಲ್ಪ ಮಟ್ಟಿಗಾದರೂ ದೂರಗೊಳಿಸುವ  ಜವಾಬ್ದಾರಿ ನಮ್ಮದು ..ನಿಮ್ಮದು ಕೂಡ .....




Sunday, September 28, 2014

ಮಾತನುಳಿದ ಕಸಿವಿಸಿ

ಬದುಕೊಂದು ತಿರುವಲ್ಲಿ ಬಂದು ನಿಂತಿದೆ...ಎಲ್ಲ ನೋಡಿಯಾಯ್ತು ಅನ್ನುವ ಮೆಂಟಲೀ ರಿಟಾಯರ್ಡ್  ಸ್ಥಿತಿಯಲ್ಲೂ ಮತ್ತೇನೋ ಹುಡುಕೋ ಕುತೂಹಲ...ಒಮ್ಮೊಮ್ಮೆ ಮನಸ್ಸು ಅವಲೋಕನಕ್ಕೆ ತೊಡಗುವುದು, ಗತದ ಸಂಪತ್ತಿನಲ್ಲಿ ಏನೋ ಕಳಕೊಂಡಂತೆ ಎಗರಾಡುವುದು ಎಲ್ಲಾ ಗಮನಕ್ಕೆ ಬರುತ್ತಿರಲಿಲ್ಲ...ಕಣ್ಣಂಚು ಒದ್ದೆಯಾದಾಗ ಮಾತ್ರ ಅದೊಂದು ಗತ ಮತ್ತೆ ಅದಕ್ಕಾಗಿ ಹಂಬಲಿಸಿದ ಮನಸ್ಥಿತಿ ನೆನೆದು ಬೇಸರಾಗುತ್ತಿತ್ತೇನೋ...
ಈಗ ಎಲ್ಲ ಹಳವಂಡಗಳ ನೆನೆದು ಅಯ್ಯೋ ಅಷ್ಟಕ್ಕೇ ಎಷ್ಟು ಅತ್ತಿದ್ದೆ..ಅನ್ನಿಸೋದು..ತೀರಾ ನೋವಾದಾಗ ಅಳುವ ಕಾಲಕ್ಕೆ ಯಾಕೆ ಅಳು ಬಂತು ಅಂತ ಶೋಧಿಸುತ್ತಾ ಕಣ್ಣಂಚಲ್ಲಿ ಒದ್ದೊದ್ದೆ ಆಗುವ ಮುಂಚೆಯೇ ಹೊಟ್ಟೆ ಬಿರಿಯುವಷ್ಟು ನಗುಬರುವುದು...



ಅರೆರೆ ವಯಸ್ಸಾಯಿತೆ? ಎಲ್ಲಿ ವಯಸ್ಸಾಯಿತು...ಈಗಲೂ ನನ್ನ ಜೀವಂತಿಕೆಯನ್ನ ಹಿಡಿದಿಡೋ ಗೆಳೆಯರು...ಸಹೋದರರು...ಸಹೋದರಿಯರು ಗೆಳತಿಯರು...ಯಾವತ್ತೋ ಬರಬೇಕಿದ್ದ ಜಗತ್ತು ಇದು ಅಂತ ಬರಸೆಳೆದು ಅಪ್ಪುವ ಯಾವ ಕಳಂಕದ ಸೋಂಕಿಲ್ಲದ ಸಂಬಂಧಗಳು,ಆಪ್ತವಾಗಿ ಸದಾ ಜೊತೆಗಿರುವ ಜನುಮದ ಪ್ರಿಯತಮ ಪುಸ್ತಕದ ಸಖ್ಯ...ಒಳಗೆ ಕಾಡುವದೆಲ್ಲಾ ಲೇಖನಿಯಲ್ಲಿ ಅಳೆದು ಸುರಿದು ಬರುವ ಪದಗಳ ಜಿಪುಣತನದ ರೇಜಿಗೆ..

ಎಲ್ಲ ಇದ್ದು ಇಲ್ಲವೆನಿಸುವ ಕಾಲಕ್ಕೆ ಒಮ್ಮೊಮ್ಮೆ ನಾನು ಪ್ರಭುದ್ಧಳೇ ಅಲ್ಲವೇನೋ ಅನ್ನಿಸುತ್ತದೆ, ಹೌದು..ಕೆಲವೊಮ್ಮೆ ಮಕ್ಕಳಂತೆ ಆಡುವ ಮನಸ್ಸಿಗೆ ಇನ್ನೂ ವಯಸ್ಸಾಗಿಲ್ಲ...ಈಗಲೂ ಏನನ್ನೋ ಅತಿಯಾಗಿ ಮುಗ್ಧವಾಗಿ ನಂಬುವದನ್ನ ಬಿಟ್ಟಿಲ್ಲ,..ಈಗಲೂ ಮುಚ್ಚಿದ ಬಾಗಿಲುಗಳ ಹಿಂದೆ ಅಡಗಿರುವ ಬೆಳಕಿನ ಲೋಕ ಅಥವಾ ಯಾವುದೋ ಕತ್ತಲ ರಹಸ್ಯ ಕತೆಯಾಗಿ ಕಾಡುವುದ ಬಿಟ್ಟಿಲ್ಲ,ತಪ್ಪು ಅಂತ ಗೊತ್ತಿದ್ರೂ ಇದೆಲ್ಲ ಮಾಡೋ ಮನಸ್ಸು ಮರ್ಕಟ ಅಲ್ದೆ ಇನ್ನೇನು? ಪ್ರೀತಿ ಹೊತ್ತು ಬರೋ ಮನಸ್ಸುಗಳಿಗೆ ನಾನು ಬಯಲಾಗಿದ್ದೇನೆ...ಆಗಸದಷ್ಟು ವಿಶಾಲವಾಗುವ ಬಯಕೆ ಇದೆ...ಮುರಿದು ಕುಂತ ರೆಕ್ಕೆಗಳಿಗೆ ಕನಸಿನ ಜಾದೂ ಹುಡಿ ಅಂಟಿಸಿ ವಾಸ್ತವದ ಜಗತ್ತಲ್ಲಿ ಹಾರಬಿಡೋ ಮನಸ್ಸಿದೆ...

ಇಷ್ಟೆಲ್ಲದರ ನಡುವೆ ಒಮ್ಮೊಮ್ಮೆ ಮಾತನ್ನು ಮೀರಿದ ಕಸಿವಿಸಿ..ಅದು ಇಂಥಾದ್ದಕ್ಕೆ ಅಂತಿಲ್ಲ.. ಎಲ್ಲೋ ತಪ್ಪಿ ಹೋಗುವ ಕೊಂಡಿ..ಯಾವುದೋ ಸಣ್ಣ ಮುನಿಸು, ಸಮಾಜದ ಕೆಲ ಬೇಜವಾಬ್ದಾರಿಗಳಿಗೆಲ್ಲ ಅಪರೋಕ್ಷ ಕಣ್ಣಾಗುವ ಕಸಿವಿಸಿ...ಆಡದಿರುವ ಮಾತುಗಳು ಬಣ್ಣ ಬಂದು ಕಾಲಾಡಿಕೊಳ್ಳೋ ಕಸಿವಿಸಿ, ಅಷ್ಟೋ ಇಷ್ಟೋ ಬಚಾವಾದ ಖಾಸಗಿತನ ಜಗತ್ತಿಗೆ ಬೆತ್ತಲಾಗೋ ಕಸಿವಿಸಿ...ಯಾರಿದ್ದರೂ ಯಾರಿಲ್ಲ ಅಂತ ಅನ್ನಿಸೋ ಖಚಿತವಲ್ಲದ ಅನಾಥ ಮನಸ್ಥಿತಿ...

ಇಂಥ ಮನಸ್ಥಿತಿಯ ನಡುವೆ ಕಸಿವಿಸಿಗಳ ನಡುವೆ ಬದುಕೋ ಸಾವೊ ತಿಳಿಯದ ಭ್ರಮೆ ಒಮ್ಮೊಮ್ಮೆ ನನ್ನ ಆವರಿಸುವುದುಂಟು...ಅದೆಷ್ಟೋ ರಾತ್ರಿಗಳು ಇಂತಹ ವಿಚಿತ್ರ ಮಾಯೆ ನನ್ನ ಆವರಿಸುತ್ತದೆ..ಅಲ್ಲಿ ನನ್ನ ಹೆಣವಿದೆ ಅದರ ಸುತ್ತ ಅತ್ಯಂತ ಅಪರಿಚಿತ ಮುಖಗಳು..ಮತ್ತು ಯಾರದ್ದೋ ಭಾಷಣ..ಯಾರದ್ದೋ ಕೂಗು ಅಳು, ಬದುಕಿದ್ದು ಸತ್ತಂತೆ ಬದುಕುತ್ತಿರುವ ಅತೃಪ್ತ ಆತ್ಮಗಳ ಶಾಪ,ಎಲ್ಲೋ ನೋಡಿದ ಗೀಷಾಳ ನೃತ್ಯ ಇತ್ಯಾದಿ..ಇತ್ಯಾದಿ...ಕನಸುಗಳು ಕಮ್ಮಿ ಆದರೆ ಇವೆಲ್ಲಾ ನನ್ನ ಎಚ್ಚರದ ಸ್ಥಿತಿಯಲ್ಲೇ ಒಮ್ಮೊಮ್ಮೆ ನಡೆದಂತೆ ಅನ್ನಿಸುವದುಂಟು... ದೇಹಕ್ಕೆ ಸಾವು ಖಚಿತ..ಅದು ನನ್ನ ಆಪ್ತ ಸ್ನೇಹಿತ..ಅವನ ಬರವಿಗೆ ನಾನು ಬದುಕಿದ್ದೇನೆ...ಹಾಗೆ ನಿರೀಕ್ಷೆಯಲ್ಲೂ ಒಂಥರದ ಕಸಿವಿಸಿ...
ತುಂಬಾ ಯೋಚಿಸುತ್ತೇನೆ, ನನ್ನ ಹೊತ್ತ ಈ ದೇಹ ಅಷ್ಟು ಹೊರ ಜಗತ್ತಿಗೆ ನನ್ನ ಹೆಸರಿಂದ ಪರಿಚಿತ ಈ ದೇಹ ಕೊರಡಾದ ಸಮಯ..ನನ್ನ ಹೂಳಬೇಕೆ..ನನ್ನ ಸುಡಬೇಕೆ? ಇಷ್ಟು ಧರ್ಮಗಳು ಜಾತಿಗಳು..ನನ್ನದು ಒಂದು ಧರ್ಮವಿದೆ..ಅದು ನಿಮ್ಮ ಯಾವ ಧರ್ಮಕ್ಕೂ ಸೇರದ ಸ್ವಾತಂತ್ರ್ಯ ಕೇವಲ ನನ್ನದೇ ಧರ್ಮ...ಅದು ಹೇಳುತ್ತದೆ..ಈ ದೇಹ ನಿಮ್ಮೆದುರಿರುವ ಈ ದೇಹ ಕೇವಲ ಕೊರಡು...ಅದಕ್ಕೆ ಬೇಕಾದ ಸುಖ ದುಃಖ ಶೀತ ಉಷ್ಣ ನವರಸಗಳು ಎಲ್ಲ ಉಂಡು ಶಾಂತವಾದ ದೇಹ..ಅದನ್ನ ಎದುರಿಗಿಟ್ಟು ಅಳುವುದು ಚೆನ್ನವೇ...?? ನನ್ನ ಎದುರು ಅಳಬೇಡಿ...ನನ್ನ ಪ್ರೀತಿ ಪಾತ್ರರೆಲ್ಲಾ ತುಟಿಯಲ್ಲಿ ಮುಗುಳ್ನಗು ಹೊತ್ತಿರಿ..ಸಾಧ್ಯವಾದರೆ ನಾನು ನಿಮಗೆ ಹಂಚಿದ ಕುಶಿಯ ಕ್ಷಣವನ್ನು ನೆನೆದು ನಕ್ಕುಬಿಡಿ, ನಿಮ್ಮನ್ನ ನೋಯಿಸಿದ್ದಿದ್ದರೆ ಶಪಿಸಿಬಿಡಿ...
ನನ್ನ ಇಷ್ಟಪಡದವರು ಬನ್ನಿ..ಯಾಕೆಂದರೆ ನಾ ನಿಮ್ಮನ್ನು ಎಲ್ಲರಿಗಿಂತ ಜಾಸ್ತಿ ಪ್ರೀತಿಸಿದವಳು...ನನಗೆ ನಿಮ್ಮ ದರ್ಶನ ಬೇಕು... ಎಲ್ಲರ ಮುಖದಲ್ಲೊಂದು ನಗು..ತುಂಬು ಮನಸ್ಸಿನ ಬೀಳ್ಕೊಡುಗೆ ಸಾಕು..ನನ್ನ ದೇಹವನ್ನ ಯಾವುದೋ ಆಸ್ಪತ್ರೆಯ ದ್ರಾವಣದಲ್ಲಿ ಮುಳುಗಲು ಬಿಡಿ..ಕೊಯಿಸಿಕೊಂಡು ಯಾವುದೋ ಔಷಧಿ ಕಂಡು ಹಿಡಿಯಲು ಉಪಯೋಗವಾಗಲಿ...


ಇಷ್ಟೆಲ್ಲ ಹೇಳಿಯೂ ಇವೆಲ್ಲ ಆಗದೇ ಉಳಿವ .ನನ್ನ ಸಾವು ಸುಲಲಿತವಾಗಿರುತ್ತದೆಯೋ ಇಲ್ಲವೋ ಎನ್ನುವ ಕಸಿವಿಸಿ...ಬಿಡಿ ಇದು ಹತಾಶೆ ಅಲ್ಲ, ಅಥವಾ ನನ್ನ ಕನ್ಫೆಶನ್ ಕೂಡ ಅಲ್ಲ,ನಾನಷ್ಟು ಯೋಚಿಸೊದಿಲ್ಲ..ಕಸಿವಿಸಿಯುಳಿದು ಬದುಕಿದೆ..ಮತ್ತೆ ನೀಲ ನಭ, ವಯಸ್ಸಾಗದ ಪ್ರಕೃತಿಯ ನಡುವೆ ಸುಕ್ಕಾಗುವ ನನ್ನ ಚರ್ಮ,ನರೆತ ಕೂದಲುಗಳು,ಮತ್ತು ಹರೆಯ ತುಂಬಿದ ಮನಸ್ಸು ಸದಾ ಹರಿವ ನಿಮ್ಮ ಸ್ನೇಹ ತೊರೆ....!!ಇದ್ದೇ ಇದೆಯಲ್ಲ... ನನ್ನ ಮೆಂಟಲೀ ರಿಟಾಯರ್ಡ್ ಮನಸ್ಥಿತಿ!!

Monday, September 15, 2014

ಈ ಕಿಟಕಿ(published in Sakhi magazine)







ಮನೆಯೇ ಹಾಗೆ..ಮನೆಗಿಂತ ಚಂದದ್ದು ಕಿಟಕಿ , ವಿಶಾಲ  ಕಿಟಕಿಯ ಪಕ್ಕ ಕೂತರೆ ಸಾಕು ಜಗದ ಹಾದರಗಳೆಲ್ಲಾ ನಮ್ಮ ಕಣ್ಣೆದುರೇ ನಡೆಯೋ ಹಾಗೆ ..ನಾನದೆಷ್ಟು ಸಂಜೆಗಳ ಕಿಟಕಿಯ ಸಾಂಗತ್ಯದಲ್ಲಿ ಕಳೆದೆ ಲೆಕ್ಕವಿಲ್ಲ..ಕನ್ನಡಿಯೋಳಗಣ  ಬಿಂಬದ ಹಾಗೆ ಹಗಲು ರಾತ್ರಿಗಳು ದಿನ ತಿಂಗಳು ಕೊನೆಗೆ ವರ್ಷಗಳಾಗಿ !!

ಅದು ಮದುವೆಯಾದ ಹೊಸತು..ಬೆಳ್ ಬೆಳಗ್ಗೆ ಮಾಗಿಯ ಚಳಿಗಾಲದ ಸೂರ್ಯ ಚೆನ್ನಾಗಿರ್ತಾನೆ ಅಂತ ಅವನೇ ಬಿಸಿ ಬಿಸಿ ಕಾಫೀ ಮಾಡಿ ತರುತ್ತಿದ್ದ..ಒಂದೆ ಮಗ್ಗಿನಲ್ಲಿ ಕುಡಿಯುತ್ತಾ, ಕುಡಿಸುತ್ತಾ ಹಿಂದಿನಿಂದ ಬಿಗಿಯಾಗಿ ಅಪ್ಪಿ ಎದೆಗವಚಿಕೊಂಡು ಮುತ್ತಿಡುತ್ತಿದ್ದ... ಸ್ವರ್ಗವೊಂದೆ ಬಾಕಿ!! ಸೂರ್ಯ ಹುಟ್ಟುವ ಹೊತ್ತಿಗಾಗಲೇ ಎರಡು ಬಾರಿ ಬೆವರಿದ್ದಾಗಿರುತ್ತಿತ್ತು!! ಹಗಲಿಗಿಂತ ಮತ್ತು ನಶೆ ಸಂಜೆಗೆ! ಭಾನುವಾರವೊಂದು ಹಾಗೆ ಸಂಜೆಗಳಲ್ಲಿ ಇಳಿದು ಹೋಗುವ ನಶೆ ಬೇರೆಯೆ..ಪ್ರತಿ ವಾರದಲ್ಲೂ!!

ಕಿರಿಕಿರಿಗಳೇ ಇಲ್ಲದ ಬದುಕು ಕೂಡ ಆಷ್ಟು ಚನ್ನಾಗಿರೋಲ್ಲ, ಅಲ್ಲಿನ ಸಂಜೆಗಳ ಏಕತಾನತೆ ಸಾಗುವ ಬದುಕು ಎಲ್ಲಾ ಹಾಗಯೇ ನಿಂತ ಹಾಗಿದೆ ಅನ್ನಿಸೋಕೆ ಶುರುವಾದ ಕ್ಷಣ ಪುಸ್ತಕಗಳಿಗೆ ಮತ್ತೆ ಮೊರೆ ಹೋದೆ..ಪ್ಯಾಬ್ಲೊ ನೆರೂಡನ ಹೆಣ್ಣಿನ ದೇಹ ,ಸಿಲ್ವಿಯಾಳ ಸೆನ್ಷುಅಲ್ ಕವಿತೆಗಳು ಒಂದಷ್ಟು ಎದೆ ಹಗುರಾಗಿಸಿದವು...

ಇತ್ತೀಚೆಗೆ ಅವ ತುಂಬಾ ಲೇಟ್ ಆಗಿ ಬರುತ್ತಾನೆ ಅಥವಾ ಕುಡಿದು ಬರುತ್ತಾನೆ.. ಹೊರಗಡೆ ಮಳೆ ಮತ್ತೆ ಬೆಳದಿಂಗಳು...ಬದಲಾಗುತ್ತಿದೆ ಕಿಟಕಿಯಲ್ಲೂ ಋತುಗಳು...ನನಗೆ ನೆನಪಿದ್ದ ಹಳೆಯ ವಸಂತನಿಗ ಶಿಶಿರನ ಜತೆ ಜಗಳ...

ನಾನೂ ಅಷ್ಟಿಷ್ಟು ಕುಡಿದು ಅಭ್ಯಾಸವಿದ್ದವಳೇ..ನನ್ನ ಒಂಟಿತನ ಮತ್ತೆ ಕೆಂಪು ಕೆಂಪು ವೈನ್ ಜೊತೆಯಾದರು..ಕಿಟಕಿಯಲ್ಲಿನ ಸಂಜೆಗಳಿಗೆ....ನನ್ನ ಮಲಗಿದ್ದ ಹಳೆಯ ಗಿಟಾರು ಮತ್ತೆ ಹೊರ ಬಂದಿತು ..ಒಬ್ಬಳೇ ಎಲ್ಟೊನ್ ಜಾನ್ ಸೇ ಸೊ ಮಚ್ ತುಂಬಾ ಹೊತ್ತು ಬಾರಿಸುತ್ತಾ ಹಾಗೆಯೆ ಮಲಗಿರುತ್ತಿದ್ದೆ.ಬೆಳ್ಗಿನ ಕಿರಣ ಮೈ ಸೋಕುವವರೆಗೂ... ವಿಷಾದ ಹೊತ್ತ ಬೆಳಗಿಗಾದರೂ ಯಾಕೆ ಮತ್ತೆ ಜೀವದ ಇರುವನ್ನ ಸೂಚಿಸುವ ತವಕವೋ ನಾ ಕಾಣೆ...ಅವ ಬಂದದ್ದು ಗೊತ್ತಿಲ್ಲ..ಬಹುಶ: ಬರಲಿಲ್ಲ...

ನವಂಬರಿನ ಚಳಿ... ಅವತ್ತು ಸಲ್ಪ ಜಾಸ್ತಿಯೇ ಇತ್ತು...ಸಂಜೆಯ ಕೆಂಪು ಕಿರಣಗಳನ್ನ ತಿಂದು ಹಾಕುತ್ತಿರುವ ಮಂಜು...ಮನೆಯ ಬಾಗಿಲಲ್ಲಿ ಅಕ್ಕ!! ನನ್ನ ಮುಖದಲ್ಲಿ ಯಾವ ಭಾವವಿತ್ತೊ ನನಗೆ ಅರಿವಿಲ್ಲ...ಒಳ ಬಂದಳು
ಅವತ್ತು ರಾತ್ರಿ ಇಡೀ ಹಾಡು ಹಾಡು ಮತ್ತೆ ನಗು.. ಮಧ್ಯ ರಾತ್ರಿ ಇಡೀ ರಸ್ತೆಯ ತುಂಬಾ ತಡವರಿಸಿ ಓಡಾಡಿದೆವು..ಅಕೆಯೋ ಮಾತಿನ ಬುಗ್ಗೆ...ನಾ ನೋಡಿರದಿದ್ದ ಮುಖಗಳೆಲ್ಲ ನನ್ನ ಸಂಜೆಯ ಮೆಹಫಿಲ್ ಗೆ
ಹಾಜರಾಗತೊಡಗಿದವು.ಅಕ್ಕ ಇದ್ದ ಎರಡು ತಿಂಗಳು ಒಂದು ದಿನವೂ ನಾ ಕಿಟಕಿಯನ್ನ ಮತ್ತೆ ಪ್ರೀತಿಸದೆ ಹೋದೆ!!
ಇಂತಹ ಒಂದು ಮಂಜಿನ ರಾತ್ರಿ ಅಕ್ಕ ನನ್ನ ನೈಟ್ಔಟ್ ಹೋಗೋಣ ಎಂದು ಎಬ್ಬಿಸಿದಳು..ಚುಮು ಚುಮು ಚಳಿ ಹೊಸ ವರ್ಷದ ಆರಂಭಕ್ಕೆ ತಯಾರಾದ ರಸ್ತೆಗಳು..ಪಾನ್ ಶಾಪಿನಲ್ಲಿ ಕೆಂಪು ತುಟಿಗಳಲ್ಲಿ ಮುಗುಳ್ನಕ್ಕು ಆಹ್ವಾನವೀಯುವ ಮರ್ಯಾದಸ್ಠ ಗಂಡಸರು...ನನ್ನ ಕುತ್ತಿಗೆಗೆ ಸುತ್ತಿದ್ದ ಮಫ್ಲರು ಕಪ್ಪಾಗಿತ್ತು..ಥೇಟ್ ಬದುಕಿನಂತೆ..ಆದರೆ ರಾತ್ರಿ ರಸ್ತೆಗಳಿಗೆ ಕಡು ಹಳದಿ ಬಣ್ಣ...ನಾನು ಸುತ್ತಿದ್ದೆ ಸುತ್ತಿದ್ದು..

ಬೆಳಗ್ಗೆ ನಾಲ್ಕರ ಹೊತ್ತಿಗಾಗಲೇ ಹತ್ತಿರದ ಪಬ್ಬಲ್ಲಿ ಅಕ್ಕ ಎಲ್ಲರ ಬೆರಗಾಗಿದ್ದಳು..ಅವರು ಕುಡಿಯುತ್ತಿದ್ದ ವೈನು ಗ್ಲಾಸುಗಳಲ್ಲಿ ಕಾಣುವ ಬಿಳೀ ಮಾತಾಗಿದ್ದಳು..ನಾನು ಬದಿಯಲ್ಲಿ ಪ್ರತಿಮೆಯಂತೆ ನಿಂತಿದ್ದೆ...ಆ ಜಾಗದಿಂದ ಹೊರಡುವ ಮುನ್ನ ಒಮ್ಮೆ ನರ್ತಿಸಬೆಕಿತ್ತು ನನಗೆ..ಸ್ಟೇಜಿನ ಮೇಲೆ ಯಾವುದೋ ಕುಯ್ ಸ್ವರದಲ್ಲಿ ಹಾಡುತ್ತಿದ್ದ ಬೆಕ್ಕಿನ ಕಣ್ಣಿನವಳನ್ನ ಸರಿಸಿ..ಸೌಜನ್ಯ ಇಲ್ಲದಂತೆ ಗಿಟಾರ್ ಕಿತ್ತುಕೊಂಡೆ..ಬೆರಳುಗಳು ಸರಾಗವಾಗಿ ಆಡಿದವು...ಕುಳಿತಿದ್ದವರೆಲ್ಲ "ಹೋ" ಎಂದು ಕಿರುಚಿದರು!!
ಮಧ್ಯ ಅವ ಬಂದದ್ದು ಗೊತ್ತಾಗಲೆ ಇಲ್ಲ......ಕಡು ಕಂದು ಕಣ್ಣುಗಳಲ್ಲಿ ಮಂಜು ಸುರಿಯುತ್ತಿತ್ತು.ನನ್ನೊಡನೆ ಐದು ನಿಮಿಷ ನರ್ತಿಸಿದ ಹೋಗುವ ಮುಂಚೆ.ಅದ್ಭುತ ಘಳಿಗೆಗಳು..ನನ್ನ ಕಡಿದು ಹೋದ ಭಾಗವೊಂದು ಸೇರಿ  ಪೂರ್ಣ ಆದಂತೆ ಭಾಸ...ನನ್ನ ಹೆಸರು ವಿಳಾಸ ಪಡೆದು ಕಣ್ಣಲ್ಲೊಂದು ಮೆಚ್ಚುಗೆಯ ವಿಳಾಸ ವಾಪಾಸು ಕೊಟ್ಟು ಹೊರಟು ಹೋದ...
ಇಡೀ ದಿನದ ನಿದ್ದೆ ಮುಗಿದು ಮತ್ತೆ ಮಬ್ಬೇರುತ್ತಿರುವ ಸಮಯ ಕರೆಗಂಟೆಯ ಸದ್ದಿಗೆ ಎಚ್ಚರವಾಯ್ತು..ಎದ್ದು ಕಣ್ಣೊರೆಸುತ್ತಾ ಬಾಗಿಲು ತೆಗೆದೆ...ಕೈಯಲ್ಲೊಂದು ಹೂಗುಚ್ಚ..ಒಂದಷ್ಟು ಐರಿಶ್ ಚಾಕೋಲೇಟ್ಸ್,ಬಗಲಲ್ಲಿ ವೈನ್ ಬಾಟಲಿ ಹಿಡಿದು ಹೋತದ ಗಡ್ಡ ಕೆಂಚ್ ಕೂದಲ ಹೊತ್ತವ ನಿಂತಿದ್ದ..ತೀರ ಪರಿಚಿತನ ನಗುವೊಂದನ್ನ ಹೊತ್ತು...
"ಒಳಗೆ ಕರಿಯೊದಿಲ್ವೇನು, ನಿಮ್ಮಲ್ಲಿ ಬಾಗಿಲಿಂದ ಹೊರ ನಿಲ್ಲಿಸಿ ಮಾತಾಡೋದು ಪದ್ಧತಿಯಾ?"
ಒಳ ಬಂದಾಗಿದೆ ..ಬೇಡವೆಂದರೆ ಹೋಗುವವನಲ್ಲ..ನಾನು ಸರಿದು ಜಾಗ ಕೊಟ್ಟೆ.ಹಿಂದಿಂದ ಬಂದ ವ್ಯಕ್ತಿ ನೋಡಿ ದಂಗಾದೆ..ನನ್ನ ಗಂಡಸು..ನನ್ನ ಕಣ್ಣಲ್ಲಿ ಆಶ್ಚರ್ಯ ನೋಡಿ"ಯೆಸ್ ಯುವರ್ ಮ್ಯಾನ್..ನಿನ್ನ ಗಂಡ ಅಂತ ನಂಗೊತ್ತಿರ್ಲಿಲ್ಲ..ನಿನ್ನೆ ರಾತ್ರಿ ನೀನು ಕುಣಿಯುವಾಗ ಅವನು ಮೂಲೆಲಿ ಕೂತು ಕುಡಿತಿದ್ದ , ಅಷ್ಟೇ ಅಲ್ಲ ೩ ತಿಂಗಳಿಂದ ನನ್ನ ರೂಮಿನಲ್ಲೇ ಬಿದ್ಕೋತಾ ಇದ್ದಾನೆ..ಕುಡಿತ ಬಿಟ್ಟರೆ ಇನ್ಯಾವ ಕೆಟ್ಟ ಅಭ್ಯಾಸ ಇಲ್ಲ"  ನನ್ನ ಜಗತ್ತು ಕಂಪಿಸ ತೊಡಗಿತ್ತು.. "ನನಗೆ  ಯಾಕೆ..." ಮಾತು ಕಡಿಯುವ ಮುಂಚೆ ಅವ "ನಮ್ಮ ಪರಿಚಯ ಇರಲಿಲ್ಲ ಮತ್ತು ಅವನ ಮನೆ ಯಾವ ರಸ್ತೆಯಲ್ಲಿದೆ ಅಂತಲು ಹೇಳಲಿಲ್ಲ.ಇಂಥ ಚಂದದ ಹೆಂದತಿಯೂ ಇದ್ದಾಳೆ ಎಂದು ಗೊತ್ತಿರ್ಲಿಲ್ಲ" ಅವನ ಮುಖ ನೋಡಿದೆ ತೀರ ನಿರ್ಲಿಪ್ತ ಭಾವ..ಇಷ್ತು ದಿನದ ನಂತರ ನೋಡುತ್ತಿದ್ದಾನೆ ಪರಿಚಿತತೆ ಇಲ್ಲದ ಭಾವಗಳೆ ಇಲ್ಲದ ಮುಖ ..ಇಬ್ಬರೂ ಒಳ ಹೋದರು..ನನ್ನ  ಉಸಿರು ಮತ್ತೆ ಸಿಕ್ಕಿಹಾಕಿಕೊಂಡಿತು...

ಇದು ನ್ಯೂ ಇಯರ್ ಈವ್.. ಅಕ್ಕ ಬಿಳಿ ವೈನ್ ಹಾಕಿ ಕ್ವಿಕ್ ಚಿಕ್ಕನ್ ಮಾಡುತ್ತಿದ್ದಲು ಅಂತ ಕಾಣುತ್ತೆ ಮನೆ ತುಂಬ ಹೊಗೆ..ನಾನು ಅದೆ ಕಿಟಕಿಯ ಪಕ್ಕ ಕುಳಿತಿದ್ದೆ.. ಕಣ್ಣುಗಳು ಹೊರಗೆ ನೆಟ್ಟಿತ್ತು..ಶಾಲ್ಮಲಿಯ ನೆತ್ತಿಯಲ್ಲಿ ಕೆಂಪು ಕೋಳಿ ಜುಟ್ಟಿನಂತ ಹೂಗಳು.ಮರಳಿನಲ್ಲಿ ಕಟ್ಟಿದ್ದ ಮನೆಯನ್ನ ಅಲೆಗಳು ಬಂದು ಕೊಚ್ಚಿ ಹಾಕಿದ ದಿನ ಅದೆಷ್ತು ಅಳುತ್ತಿದ್ದೆ..ಪ್ರತೀ ಬಾರಿಯೂ ಅಪ್ಪ ಸಂತೈಸಿ ಒಂದಷ್ಟು ಚಾಕೋಲೇಟ್ ಕೊದಿಸುತ್ತಿದ್ದರು..ನಾನು ಅದಕ್ಕೆ ಅಳುತ್ತೇನೆ ಅಂತ ಅಕ್ಕ ವಾದಿಸುತ್ತಿದ್ದಳು...ನೆನೆದು ನಗು ಬಂತು ಹಿಂದೆ ವಿಶಾದವೂ..ಇವತ್ತು ನೆಲೆಯೇ ಇಲ್ಲದೆ ಬಯಲು ಆಲಯದಲ್ಲಿ ನಿಂತಿದ್ದೆನೆ..ಸೈಂಟ ಅಲೊಶಿಯಸ್ ಪ್ರೇಯರ್ ನೆನಪಾಯ್ತು..ಜ಼ೊತೆಗೇ ಕನ್ನಡ ಮಾಸ್ತರರ ಅಲ್ಲಮನ ವಚನಗಳೂ.ಜಾರುತ್ತಿದ್ದ ಕಂಬನಿಯನ್ನ ತೊಡೆಯಲು ಹೋಗದೆ ಹಾಗೆ ಬಿಟ್ಟೆ...

ಹೊಸ ವರ್ಶದ ದಿನಗಳು ಹಾಗೆ ಕಳೆದು ಹೋದವು..ಇವನು ಮನೆಗೆ ಬರುತ್ತಿದ್ದ ಇದ್ದರು ಇಲ್ಲದಂತೆ..ಕಂದು ಕಣ್ಣಿನವ ಅಕ್ಕನ ಸ್ನೆಹಿತ ಈಗ...ಹಾ ಅಕ್ಕ ಇವತ್ತು ಹೊರಡಲಿದ್ದಾಳೆ.ಜ಼ನವರಿಯ ಹಿತವಾದ ಚಳಿ..ಒಂದಷ್ಟು ಶಾಲ್ ಕೋಟ್ ಕೊಟ್ತ ಅಕ್ಕ ಬೆಚ್ಚಗಿರುವಂತೆ..ನಗುತ್ತಿರುವಂತೆ ಹಾರೈಸಿದಳು. ಮತ್ತೆ ಬಸ್ಸು ಹತ್ತುವ ಮುನ್ನ ಕಿವಿಯಲ್ಲಿ ಉಸುರಿದಳು" ನೀನೀಗ ಹಕ್ಕಿ.ಹಾರಲೇ ಬೇಕಿದೆ..ನೋಡು ರೆಕ್ಕೆಗಳಿವೆ...ನನ್ನ ಕಿನ್ನರಿ ನಿನ್ನವ ಗಂಡಸಲ್ಲ..ಸ್ನೇಹಿತ ಮಾತ್ರ ಈಗ"

ನಾನು ನಕ್ಕು ಕೈ ಬೀಸಿದೆ...ಮನೆಯ ದಾರಿಯಲ್ಲಿ ಹಾಸಿದ್ದ ನೀಲಿ ಹೂಗಳ ಹಾಸು ಅಹ್ಲಾದಕರವಿತ್ತು.ಜ಼ೊತೆಗೆ ಆ ಪಕ್ಕ ಅವನಿದ್ದ ನಿರ್ಭಾವುಕ ಗೋಡೆಯಂತೆ..ಈ ಪಕ್ಕ ನನ್ನ ತುಟಿ ತೆರೆವ ಕ್ಷಣಗಳಿಗಾಗಿ ಕಾದ ಇವನು..ಅಕ್ಕ ನನಗಾಗಿ ಹೊಸಾ ದಾರಿಯೊಂದು ತೆರೆದಿದ್ದಳು..

ಓಕ್ಲೇನ್ ರೆಸಾರ್ಟಿನ ಸಂಜೆಯ ಹಾಡು ಈಗ ನನ್ನದೇ..ತುಂಬಾ ಅಭಿಮಾನಿಗಳಿದ್ದಾರೆ ಅಲ್ಲಿ..

ನಾನು ನೀಲಿ ಹೂಗಳ ಹಾದಿಯಲ್ಲಿ ಹಿತವಾಗಿ ನಡೆದಿದ್ದೇನೆ..ಇಬ್ಬರನ್ನೂ ಹಿಂದೆ ಬಿಟ್ಟು ...ನನ್ನ ಜಗತ್ತು ಬದಲಾಗುತ್ತಿತ್ತು..ಮನೆಗೆ ಮಕ್ಕಳು ಕಲಿಯಲು ಬರುತ್ತಿದ್ದಾರೆ..ನನ್ನದೆ ಕ್ಲಾಸುಗಳು ಶುರುವಾಗಿದೆ..ಒಂಟಿ ಜೀವನ ಹಿತವಾಗಿದೆ..ಅವನು ಇವನು ಗೆಳೆತನ ಉಳಿಸಿಕೊಳ್ಳುವ ಮಾತು ಕೊಟ್ಟಿದ್ದಾರೆ.....

ಆದರೂ ಕಿಟಕಿಯ ಪಕ್ಕ ಕೂತ ಕ್ಷಣ ಬೆಂಕಿಯಂಥ ಶಾಲ್ಮಲಿಯ ದಳ..ಪಾದಕ್ಕೆ ಬಿದ್ದು "ಹೇಳು ಸುಖವಾಗಿದ್ದಿಯಾ?" ಅನ್ನುತ್ತದೆ..ನಾನು ನಕ್ಕು ಗಿಟಾರು ಕೈಗೆತ್ತಿಕೊಳ್ಳುತ್ತೇನೆ...ಪಕ್ಕದಲ್ಲಿ ಪುಸ್ತಕಗಳು..ಪತ್ರಗಳು ಮತ್ತು ನಿನ್ನೆ  ರಾತ್ರಿ ನನ್ನ ಕೈಹಿಡಿದು ನರ್ತಿಸಿದ ಎತ್ತರದ ಹುಡುಗ..

ಕಿಟಕಿ ಇದೆಲ್ಲವನ್ನು ನೋಡುತ್ತಾ ಮತ್ತೆ ವಸಂತಕ್ಕೆ ಅಣಿಯಾಗಿದೆ..ನನ್ನಂತೆ!! ಈ ಮನೆ ಈ ಕಿಟಕಿ ನಾನು ಮತ್ತು ಸಂಜೆಗಳು ಅನಂತವಾದ ಮುರಿಯದ ಸಂಬಂಧ!!


Tuesday, September 2, 2014

ನನ್ನ ಬದುಕಿನ ನದಿಯೇ

ಎಂದೋ ದಾರಿ ತಪ್ಪಿದ ನದಿಗೆ ಮತ್ತೆ ಸಾಗರನೆಡೆಗೆ ತುಡಿವ ತವಕ,ಮತ್ತ್ಯಾವ ಹಾದಿಯೋ,ಮರುಭೂಮಿಯೋ? ವರುಣನ ಸ್ನೇಹವೊಂದಿದ್ದರೆ ಉಕ್ಕಿ ಪ್ರವಹಿಸಿ ಅವನ ಒಡಲಲ್ಲಿ ಒಂದಾಗುವ ಬಯಕೆ...ದ್ವೈತವೋ ಅದ್ವೈತವೋ ಸಮ್ಮಿಲನದ ನಂತರ ತತ್ವಗಳ ಲೆಕ್ಕವಿತ್ತರಾರು? ಆತ್ಮಗಳು ಅಷ್ಟೆ ಅಂತೇ ನದಿಗಳಂತೆ ಪ್ರವಹಿಸುವುದು, ಮತ್ತೆ ಮರಣ ಮತ್ತೆ ಜನನ, ಅದೇ ಭಾವೋದ್ವೇಗಗಳು, ಮೀರಿದೆವು ಅಂದರೂ ಉಸಿರ ದೀಪ್ತಿ ಆರುವನಕ ಉರಿಸುವ ನವರಸಗಳು,ಅಷ್ಟ ಮದಗಳು,ಕೊನೆಗಿದಾವುದು ನನ್ನ ಗುರಿಯಲ್ಲ ಎಂದು ಅರಿವ ವೇಳೆಗೆ ಮತ್ತೊಂದು ತೊಗಲು,ಅಲ್ಲಲ್ಲಿ ಬೆಳಕ ತೋರುವ ಚೇತನಗಳನ್ನ ನಾವೇ ಅಲಕ್ಷಿಸುತ್ತೇವೆಯೋ..ಅಥವಾ ಕಾಣಲಿಕ್ಕೆ ಸಿಕ್ಕುವುದಿಲ್ಲವೋ..ಬಲ್ಲವರ್ಯಾರು??ಅರಿತೆವು ಅನ್ನೋದೊಂದು ಅಹಂಕಾರವೇ ಹೊರತು, ಉಗುರ  ತುದಿಯಷ್ಟು  ನಾವು ಅರಿತಿರಲಾರೆವು ಅನ್ನೋದು ಕಟು ಸತ್ಯ...ಸತ್ಯಾನ್ವೇಷಣೆಗೆ ಮುನ್ನ ಬರಗೆಟ್ಟ ಬದುಕನ್ನ, ಬಿಕರಿಗಿಟ್ಟ ಭಾವಗಳನ್ನ ಹದ ಹಾಕಬೇಕು, ಕಷ್ಟಗಳ ಸಾಣೆಗೆ , ನಷ್ಟಗಳ ಉರುಳಿಗೆ ಅಂಜದೆ ಅಳುಕದೆ ಕೊರಳೊಡ್ಡಬೇಕು, ಇದ್ದದ್ದರಲ್ಲೇ ಹಂಚಿ ತಿನ್ನುವ ಬುದ್ಧಿ ಬೇಕು,ಮತ್ತೆ ದುರಾಸೆ ಪಡದೆ ಕ್ರೋಢಕ್ಕೆ ಮನಗೊಡದೆ ದಿವ್ಯ ಪ್ರೇಮಕ್ಕಷ್ಟೆ ಮನ ಸೋಲಬೇಕು, ಅದನ್ನೇ ಕೊಡಬೇಕು, ವಿನಿಮಯಿಸಿ ವ್ಯವಹರಿಸಬೇಕು...
ಯಾಕೋ ದಾಸರು ನೆನಪಾಗುತ್ತಿದ್ದಾರೆ...ಜೊತೆಗೆ ಬಸವಣ್ಣನೂ...ಅಕ್ಕನೂ..ಅಲ್ಲಮನೂ...
ನನ್ನ ಬದುಕಿನ ನದಿಯೇ...ನಿನ್ನ ಸಾಗರವಿಲ್ಲೆ..ನಿನ್ನ ಎಡೆಯಲ್ಲೇ...ತುಸು ಧೈರ್ಯ...ತುಸು ತಾಳ್ಮೆ...ತುಸು ಜಾಣ್ಮೆ..ಅವನೊಲಿವ...ಕಾಯಬೇಕು ಕಣೆ!!

ಆ ಮಿಲನವೊಂದು ಮಹಾ ಪುರಾಣದಂತೆ..ನಿನಗೆ ಗೊತ್ತೇ ಬದುಕೇ..ಸಾಗರನಂಥ ಸಾಗರ ಯಾವ ನದಿಯನ್ನು ಅಷ್ಟು ಸುಲಭಕ್ಕೆ ಒಳಬಿಟ್ಟುಕೊಳ್ಳುವುದಿಲ್ಲ...ಹಾಗೆ ನನ್ನ ಒಳತೋಟಿಗಳು ನಿಲ್ಲುವನಕ ಅವನ ಮಿಲನ ಸಾಧ್ಯವಿಲ್ಲ, ಕೊಲ್ಲಿಯುದ್ದಕ್ಕೂ ಪ್ರಕೃತಿ ಬೆದರುವದು...ಹೆದರುವದು..ಮತ್ತು ಶಾಂತ ಸಾಗರನ ವಿಸ್ತಾರ ಪರಿಧಿಗೆ ತೆರೆದುಕೊಳ್ಳುವ ತನಕವೂ ಉಸಿರಾಡುವದನ್ನೇ ನಿಲ್ಲಿಸಿಬಿಡುವುದು...ಒಮ್ಮೆ ಮತ್ತೆಲ್ಲ ಶಾಂತ ..ಹಾಗೆ...
ಒಮ್ಮೆ ಅವನೊಳ ಜಗತ್ತಿಗೆ ಪ್ರವೇಶಿಸಿದ ನಂತರ ಅಲ್ಲಿ ಅಹಮ್ಮಿನ ಹುಯ್ದಾಟವಿಲ್ಲ,ನೂರು ಅನಿವಾರ್ಯತೆಗಾಗಳ ಕೆನೆದಾಟವಿಲ್ಲ, ಹಸಿದ ಆತ್ಮವೊಂದು ತಾಯ ಕಂಡ ಮಗುವಂತೆ ತಣ್ಣಗೆ ಮಲಗುವದು...ಬಡಬಾಗ್ನಿಯೆಲ್ಲ ಆರುವುದು ....ಅಸ್ತಿತ್ವವೇ ಇಲ್ಲದ ನಿರಾಳತೆಯೊಂದು ನಗುವುದು...ಅಲ್ಲಿಯತನಕ ಬದುಕೇ ನೀ ಸಂಯಮ ತೋರು...

Monday, September 1, 2014

ಓದು ಯಾಕೆ ಬೇಕು.

ಓದು ಯಾಕೆ ಬೇಕು..ಅನ್ನೋ ಪ್ರಶ್ನೆಗೆ ಹಲವಾರು ಉತ್ತರ ಸಿಗುತ್ತೆ, ಜ್ಞಾನಾರ್ಜನೆಗೆ ಅನ್ನೋದು ಸಾಮಾನ್ಯ ಉತ್ತರವಾದರೆ ಓದುವದು ಚಟ ಅನ್ನೋ ಮಂದಿಯೂ ಬಹಳಿದ್ದಾರೆ....ನನಗೆ ಓದು ಅದ್ಯಾವುದಕ್ಕೂ ಅಲ್ಲ, ನನ್ನ ಬಿಟ್ಟು ಹೋದ ಪುರಾತಾನತೆಯ ಕೊಂಡಿಗೆ ವರ್ತಮಾನವನ್ನ ನಾನು ಬೆಸೆದುಕೊಳ್ಳುತ್ತಾ ನನ್ನಿಂದ ನನ್ನೊಳಗೆ ನಾನೇ ಅನಾವರಣಗೊಳ್ಳುತ್ತಾ ಮತ್ತಷ್ಟು ಮಗದಷ್ಟು ಮನುಷ್ಯ ಜೀವಿಯಂತೆ ಬದುಕಲು, ನನ್ನನ್ನ ನನ್ನ ಇರುವಿಕೆಯನ್ನ ಅರ್ಥೈಸಿಕೊಂಡು ಆದಷ್ಟು ಇತರರಿಗೆ ಸಹಾಯ ಆಗೋ ಹಾಗೆ ಬದುಕೋಕೆ ಓದು ಬೇಕು, ಅದು ನನಗೆ ವಿದೇಶ ಸುತ್ತಿಸುತ್ತೆ,ಕೂತಲ್ಲೇ ಅಲ್ಲಾದೀನನ ಮಾಯಾ ಚಾಪೆಯಂತೆ ಯಾವುದೋ ಕಾಣದ ಭೂತಕ್ಕೆ, ಮತ್ತು ನಿಲುಕದ ಭವಿಶ್ಯತ್ತನ್ನ ತೋರಿಸುತ್ತೆ, ಒಂಥರಾ ಮತ್ತು ಅದು...ನನ್ನ ಬಳಿ ಈಗ ೩೫೦ ರಿಂದ ೪೦೦ ಪುಸ್ತಕ ಇರಬಹುದು...ಪಟ್ಟಿ ಮಾಡಿಲ್ಲ, ಅವೆಲ್ಲ ಓದಿದ್ದೀನಿ ಆದರೂ ಹಿಂದೆ ಓದಿದ ಯಾವುದೋ ಸಾಲುಗಳು ಇಡೀ ರಾತ್ರಿ ನನ್ನ ನಿದ್ದೆ ಕೆಡಿಸುವುದು ಉಂಟು... ನೀವು ಹಂಚಿಕೊಳ್ಳಿ..ಓದು ಯಾಕೆ ಬೇಕು? ನೀವ್ಯಾಕೆ ಓದುತ್ತೀರಾ? ಯಾವುದಾದರೂ ಪುಸ್ತಕ ನಿಮ್ಮ ಬದುಕು ಬದಲಿಸಿತಾ...ಅಂತರಂಗದೆಡೆಗೆ ನಿಮ್ಮ ಪಯಣ ಪುಸ್ತಕದೊಡನೆ ಸಲೀಸಾಗಿ ಸಾಗುತ್ತಿದೆಯೆ....

Sunday, July 13, 2014

ಕಥೆಯಲ್ಲದ ಕಥೆ


ಇವತ್ತು ಜುಲೈ ಹದಿಮೂರಾ? ಇವನದ್ದು ಬರ್ತಡೆ, ಬೆಳ್ ಬೆಳಗ್ಗೇನೇ ಎದ್ದು ಅವನಿಗಿಷ್ಟದ ಜಾಮೂನು ಮಾಡಿ, ಎಣ್ಣೆ ತಲೆಗೆ ತಟ್ಟಿ ಮೈಗೆಲ್ಲ ಹಚ್ಚಿ ಅರಿಸಿನ ಕೆನ್ನೆಗೆ ಬಳಿದು ಕೂರಿಸಿ ಮಸಾಜು ಮಾಡಿದ್ದಾಯ್ತು, ತಲೆಗೆ ಬಿಸಿ ಬಿಸಿ ನೀರು ಹೋಯ್ತಾ ಇದ್ದ ಹಾಗೆ ನೆನಪಾಯ್ತು...ಇವತ್ತು ಅವನದ್ದೂ ಹುಟ್ಟಿದ ಹಬ್ಬ, ಅಲ್ಲಿ ಅವನ ಹೆಂಡತಿಯೂ ನನ್ನ ಹಾಗೆ ಮಾಡಿ ಮಕ್ಕಳೆಲ್ಲ ಆಟಕ್ಕೆ ಹೋದಮೇಲೆ ಗಂಡನ್ನ ಅಗತ್ಯಕ್ಕಿಂತ ಇವತ್ತು ಸಲ್ಪ ಜಾಸ್ತಿಯೇ ಮುದ್ದಿಸಿರಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದ ಹಾಗೆ  ತಲೆ ತಿಕ್ಕುತ್ತಿದ್ದ ಕೈಗಳು ತಡೆದು ನಿಂತವು, ಕಂಪಿಸುತ್ತಿದ್ದ ಕಣ್ಣ ಹನಿಗಳನ್ನ ಅಲ್ಲಿಯೇ ತೊಡೆದು ಮತ್ತೆ ದಿನವಿಡೀ ಅವನದೇ ಧ್ಯಾನ,

ತಪ್ಪು ಸರಿಗಳ ಗೊತ್ತು ಹೊತ್ತು ಮೀರಿದ ಸ್ನೇಹ ಅದು, ಅಷ್ಟಕ್ಕೂ ನಾನು ಬಯಸಿದ್ದು ಏನು?? ನನಗೇ ಗೊತ್ತಿರಲಿಲ್ಲ, ತಪ್ಪಿ ಹೋದ ಸಂದೇಶದಿಂದ ಶುರುವಾದ ಕಥೆಯೊಂದು ಸುಂದರ ಪ್ರೇಮಕಾವ್ಯವೋ ಇಲ್ಲ ದೊಡ್ಡದೊಂದು ವಿರಹವೇದನೆಯ ಮೇಘಸಂದೇಶವೋ ಆಗಬಹುದಾದ ಎಲ್ಲ ಲಕ್ಷಣ ಹೊಂದಿತ್ತು, ನನಗಾಗ ಭದ್ರತೆಯ ಅವಶ್ಯಕತೆ ಇತ್ತೇ? ಯಾವುದು ಈಗ ಹೊಳೆಯುತ್ತಿಲ್ಲಾ...ಒಟ್ಟಾರೆ ಅವನ ಸ್ಪಂದನೆ ನನ್ನ ಕರೆಯಿತು, ಹುಟ್ಟಾ ಸರಸಿಯೊಬ್ಬಳಲ್ಲಿ ಸತ್ತು ಹೋಗಿದ್ದ ಜೀವಂತಿಕೆಯನ್ನ ಕೆಣಕಿತು, ಅವನಾವ ಮನ್ಮಥನಲ್ಲ, ಆದರೆ ಅವನ ಮುಗ್ಧತೆಯ ಅವನ ಕಾಳಜಿ ಜಗತ್ತಿನ ಎಲ್ಲ ಸಂಪತ್ತನ್ನು ಮೀರಿಸುವಷ್ಟಿತ್ತು(ಅಥವಾ ಅದು ನನ್ನ ಕಲ್ಪನೆಯಾಗಿತ್ತಾ? ಗೊತ್ತಿಲ್ಲ)


ಹಗಲಿಲ್ಲ ಇರುಳಿಲ್ಲದೆ ಅದೆಷ್ಟು ದಿನ ರಾತ್ರಿಗಳು ಕಳೆದವೋ, ನಿದ್ರೆ ಇಲ್ಲದ ಇಬ್ಬರು ಅವಾಗವಾಗ ಭೇಟಿ ಆಗ್ತಿದ್ದೆವು, ಇದು ಪ್ರೇಮಿಗಳ ನಗರವಲ್ಲ ನೋಡಿ, ಮುದ್ದಿಸುವ ಅವಕಾಶಗಳು ದೊರೆಯುತ್ತಿರಲಿಲ್ಲ, ಅವನ ಪುಟ್ಟ ಕಾರಿನಲ್ಲಿ ಅಷ್ಟು ದೂರ ಬೆಳಗ್ಗೆಯ ವಾಕಿಂಗ್ ನಡೆಯುತ್ತಿತ್ತು, ಅವನ ಕಾರು ಅದೆಷ್ಟು ತಿರುವುಗಳಲ್ಲಿ ನನ್ನ ಹೊತ್ತು ಇವನನ್ನ ಶಪಿಸಿತ್ಟೋ ಬಲ್ಲವರಾರು,ಬಿಗಿಯಾಗಿ ಕೈ ಹಿಡಿದು ಒಂದು ಗಂಟೆ ಮುಖ ನೋಡುತ್ತಾ ಮಾತಾಡುತ್ತಾ, ಶಿಶಿರನ ಛಳಿಯೂ ಬಿಸಿ ಹುಟ್ಟಿಸಿದ್ದ ದಿನಗಳವು...


ಎಲ್ಲ ಸಂಬಂಧಗಳಿಗೂ, ಸುಮಧುರ ಕ್ಷಣಗಳಿಗೂ ಒಂದು ಕೊನೆ ಇರುತ್ತದಂತೆ, ಹಾಗೆ ಅವನ ಪ್ರತಿ ವಿಜಯದಲ್ಲೂ ನನ್ನ ಮರೆಯದೆ ನನ್ನವಳು(?) ಅಂದುಕೊಳ್ಳುತ್ತಿದ್ದವನಿಗೆ ನನ್ನ ಅವಶ್ಯಕತೆ(?) ಬೇಕಾಗಿ ಬರಲಿಲ್ಲವಾ,ಅವನ ಜೀವನದ ಭಾಗ ನಾನೆಂದೂ ಆಗಲಾರೆ ಅನ್ನೋ ಸತ್ಯ ನನ್ನ ಚೂರು ಮಾಡಿತಾ?? ಗೊತ್ತಿಲ್ಲ, ಅವನ ಅವಶ್ಯಕತೆಗಳು, ಅವನ ಮುಖ್ಯ ಸಂಗತಿಗಳಲ್ಲಿ ನಾನಿಲ್ಲದ ವೇದನೆಯನ್ನ ವರ್ಷಗಟ್ಟಲೆ ಅನುಭವಿಸುತ್ತಿದ್ದ ನಾನು ಕಡಿಮೆಯಾದ ಮಾತುಕತೆ ಸಂವಹನಕ್ಕೆ ಮೊದಮೊದಲು ಕಿತ್ತಾಡುತ್ತಿದ್ದ ನಾನು ಕ್ರಮೇಣ ಮೌನವಾದೆ, ಅವನ ಪರಿಧಿ ಇಂದ ದೂರವುಳಿದೆ, ಆದರೆ ಅವನತ್ತ ಇವತ್ತಿಗೂ ಪ್ರಾರ್ಥನೆಯೊಂದು ಕಳಿಸುತ್ತೇನೆ,ಮತ್ತೆ ಮುಂದಿನ ಜನ್ಮವೊಂದಿದ್ದರೆ ಅವನಿಗೆ ನಾನು ತಾಯಾಗಬೇಕು...

ಹೀಗೆ ನನ್ನೆಲ್ಲ ಕಸಿವಿಸಿ ಪ್ರಶ್ನೆ ದುಮ್ಮಾನಗಳಿಗೆ ಕಿವುಡಾಗಿ ಬಾರಿ ಬಾರಿ ದೂರಾದ ಅವನಿಗೂ ಕೂಡ ಹುಟ್ಟುಹಬ್ಬದ ಶುಭಾಶಯಗಳು...ಯಾಕೆಂದರೆ ಸಂಬಂಧಗಳ ಸಿಹಿ ಕಹಿ ಎರಡು ತೋರಿಸಿದವ ಅವನು..ಮತ್ತೆ ಮತ್ತೆ ಮರೆಯದ ನೆನಪಾಗಿ ನನ್ನ ಮುಳುಗಿದ ಆಕಾಂಕ್ಷೆಗಳ ಗೋಪುರವಷ್ಟೇ ಆಗಿ ಉಳಿದವ ಅವನು..

ಋತುಗಳು ಬದಲಾಗಬಹುದು,ಕಾಲಗಳು...ನನ್ನ ಇಂದಿದ್ದ ಯೌವನ ನಾಳೆ ಮಾಸಬಹುದು, ಅವನ ಜೊತೆ ಕಳೆದ ಪ್ರತಿ ನಿಮಿಷಗಳಿಗೆ ಸಾವು ಬಾರದಂತೆ ಮುದ್ರೆಯೊತ್ತಿ ಅತ್ಮದೊಳಕ್ಕೆ ಇಳಿಸಿದ್ದೀನಿ..ಮತ್ತೆ ಅವನಿಗೆ ಹೇಳಬೇಕಿದೆ, ಸಮರ್ಥನೆ ಬೇಕಿಲ್ಲ ಪ್ರೇಮಕ್ಕೆ, ನಾನು ಮುಟ್ಟಲಾರದಷ್ಟು ದೂರದ ತಾರೆಯಲ್ಲ, ನೀನು ನನ್ನ ಅಂಗಳದ ಚಂದ್ರಮ, ನಾನು ಮಾತ್ರವೇ ನಿನ್ನ ರೋಹಿಣಿಯಾಗಬೆಕಾದವಳು!!

Tuesday, July 8, 2014

ಕಥೆ ಕಥೆ ಕಾರಣ

ಕಥೆ ಅಂತೆ ಕಥೆ ...  ಏನ್ ಕಥೆ. ಎಂಥ ಕಥೆ ಬರೆಯೋದು ..ಹಾ .. ಸಿಕ್ತು ಸಿಕ್ತು  ಅಲ್ನೋಡಿ  ಅಲ್ಲಿ ಇಲ್ಲಿ ಕೂತಲ್ಲಿ ಎದ್ದಲ್ಲಿ  ಕಂಡ ಮುಖಗಳೆಲ್ಲಾ ಉಧೋ  ಧೋ ಅಂತ ಮುಖದ ತುಂಬಾಕತೆ  ಬರಕೊಂಡು ಹೋಗ್ತಿವೆ ... ಕಾಲಿಗೆ ಬಿದ್ದ ಕಥೆ ಕಾಲಿಗೆ ಬೀಳಿಸಿ ಕೊಂಡ ಕಥೆ, ಸಣ್ಣ ಎಳೆಯಂತೆ ನಾಚಿದ ಕಥೆ ಹಿಡಿದು ಅಲಲೇ ಎಳೆದರೆ ಇಷ್ಟುದ್ದ ಧಾರಾವಾಹಿ ಅಥವಾ ಕಾದಂಬರಿ.. ಓದಿದೋರ ಕಣ್ಣಲ್ಲಿ ನಗುವ ಅಳುವೊ ಎಂಥದ್ದೋ ಒಂದು ಉಳಿಸಿ ಹೋಗುವಂಥವು..ಭಲೇ ಚಾಣಾಕ್ಷ ಕಥೆಗಳು

1
ಅವನಿಗೋ ಹೊಗಳಿಕೆ ಅಂದ್ರೆ ಪಂಚಪ್ರಾಣ. ಯಾರಾದ್ರೂ ಹೊಗಳಿದ್ರೆ ಸಾಕು ಅವರ ಒಂದು ಹೊಗಳಿಕೆಗೆ ಅವರು ಹೇಳದ್ದನ್ನೂ ಸೇರಿಸಿ ತನ್ನ ಡಂಗೂರ ಸಾರೋದು ಅಂದ್ರೆ ತುಂಬಾ ಇಷ್ಟ, ಒಳ್ಳೆ ಕೆಲಸ ಒಂದಷ್ಟು ಜೈಕಾರ ಹಾಕೊ ಸ್ನೇಹಿತರು ಮತ್ತು ಆತ್ಮರತಿ ಅನ್ನೋ ಸಿಹಿ ಸಿಹಿ ಪೆಪ್ಪೆರ್ ಮಿಂಟು... ಇಂಥವನ ಆಫೀಸಲ್ಲಿ ಅವಳು ಹೊಸದಾಗಿ ಕೆಲಸಕ್ಕೆ ಸೇರಿದ್ದಳು... ಅವಳಿಗೆ ಹೊಗಳಿಕೆ ಅಲರ್ಜಿ, ಇವನ ಚರ್ಬಿ ನೋಡಿ ಅವಳಿಗೆ ಅಸಹ್ಯ.. ಅವಳು ಕೆಲಸಕ್ಕೆ ಬಾರದವಳು ಅನ್ನೋದು ಇವನ ವಾದ...ಒಂದು ಹೊಸಾ ಪ್ರಾಜೆಕ್ಟು..ಇಂತವನಿಗೂ ಒಬ್ಬ ಬಾಸ್ ಇದ್ದೇ ಇದ್ದಾನಲ್ಲ.. ಅವನು ಇಬ್ಬರನ್ನೂ ಒಟ್ಟಿಗೆ  ಈ ಪ್ರಾಜೆಕ್ಟ್‌ಗೆ ಹಾಕಿದ.. ಕೆಲಸ ಬೇಗ ಮುಗಿದರೆ ಸರ್ಪ್ರೈಸ್ ಬೋನಸ್ ಕೂಡಾ ಇತ್ತು...
ಪ್ರಾಜೆಕ್ಟ್ ಮುಗಿಯಿತು... ಅವನನ್ನ ಹೊಗಳಿ ಹೊಗಳಿ ಅವಳು ಕೆಲಸ ಮಾಡಿಸಿದ್ದಳು ಮತ್ತು ಸರ್ಪ್ರೈಸ್ ಬೋನಸ್ ಗಿಟ್ಟಿಸಿದ್ದಳು.. ಮತ್ತು ಹೊಗಳಿಕೆಯ ಹೊನ್ನಶೂಲಕ್ಕೆ ಏರಿದವ ಅದೇ ಇನ್ನೂ ಸ್ವರ್ಗ ಅಂತ ತೇಲಾಡ್ಕೊಂಡು ಇದ್ದ... 
ಈಗ ಕಥೆ ಏನಪ್ಪಾ ಅಂದ್ರೆ ಎಲ್ಲರೂ ಅವಳನ್ನ ಹೊಗಳಲು ಶುರು ಮಾಡಿದ್ದಾರೆ ಮತ್ತುವನು ಅವಳನ್ನೇ ಮದುವೆ ಆಗೋದಾಗಿ ತೀರ್ಮಾನಿಸಿದ್ದಾನೆ... ದ ಎಂಡ್..(ಇನ್ನು ಹೊಗಳೊ ಕೆಲಸ ಅವನದ್ದು!!)

2
ಒಂದು ಹಳ್ಳಿ..ಅಲ್ಲಾ..ಹಳ್ಳಿ ಹಳ್ಳಿಯಾಗೆ ಎಲ್ಲಿದೆ ಹೇಳಿ..ಅಂತದ್ದೊಂದು ಹಳ್ಳಿ...ಆ ಹಳ್ಳೀಲಿ ವಯಸ್ಸಾದ ಅಜ್ಜ ಅಜ್ಜಿ(ಅವರೇ ಇರೋದು ಮತ್ತೆ ಈಗ) ಮನೇಲಿ ಇಬ್ಬರೇ...ಅಂತಾ ದೊಡ್ಡ ಮನೆ ಬಿಟ್ಟು ಮಗ ಪ್ಯಾಟೆ ಸೇರ್ಕೊಂಡಿದ್ದ..ಅಜ್ಜ ಅಜ್ಜಿಗೆ ಸಮಯ ಸಿಕ್ಕಾಗೆಲ್ಲ ಅಲ್ಲಿ ಹೋಗಿ ಬರ್ತಿದ್ರು, ಆದ್ರೆ ಮಗ ನಮ್ಮವನಾದರೂ ಸೊಸೆ ನಮ್ಮವಳೇ? ಅನ್ನೋ ಹಳೇ ಗಾದೆ ತರಾ ಪೇಟೇಲೆ ಬೆಳೆದ ಸೊಸೆ ಅತ್ತೆಗೆ ಏನೋ ಬೇರೆ ಭಾಷೆಲಿ ಅಂತಿದ್ಲು...ಪಾಪ ಗೊತ್ತಾಗದ ಅತ್ತೆ ಸುಮ್ಮನೆ ಕಣ್ಣು ಬಾಯಿ ಬಿಟ್ಟು ಕೇಳಿಸ್ಕೊಂಡು ಬರ್ತಿತ್ತು, ಇದ್ದವನೊಬ್ಬ ಮೊಮ್ಮಗ ರಜೆಗೆ ಅಜ್ಜಿ ಮನೆಗೆ ಬರ್ತಿದ್ದ,ಬಂದಾಗಲೆಲ್ಲ ಅಜ್ಜ ಅಜ್ಜಿ ಕೂರಿಸ್‌ಕೊಂಡು ಬರೆಯೋದು ಓದೋದು ಹೇಳ್ಕೊಡ್ತಿದ್ದ, ಅಂತಾ ಮೊಮ್ಮಗ ಈಗ ವಿದೇಶ ಸೇರಿದ್ದ,ಅಜ್ಜ ಅಜ್ಜಿಗೆ ಬರೋಕೆ ವೀಸಾ ರೆಡಿ ಮಾಡಿದ್ದ,ಸೊಸೆಯದ್ದು ಒಂದೇ ವರಾತ ಅವರಿಗೆ ಗೊತ್ತಾಗಲ್ಲ ಹಳ್ಳಿ ಜನಾ ಭಾಷೆ ಬರೋಲ್ಲ ನಿಂಗ್ಯಾಕೆ ಬೇಕಿತ್ತು ಉಸಾಬರಿ ಬೇಕಿತ್ತು ಅಂತೆಲ್ಲಾ, ಕೊನೆಗೂ ಅಜ್ಜ ಅಜ್ಜಿ ಹೊರಟೆ ಬಿಟ್ರು, ವೀಸಾ ಪಾಸ್ ಪೋರ್ಟ್ ಚೆಕ್ಕಿಂಗ್ ನಲ್ಲಿ ಅಜ್ಜಿಗೆ ಆಫೀಸರ್ ಕೇಳಿದ, ನೀವು ವಯಸ್ಸಾದವ್ರು, ಈ ವಯಸ್ಸಲ್ಲಿ ಹಳ್ಳೀಲಿ ಇರೊದ್ಬಿಟ್ಟು ಯಾವ್ದೋ ಕಾಣದ ದೇಶಕ್ಕೆ ಹೋಗ್ತಿದ್ದೀರಿ,ಅಲ್ಲಿ ಭಾಷೆ ಪ್ರಾಬ್ಲಂ ಆಗುತ್ತ್ ಅಂದ, ಅಜ್ಜಿ ಇಂಗ್ಲೀಷಲ್ಲಿ ಹೇಳ್ತು " ಐ ಸಾ ಇಂಗ್ಲಿಷ್ ವಿಂಗ್ಲಿಷ್ ಮೂವಿ,ವೀ ಬೋಥ್ ನೊ ಹೌ ಟು ಮ್ಯಾನೇಜ್" ಕಣ್ಣು ಕಣ್ಣು ಬಿಟ್ಟ ಆಫೀಸರ್ ಸುಮ್ಮನೆ ಸೀಲು ಒತ್ತಿ ಕಳಿಸಿದ, ಈಗ ಸೊಸೆ ಸರಿಯಾದ ಭಾಷೆ ಕಲಿತಿದ್ದಾಳಂತೆ!!

3

(ಮುಂದುವರೆಯುವುದು)

Saturday, May 17, 2014

ಮಧು-ಮತ್ತ ಗಳಿಗೆ


ಮಧುವೇ! ನೀ ನನ್ನ ತಾಯಿ,ನಿನ್ನ
ಮುದ್ದಿನ ಪರಿಗೆ ಬದುಕಿದೆ,ನಾ ಬಡಪಾಯಿ!
ನೀನೆ ಆಹಾರ,ನೀನೆ ನೀರು
ರಾತ್ರಿ ಚುಕ್ಕಿಯಲ್ಲಿ ನೀನೆ ನನ್ನ ಚಾರಪಾಯಿ!!

ನೋಡು ಅವಳಿಟ್ಟ ಹೆಜ್ಜೆಗಳು ಮನದ ತುಂಬಾ
ನಿನ್ನಲ್ಲೂ ಕಾಣುವುದು ಅವಳ ಮೋಸದ ಬಿಂಬ!
ಖಬರಿಲ್ಲದೆ ಹೋಯಿತೆ ಎನಗೆಅವಳ ಹೆಜ್ಜೆಯ ಪರಿಯು
ನಾನಿಲ್ಲಿ ಒಂಟಿಹಕ್ಕಿ ಹಾರಲಾರೆ,ಕಿತ್ತಳಲ್ಲ ಕನಸಿನ ರೆಕ್ಕೆಯ!!

ಆದರೂ ನಾ ನಿನ್ನ ನಂಬಿರುವೆ"ಸಾಲಿ"! ನೀಗುವೆಯ ದುಮ್ಮಾನ
ನೀನವಳಿಗಿಂತ "ಧೋಕಾ"!ಬಟ್ಟಲಲ್ಲಿದ್ದರೂ ಅದೆಷ್ಟು ನಿನ್ನ ಸುಮ್ಮಾನ!
ಸಾಗುತಿದೆ ಕಾಲುಗಳು ಬಾನಿನ ಕಡೆಗೆ,ಎದೆಯೊಳಗೆ ತುಂಬಿತು ನಿನ್ನ ಕಡಲು
ಹಾಸಿಹಳು ಸೆರಗು ಗೆಳತಿ ಇನ್ನಾರಿಗೋ ನೀನಾದರೂ ಕೇಳು ಎನ್ನ ಅಳಲು!!

ಮುಳುಗುತಿದೆ ಏಳುತಿದೆ ಚಂದ್ರನ ಬಿಂಬ,ಎದೆಯಲ್ಲಿ ಹಾಲಾಹಲದ ಹಾಲು
ಈ ರಾತ್ರಿ ಆಗಸದಲ್ಲಿ ಸೂರ್ಯನ ಮರಣದ ಕಾರಾವಾನ್, ಖಾಲಿ ಖಾಲಿ ಭೂಮಿಯ ಒಡಲು

ಹೂವು ಸುಡುವ ಪರಿಯ ನಾ ತಡಕೊಂಡಿರುವೆ,ಮತ್ತೆ
ನೀನೂ ನನ್ನ ಸುಡುವೆಯಾ?
ಸುಟ್ಟರೂ ಸರಿಯೆ, ನಿನ್ನ ಝಲಕ್ಕಿಗೆ ಮರುಳು!
ನಾ ನಿನ್ನ ಪರವಾನಾ ತಿಳಿದೆಯಾ!!

ನಿನ್ನ ಸೌಂದರ್ಯದ ಮುಂದೆ,ಗೆಳತಿಯೇನು?
ಈ ಜೀವನವನ್ನೇ ನಿನಗೆ ಒತ್ತೆ ಇಡಬಲ್ಲೆ ನಾನು!!
ನಾನು ನೀನು ಕೂಡಿ ಕಳೆದ ಎಲ್ಲಾ ಮತ್ತ-ಗಳಿಗೆ
ಅದರೂ ಉಳಿವ ಶೇಷ ಮೊತ್ತ ಅವಳೇ ಕೊನೆಗೆ!!

Thursday, April 24, 2014

ವ್ಯಾಪ್ತಿ-ಪ್ರಾಪ್ತಿ

ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html

ಭಾಗ (೨) : ದಿನಕರ್ ಮೋಗೆರರವರ "ದಣಪೆ" http://dinakarmoger.blogspot.in/2014/04/blog-post_14.html 

ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html

ಭಾಗ (೪) : "ಮಿತಿ" ರೂಪಾ ಸತೀಶ್ http://www.bilimugilu.blogspot.in/2014/04/blog-post_24.html

ಇದನ್ನ ಮುಂದುವರೆಸುವ ಪುಟ್ಟ ಪ್ರಯತ್ನ

ವ್ಯಾಪ್ತಿ-ಪ್ರಾಪ್ತಿ

ಹಾ... ಈ ನಂಬರ್ ಅವರ ಆಫೀಸಿನದ್ದಲ್ಲ ಮ ನೆ ಯ ವ್ಯವಹಾರಗಳಿಗಾಗಿ ಇಟ್ಟುಕೊಂಡ ಮತ್ತೊಂದು ನಂಬರು ..ಆದರೆ ಉಪಯೋಗಿಸಿದ್ದು ಬಹಳ ಕಮ್ಮಿ.. ನಮ್ಮ ನಿತ್ಯದ ವ್ಯವಹಾರಕ್ಕೂ ಅವರು ಅಫೀಸಿನ ಫೋನನ್ನೇ ಬಳಸುತ್ತಿದ್ದರು . ಅಷ್ಟಕ್ಕೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಹುಡುಕುವ ಯಾವ ಪ್ರಮೇಯವೂ ಬಂದಿರಲಿಲ್ಲ ..ನಾನು  ಅನುಮಾನಿಸಿದವಳಲ್ಲ.. ಕೈಯಲ್ಲಿದ್ದ ಮೊಬೈಲು..ಅದರಲ್ಲಿದ್ದ ನೂರೆಂಟು ಪ್ರೇಮಮಯ ಸಂದೇಶಗಳು ನನ್ನ ನಂಬಿಕೆಯ ಭಧ್ರ ಕೋಟೆಯನ್ನ ಒಂದೇ ಏಟಿಗೆ ಹೊಡೆದುರುಳಿಸಿತ್ತು...

ಈ ಕ್ಷಣಕ್ಕೆ ಬಂದ ಕೋಪಕ್ಕೆ ಬಟ್ಟೆ ಎಲ್ಲಾ ಪ್ಯಾಕ್ ಮಾಡಿ ಹೋಗಿಬಿಡಲೇ? ಇಲ್ಲ ಇಲ್ಲ ...ಕಾಲ್ ಮಾಡಿ"ನಿಮ್ಮ ಮಂಗಳಕರ ಬುದ್ಧಿ ಗೊತ್ತಾಯ್ತು " ಎಂದು ಕೂಗಾಡಿ ಡೈವೋರ್ಸ್ಗೆ ಅಪ್ಪ್ಲೈ ಮಾಡ ಬೇಕು ..ಈ ಗಂಡಿಗೆ ಸರಿಯಾಗಿ ಬುದ್ಧಿ ಕಲಿಸಬೇಕು..ಹಾಗೆ ಆಕೆಗೂ ... "ಅಹಹ .. ಡೈವೋರ್ಸೆ ಮಾಡಿದ್ರೆ ನಿನ್ನ ಗಂಡ  ಸರಿ  ಹೋಗ್ತಾನಾ? ಮಳ್ಳು ನಿನಗೆ.. ಹಾಳಾಗಿ ಹೋಗ್ತಾನೆ..ಇನ್ನೂ ಒಳ್ಳೇದೆ ಆಗುತ್ತೆ..ಈಗ ಕದ್ದು ಮುಚ್ಚಿ ನಡೀತಿರೋದು..ಮನೆಯಲ್ಲೇ ಶುರುವಾಗುತ್ತೆ " ಅಂತರಾತ್ಮ ಚುಚ್ಚತೊಡಗಿತ್ತು ... ಏನೂ ತೋಚದವಳಮ್ತೆ ಹಾಸಿಗೆಯ ಮೇಲೆ ಬಿದ್ದೆ .. ಮಾನಸಿಕ ತುಮುಲಕ್ಕೆ ಒಳಗಾದ ದೇಹ ನಿದ್ರೆಗೆ ಶರಣಾದ್ದು ತಿಳಿಯಲಿಲ್ಲ

ಎಚ್ಚರವಾಯ್ತು... ಬೆಚ್ಚಿಬಿದ್ದು ನೋಡಿದೆ  ಗಂಟೆ ೨.ರಾತ್ರಿ  ತಿನ್ನದೇ ಮಲಗಿದ್ದಕ್ಕೆ ಹೊಟ್ಟೆ ಚುರುಗುಟ್ಟುತ್ತಿತ್ತು..ಉರುಳಿ ಹೋಗುತ್ತಿರುವ ಸಾಮ್ರಾಜ್ಯದ ಸಾಮ್ರಾಜ್ಞಿ ನಾನು ...ಇಂತಹ ಶೂನ್ಯದಲ್ಲು ಹೊಟ್ಟೆ ಹಸಿವಾಯ್ತು ಹೇಗೆ..ತಿನ್ನಲೇ ಬಾರದು..ಇದು ಪಾಪಿಯ ಮನೆ ಓಡಿ ಹೋಗಬೇಕು ..ಇಂತದ್ದೆ ಯೊಚನೆಗಳು.."ಯಾಕೆ... ಇವತ್ತಷ್ಟೇ ನಿನ್ನ ಗೆಳೆಯ ಕಾವಲಿದ್ದ ಕೋಟೆಗೆ ನುಗ್ಗಿರಲಿಲ್ಲವೇ? ಆಗ  ನಿನ್ನ ವಿವೇಕ ಎಲ್ಲಿತ್ತು?... " ಅಂತರಾತ್ಮ ಮತ್ತೆ ಚುಚ್ಚಿತು ..ಇದ್ದಕ್ಕಿದ್ದಂತೆ ಓಶೋ  ನೆನಪಾದರೂ..ಅಪ್ಪ ಮತ್ತು ಅಮ್ಮ ನೆನಪಾದರು. ವರ್ಷ ಹೊತ್ತು ಹೆತ್ತು ಮುದ್ದಾಡಿದ್ದ ಮಗು ನೆನಪಾಯ್ತು... ನಾನು ಸಾಯಬೇಕು  ಅನ್ನಿಸುತ್ತಿತ್ತು ... ಹಿಂದೆಯೇ..ಸತ್ತರೇನು ಪ್ರಯೋಜನ..ಇದ್ದಾಗಲೇ ಸರಿಯಾಗದ್ದು ಇಲ್ಲದಿದ್ದಾಗ ಸರಿ ಆಗುತ್ತದೆಯೇ?.ಅನ್ನಿಸಿತು ...

ದೇವರ ಮನೆಯ ನಂದಾ  ದೀಪದ  ಮಂದ ಬೆಳಕು ಕರೆದಿತ್ತು..ಹೋಗಿ ಸುಮ್ಮನೆ ಕುಳಿತೆ...ಮನದಲ್ಲಿದ್ದ ಆತಂಕ ನಿಧಾನಕ್ಕೆ ಕಮ್ಮಿ ಯಾದದ್ದು ಗಮನಕ್ಕೆ ಬರುತ್ತಾ ಹೋಯಿತು... ಓಶೋ ಮಾತು ನೆನಪಾಯ್ತು.."ಕಾಮ ಮೂಲದಿಂದ ಹುಟ್ಟಿದ ಎಲ್ಲ ಸಂಬಂಧಗಳಲ್ಲೂ ದು:ಖ ಸ್ಥಾಯಿ ..ಯಾವ ನಿರ್ಧಾರವು(ಗಂಡನನ್ನ ಅಥವಾ ಹೆಂಡತಿಯನ್ನ ಬದಲಿಸುವ ) ಹೆಣ  ಹೊತ್ತ ಹೆಗಲನ್ನು ಬದಲಾಯಿಸುವಷ್ಟೆ  ನಿರರ್ಥಕ...." "ಈಗ ಆದದ್ದಾದರೂ  ಏನು? ಒಂದಷ್ಟು ನಿನ್ನ ಮನಸ್ಸಿಗೆ ಆತಂಕ ಹುಟ್ಟಿಸುವ ಸಂದೇಶಗಳು ..ಅಷ್ಟೇ  ತಾನೇ ...ದೋಷ  ನನ್ನದು ಇದೆ..ಅವನದ್ದು ಕೂಡ .. ಬದುಕಿಗೆ ಬೆನ್ನು ತಿರುಗಿಸೋ ಯಾವ ಯೋಚನೆಯು ಬದುಕು ಕಟ್ಟಲಾರದು ..ಇದಕ್ಕೆ ನಿನ್ನ ಆತ್ಮಶಕ್ತಿಯೇ ಬೆಳಕು..ತೀರ ಕೈ ಮೀರಿದರೆ ಒಂಟಿ ಬದುಕು.... ಆದರೆ ಪ್ರಯತ್ನಿಸಲೇ ಬೇಕು..ಹೇಡಿಯಾಗಬಾರದು" ನಿರ್ಧಾರವೊಂದು  ಮನಕ್ಕೂ ಕಾಲಿಗೂ ಶಕ್ತಿ ನೀಡಿತ್ತು ..

ಕುಕ್ಕರಿನಲ್ಲಿ ಇದ್ದ ಸಲ್ಪ ಅನ್ನವನ್ನು ,ಮೊಸರಿನೊಂದಿಗೆ ತಿಂದೆ. ಮಧ್ಯ ರಾತ್ರಿಯ ಮೀಟಿಂಗು .ರಾತ್ರಿ  ಲೇಟ್ ಬರುತ್ತಿದ್ದ ಹಿಂದಿನ ನಿಜ ಕಾರಣಗಳೆಲ್ಲಾ ಈಗ ನಿಚ್ಚಳವಾಗಿದ್ದವು.. ಆದರು ತಪ್ಪು ತನ್ನದೇ ತುಂಬಾ ದಿವಸದಿಂದ ಅವರು ಕರೆಯುತ್ತಲೇ ಇದ್ದರು .."ಮನೆಯಲ್ಲೇ ಕೂತು ಏನು ಮಾಡುತ್ತಿ ..ಆಫೀಸಿಗೆ ಬಾ...ಮ್ಯಾನೇಜ್ ಮೆಂಟು  ನಿಂದೆ " ಇವತ್ತಿಂದ ಹೋಗಲೇ ಬೇಕು ..ನಿರ್ಧರಿಸಿದೆ ..ಸಮಯ ನೋಡಿದೆ..ಐದು ಗಂಟೆ .... ಕನ್ನಡಿಯ ಮುಂದೆ ನಿಂತೆ ... ಕನ್ನಡಿಯಲ್ಲಿದ್ದಾಕೆ ಅಷ್ಟು ಅಸಹ್ಯವಿರಲಿಲ್ಲ..ನೋವು ತುಂಬಿದ ನಿದ್ದೆ ಇಲ್ಲದ ಕಣ್ಣುಗಳನ್ನು ಬಿಟ್ಟರೆ ದೇಹದಲ್ಲಿ ಜಾಸ್ತಿ ಇರಬಹುದಾದ ಮೂರು ಕೆಜಿ ಕೊಬ್ಬು ಮಡಿಕೆ ಆಗಿತ್ತು..ಇವತ್ತಿಂದ ಜಿಮ್ಮಿಗೂ ಹೋಗಬೇಕು ಅಂದುಕೊಂಡೆ ... ಮಗು ನೆನಪಾಯ್ತು .. ಅಮ್ಮನ ಹತ್ತಿರ ಸಲ್ಪ ಮಾತಾಡಿ ಹಾಗೆ ಅಲ್ಲಿಂದ ಆಫಿಸಿಗೆ ಹೋಗೋಣ ಎಂದು ತೀರ್ಮಾನಿಸಿ ಸ್ನಾನಕ್ಕೆ ನಡೆದೆ ....

ಈಗ ಅಮ್ಮನ ಮನೆ ಮುಂದಿದ್ದೇನೆ ..ಪಾಪುವಿನೋಂದಿಗೆ ಬಂದ ಅಮ್ಮ ನನ್ನ ನೋಡಿ ಆಶ್ಚರ್ಯ ಪಟ್ಟರು .."ಏನೇ ಇದು ಇಷ್ಟ್  ಬೆಳಗ್ಗೆ?" " ಏನಿಲ್ಲ  ಅಮ್ಮಾ .ಅವರು ಮನೇಲಿಲ್ಲ..ವ್ಯವಹಾರದ ಸಲುವಾಗಿ ಎಲ್ಲೋ ಹೋಗಿದ್ದಾರೆ. .. ಮನೇಲಿ ಒಬ್ಳೇ ..ಬೇಜಾರಾಯ್ತು ಬಂದೆ... " ಅವಳು ಅಮ್ಮ ಅಲ್ವೇ ನನ್ನ ತುಮುಲ ಆಕೆಯ ಮಮತೆಗೆ ನಿಚ್ಚಳ ... "ಸುಳ್ಳು ಹೇಳ್ತಿದ್ದಿ  ಅಂತ ಗೊತ್ತು ..ಬಾ ಒಳಗೆ..." ಅಪ್ಪ ಪತ್ರಿಕೆ ಓದುತ್ತಿದ್ದವರು ತಲೆ ಎತ್ತಿ "ಪುಟ್ಟಾ ಕುತ್ಕೊ... ನಿಂಗೆ ಏನೋ ಹೇಳ್ಬೇಕು"
"ಏನಪ್ಪಾ" ಅಂದೆ ಕೂತ್ಕೊಳ್ತಾ .."ನೀನಿದನ್ನ ತಪ್ಪು ತಿಳಿಬೇಡ ..ನೋಡು  ಮಗು ನಮಗೆ ಅಡ್ಜಷ್ಟ್  ಆಗಿದಾನೆ ..ನೀನಿಗ ನಿನ್ನ ಬದುಕು ನೋಡ್ಕೊ ಬೇಕಮ್ಮ ...ಹೆಣ್ಣು ಮಕ್ಕಳು ಮನೆಯಲ್ಲಿ ಕೂತರೆ ಸದರ ..ನಿಮ್ಮದೆ ಆಫಿಸು ಇದೆ..ಗಂಡ ನೀನು ಒಟ್ಟಿಗಿದ್ದರೆ ಕಂಪನಿ ಬೆಳೆಯುತ್ತೆ.. ಹಾಗು ಮನಸ್ಸಿಗೂ ನೆಮ್ಮದಿ".... ನನ್ನ ಕಣ್ಣುಗಳು ಅಪ್ಪನ ಕಣ್ಣುಗಳನ್ನ ಸಂಧಿಸಿದವು..ತಳಮಳ"ಅಪ್ಪನಿಗೆ ಎಲ್ಲವು ಗೊತ್ತೇ .ಆದಕ್ಕೆ  ಹೀಗನ್ನುತ್ತಿದ್ದಾರೆಯೇ..ಅಲ್ಲವೇ ಮತ್ತೆ ಇದರ ಹಿಂದಿನ ಮರ್ಮ ಏನಿರಲಿ..ನನ್ನ ಒಳ್ಳೇದಕ್ಕೆ ತಾನೆ... " ಮನಸ್ಸು ಯೋಚಿಸುತ್ತಿತ್ತು "ಹೂ ಅಪ್ಪಾ..ಅದನ್ನೇ ಹೇಳೋಣ ಅಂತ ಬಂದೆ ..ಇವತ್ತಿಂದ  ಆಫೀಸಿಗೆ ಹೋಗ್ತಾ ಇದ್ದೀನಿ ..ಪಾಪುನಾ ಸಂಜೆ ಬಂದು ಕರ್ಕೊಂಡು ಹೋಗ್ತಿನಿ.." ನನ್ನ ನೋಡಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಿ ಬಂದು ಅಪ್ಪಿದ ಪುಟ್ಟ ದೇವರ ತೋಳುಗಳಲ್ಲಿ ನನಗೆ ನನ್ನ ಗುರಿ ಸ್ಪಷ್ಟವಾಯ್ತು ...

ಮನೆಯಲ್ಲಿ ಅಮ್ಮನ ಕೈ ಉಪ್ಪಿಟ್ಟು ತಿಂದು..ಮಗುಗೆ ಸಂಜೆ ಬರುವ ಪ್ರಾಮಿಸ್ ಮಾಡಿ ಆಫೀಸಿಗೆ ನಡೆದಿದ್ದೇನೆ ... ಇದೋ ನಮ್ಮದೇ ಅಲ್ಲ ಇನ್ನು ನನ್ನದೇ ಆಫೀಸು..ಬಾಗಿಲು ತೆರೆದಿದೆ... ಒಳ ನುಗ್ಗಿದೆ .. ಯಾರು ಇರಲಿಲ್ಲ... ಸೀದಾ  ಇವರ ಕ್ಯಾಬಿನ್ ಹತ್ತಿರ ಹೋದೆ...ಬಾಗಿಲು ಹಾಕಿರಲಿಲ್ಲ .. ನೂಕಿದೆ ...  ಒಳಗಿದ್ದ ವ್ಯಕ್ತಿಯನ್ನ ನೋಡಿ ನನಗು ನನ್ನ ನೊಡಿ ಆ ವ್ಯಕ್ತಿಗೂ ಶಾಕ್ ಆಯಿತು "ನೀನು ಇಲ್ಲಿ..??".........

(ಮುಂದುವರೆಯುವುದು ...)









Thursday, April 17, 2014

ಮುಗಿಯದ ಚುನಾವಣೆ

ಚುನಾವಣೆ ಮುಗೀತು... ನನ್ನ ಮನದಲ್ಲಿ ಇನ್ನೂ ನಡೆಯುತ್ತಿದೆ!!

ಆಳೆತ್ತರದ  ಹಂಪು , ಅಷ್ಟೇ ಆಳದ  ಗುಂಡಿ ... ರಸ್ತೆಗಳೊ ದೇವರಿಗೆ ಪ್ರೀತಿ ..ಸೀದಾ ಯಮಲೋಕಕ್ಕೆ ದಾರಿ... ಹೀಗೆ ಪುಕ್ಕಟ್ಟೆ ಟಿಕೇಟು ಕೊಟ್ಟು  ಖಾಲಿಯಾಗದ ಕೋಟಿ ಕೋಟಿ ಗಳ ಲೆಕ್ಕದ ಜನಸಂಖ್ಯೆ... ಹಾಗೂ ಅವರು ಗುಂಡಿಯಲ್ಲಿ ಬೀಳಿಸುತ್ತಲೆ ಇದ್ದಾರೆ ನಾವು ಬೀಳುತ್ತಲೇ  ಇದ್ದೇವೆ...!!

ಹುಟ್ಟಿದಾಗ ಅಪ್ಪ ಅಮ್ಮನಂತೆ ಆಮೇಲೆ ಗಂಡ ನಂತರ  ಮಗ ..ಈಗ ಅಷ್ಟಿಲ್ಲ .ಅದೇನೆನೊ ಕಾನೂನು ತಂದಿದ್ದಾರಂತೆ... ದೊಡ್ಡವರ ಮನೆ ಹೆಣ್ಣುಗಳು ಗಂಡನ್ನ ಪಾಪದ ನಾಯಿ ಮಾಡಲು ಬಳಸಿದಳು..ಮಧ್ಯಮ ಕೆಳ ಮಧ್ಯಮ ವರ್ಗದ  ಹೆಣ್ಣು ಮಕ್ಕಳು ಪಾಪ ಮರ್ಯಾದೆಗಂಜಿ ಇನ್ನು ಸೀಮೆ ಎಣ್ಣೆ ರೇಟು..ಗ್ಯಾಸು ಸಿಲೆಂಡರು .. ಫ್ಯಾನು..ನಿದ್ದೆಮಾತ್ರೆ  ರೇಟು ಜಾಸ್ತಿ ಮಾಡ್ತಿದ್ದಾರೆ ..ಪಾಪ ನಮ್ಮ ಮಹಿಳಾ ರಕ್ಷಣಾ ಸಂಘಗಳಿಗೆ ಏನ್.ಜಿ ಓ ಗಳಿಗೆ ಅಲ್ಲಿ ಯಾವುದೋ ಕೋಮುಗಲಭೆ(ಅದೂ ಅಲ್ಪ ಸಂಖ್ಯಾತ ಆಗಿರಬೇಕು!!) ಆಗಿ  ರುಚಿ ಕವಳದಂಥ ಸುದ್ದಿಗಳಾಗುವ.. ಟಿವಿ ಡಿಬೇಟುಗಳಲ್ಲಿ ಭಾಗವಹಿಸುವ ಅವಕಾಶ ದಕ್ಕಿಸುವ ಕೇಸು ಮಾತ್ರ ಕಣ್ಣಿಗೆ ಕಾಣುತ್ತದೆ .ಅದರ ಜೊತೆಗೆ ಸಂಸ್ತೆಗಳಿಗೆ ಹರಿದು ಬರುವ ಬಿಟ್ಟಿ ಹಣದ ಮೇಲೆಯೂ ಕಣ್ಣು.. ಹೀಗೆ ನಾಯಿ ರಕ್ಷಣೆಗಾಗಿ ಕಣ್ತೆರೆದ ಸಂಸ್ಥೆಯ  ಒಡತಿ  ಈಗ ಕೇವಲ ಕೋಟಿ ಲೆಕ್ಕದ ಮನೆ ತಗೊಂಡು ಅರ್ಧ ಕೋಟಿ ಲೆಕ್ಕದ ಕಾರಿನಲ್ಲಿ  ಗಂಡನೊಂದಿಗೆ ಓಡಾಡುತ್ತಾಳೆ.. ಪಾಪ ಬಿಡಿ ಅವರು ಬದುಕಿಕೊಳ್ಳ ಬೇಕು ಅಲ್ಲವೇ ??

ಅವನು ಪಾಪದ ಎಂ ಪಿ .. ಹೆಣ್ಣಿನ ದೇಹದ ಮೇಲೆ ಹಿಂಸ್ರ ಪಶುಗಳಂತೆ ಎರಗುವ ಗಂಡುಗಳು ಅವನ ರಕ್ತ ಸಂಬಂಧಿಗಳಿರಬೇಕು... ಅದಕ್ಕೆ ಅವರ ಪರ ನಿಂತಿದ್ದಾನೆ ..ಇದನ್ನೆ ದೊಡ್ದದು ಮಾಡಿ ಚಾನೆಲ್ಲುಗಳು ಟಿ ಆರ್ ಪಿ ಹೆಚ್ಚುಮಾಡಿ ಕೊಂಡವು.. ಮತ್ತು ನಮ್ಮ ದೇಶದಲ್ಲಿ ದಿನ ನಿತ್ಯ ಹೆಣ್ಣು ಎಂಬ ಜೀವಿಗಳು ಹುಟ್ಟುವುದು ತಪ್ಪು ಎಂದೂ ಇವರೆಲ್ಲಾ ಅಯೋನಿಜರೆಂದು ಸಾರಿ ಕೊಲ್ಲುತ್ತಲೇ ಇದ್ದಾರೆ ಹುಟ್ಟುವ ಮುನ್ನವೂ ಹುಟ್ಟಿನ ನಂತರವೂ ..ಒಬ್ಬ ನಿರ್ಭಯ ಮಾತ್ರ ಸುದ್ಧಿಯಾದಳು ನೂರು ಅಬಲೆಯರು ಸತ್ತ ವಿಷಯ ವಿಶೇಷವಲ್ಲ ಬಿಡಿ...

ಕಾನೂನು  ತಿದ್ದುವ ಜಾಗದಲ್ಲಿ ಕೂರುವವರು ಓದಿಕೊಂಡವರೇ  ಇರಬೇಕೆ ..ಸ್ವಾಮಿ ನಾವು ಹಿರಿಯರ ಸಂಸ್ಕೃತಿ ಯನ್ನು ಗೌರವಿಸುವವರು .ಹೆಬ್ಬೆಟ್ಟಾದರೂ  ಪರವಾಗಿಲ್ಲ .....ನಮ್ಮ ದುಡ್ಡಿನಲ್ಲೇ ವಿಮಾನ ದಲ್ಲಿ ಮತ್ತು ಸಂಸತ್ತಿನಲ್ಲಿ ನಿದ್ರಿಸುವ ಯಜಮಾನರು ಬೇಕು..ನಾವು ಓಬೇರಾಯನ ಕಾಲದ  ಕುರಿಗಳು .. ಅವರು ಬದಲಾಯಿಸಬಹುದಾದ ಕಾನೂನುಗಳನ್ನ ಮಾಡುತ್ತಾರೆ..ಮತ್ತು ಅವರವರ ಅನುಕೂಲಕ್ಕೆ ತಕ್ಕಂತೆ  ಬೇಕಾದಾಗ ಬದಲಾಯಿಸಿಕೊಳ್ಳುತ್ತಾರೆ .. ನಾವು ವಂಶ ಪಾರಂಪರ್ಯ ಆಡಳಿತಕ್ಕೆ ಹೊಂದಿಕೊಳ್ಳುತ್ತೇವೆ..ಮತ್ತು ನಮ್ಮದು ಗುಲಾಮಿ ಮನಸ್ಥಿತಿ .. ಅದು ನೂರಾರು ವರ್ಷಗಳ ಕಾಲದ ಹಳೆ ವರ್ಣತಂತು .. ನಿಧಾನಕ್ಕೆ ಬದಲಾಗುತ್ತದೆ ಬಿಡಿ.. ಇಂಗ್ಲಿಷರು ಕೊಟ್ಟ ಒಡೆದು ಅಳುವ ಕತ್ತಿಯನ್ನ ಒರೆಯಲ್ಲಿಡುವ ಬದಲು..ಅದನ್ನ ಮಸೆದು ಮಸೆದು ಹರಿತಗೊಳಿಸಿ ಜಾತಿ ಧರ್ಮ ಅನ್ನೋ ನೂರು ಪಂಗಡಗಳನ್ನ ಮತ್ತೆ ಕೊಚ್ಚಿ ರಕ್ತಸಿಕ್ತ ಸಿಂಹಾಸನದ ಮೇಲೆ ಕೂರುವ ನರಿಗಳ ನಿತ್ಯ ಉತ್ಸವ .."ಹುಚ್ಚು ಮುಂಡೆ ಮದ್ವೇಲಿ ಉಂಡವನೆ  ಜಾಣ"
ಎಲ್ಲರು ಉರಿವ ಮನೆಯಲ್ಲಿ ಗಳ ಹಿರಿವ ಕೆಲಸ ಮಾಡುವವರೇ ಹೊರತು.. ಬಿಡಿ  ನಾವು ಅವರನ್ನು ಕ್ಷಮಿಸಿದ್ದೇವೆ ..ಮತದಾನಕ್ಕೆ ರಜೆ ಸಿಗುತ್ತಿದ್ದಂತೆ ಊರುಗಳಿಗಳಿಗೆ ತೆರಳಿ ಹಬ್ಬದೂಟ ಮಾಡಿ ಗಡದ್ದು ನಿದ್ರಿಸುತ್ತೇವೆ... ಬೇರೆಯವರಿಗೆ ಮತದಾನದ ಮಹತ್ವವನ್ನ ಫೇಸು ಬುಕ್ಕಿನಲ್ಲಿ ಟ್ವಿಟ್ಟರಿನಲ್ಲಿ  ಉಪದೇಶಿಸಿ ದೊಡ್ಡವರಾಗುತ್ತೇವೆ!!

 ನೀರಿಲ್ಲದಿದ್ದರು ನಳಗಳನ್ನು ಹಾಕುವ..ರಸ್ತೆಯೇ ಇಲ್ಲದಿದ್ದರೂ ಕಾಮಗಾರಿ ಮಾಡುವ..ಕೆರೆ ಹೂಳೆತ್ತಲು ಬಿಲ್ ಪಾಸು ಮಾಡಿಸಿ ಇಡಿ ಕೆರೆಯನ್ನೇ ಮಟಾ ಮಾಯ  ಮಾಡುವ ..ಚುನಾವಣೆಯ ಕಾಲಕ್ಕೆ ಸಪೂರ ಸೊಂಟದ ನಟೀಮಣಿಯರನ್ನು ಕಣಕ್ಕಿಳಿಸಿ ಮನರಂಜನೆ ಮಾಡಿಸುವ ,ಕೋತಿ ಕೋಟಿ  ಲೆಕ್ಕದ ಹಗರಣಗಳನ್ನು ಸುಳ್ಳು ಎಂದು ತೋರಿಸಲು ನಮ್ಮದೇ ದುಡ್ಡಲ್ಲಿ ತನಿಖಾ ಸಂಸ್ಥೆಯನ್ನು ಸ್ಥಾಪಿಸುವ , ಉದ್ಯಮಿಗಳಿಂದ ಸಾವಿರ ಕೋಟಿಗಳ  ಲೆಕ್ಕದಲ್ಲಿ ಫಂಡು ಸ್ವೀಕರಿಸುವ... ಜೂಜಾಡುವ ..ಶರ್ಟು ಕುರ್ಚಿ ಹಿಡಿದು ಹೊಡೆದಾಡುವ ... ಬಿಳಿಯಾನೆಗಳ ಕೈಯಲ್ಲಿ ಜುಟ್ಟು ಕೊಟ್ಟು ದೇಶವನ್ನು ಇಂಚಿಚಾಗಿ ನುಂಗುವ ಇವರನ್ನೆಲ್ಲಾ ನಾವು ಏನು ಮಾಡ ಬಾರದು..ಸ್ವಾಮೀ ..ಪ್ರಾಣಿ  ಹತ್ಯೆ ಮಹಾ ಪಾಪ..ತೊಳೆದು ಕೊಳ್ಳಲು ಈಗ ಗಂಗೆಯು ಶುದ್ಧಳಿಲ್ಲ!!

ಮುಗಿಯಿತೇ  ಚುನಾವಣೆ..ಭರವಸೆಯ ಬಂಡಿಯನ್ನ  ನಿಮ್ಮ ಊರುಗಳಲ್ಲಿ ಹಣ ಹೆಂಡ ಸೀರೆ ಜಾತಿ ಧರ್ಮ ಅಂತ ಹಾರಿಸಿದ್ದಾಯಿತು... ಹೊತ್ತಿಕೊಂಡ ಹೊಟ್ಟೆ ಅರವತ್ತು ವರ್ಷಗಳಲ್ಲೂ ಮುಂದೆ ಬರಲಿಲ್ಲ ..ಕಾರು ಇದ್ದವನ ಮನೆ ಮುಂದೆ ಈಗ ಕಾರುಗಳದ್ದೆ ಜಾತ್ರೆ..ಆದರೂ ಅನ್ನ  ತಿನ್ನುವವರು ಇನ್ನು ಬದುಕಿದಾರೆ.. ಮುಂದೊಂದು  ದಿನ ನಿಜವಾದ ಚುನಾವಣೆ ನಡೆಯಲಿದೆ ... ಮತ್ತು ಇನ್ನೂ ಚುನಾವಣೆ ಮುಗಿದಿಲ್ಲ ..!!
ನೋಟಿನಲ್ಲಿಯ ಗಾಂಧಿ ನಗುತ್ತಲೇ ಇದ್ದಾರೆ!!

ಚಿತ್ರ ಕೃಪೆ -ಅಂತರ್ಜಾಲ 

Friday, March 14, 2014

ಹರೆಯ ಬಂತು ಹರೆಯ

ಆಗಷ್ಟೇ ಕಿತ್ತು ಬಿದ್ದ ಗಾಳಿಪಟ,ಹೊಟ್ಟೆಯೊಳಗೆ ನುಲಿವ ಸಂಕಟ 
ಜೀವ ಪ್ರಕ್ರಿಯೆಗೆ ಅನುಗೊಳ್ಳುವ ದೇಹ 
ರಕ್ತಮಯ  ತೊಡೆಗಳ ನಡುವೆ ಚಿಗುರುವ ಚಿಟ್ಟೆ ಮೊಟ್ಟೆ
ದಿನಕಳೆದಂತೆಲ್ಲಾ ಬಟ್ಟೆಯಂತೆ ದೇಹ 
ಒಗೆದು ಹರಡುವ ಬಯಕೆ 
ದಾರಿತಪ್ಪದೇ ಅಮ್ಮನ ಎದೆಗವಿತು ಆಶ್ರಯ 
ಪ್ರತಿ ಹುಡುಗನಲ್ಲು ಕಾಡುವ ರೋಮಿಯೋ 
ಥೇಟ್ ಕ್ಲಿಯೊಪಾತ್ರಳದ್ದೆ ನೃತ್ಯ ನಡಿಗೆಗೆ 
ಜಂಬದ ಕೊಂಬು ಹಾರು ಕೂದಲ ಮೇಲೆ 
ಮಿಗ್ ವಿಮಾನದ್ದೆ ವೇಗ  ಸ್ಕೊಟಿಗೆ 
ಹಾದಿಗಳ ಹಾದು ,ಹಳ್ಳ ಕೊಳ್ಳಗಳ  ದಾಟಿ ಓಡುವ 
ಹುಮ್ಮಸ್ಸಿನಲ್ಲಿ ಕರೆಯುವುದ ಮರೆತಳು "ಕರುಣಾಳು ಬಾ ಬೆಳಕೇ"
ಮುಗಿಲ ಮಾರಿಗೆ ತುಂಬಿದ ರಾಗ ಕೆಂಪಿನ ಸಮಯ 
ಕಳ್ಳ ಬೆಕ್ಕೊಂದು ದಾರಿಗಡ್ಡ 
ಹಾವಾದಳು ಫುತ್ಕರಿಸಿ ಹೂ ಆದಳು 
ದುಂಬಿ ಮುಖವೆಲ್ಲ ಉನ್ಮತ್ತ.. ಮಧುಮತ್ತ 
ಕಿವಿ ತುಂಬಾ ಇಂಪಾದ  ಕಾಮಗಾನ 
ಮೈಮರೆತ ಕ್ಷಣಕ್ಕೆ ನೋವ ಮೀರಿ 
ಹೊಮ್ಮಿದ ಸುಖದ ಕಡಲ ಆಳುವ ರತಿ!!
ಹಾವು ಕಚ್ಚಿದ ಜಾಗವೆಲ್ಲಾ ನೀಲಿ 
ಮಾನಿನಿ ನರಳುತಾಳೆ ಈಗ 
ಮೊಬೈಲು ಸಂದೇಶಗಳಲ್ಲಿ 
ಮುಖಪುಸ್ತಕದ ಚಿತ್ರಗಳಲ್ಲಿ 
ಮಾಳ ಬೆಕ್ಕಿನ ಕಥೆಯ ಯಾರು ನಂಬುತ್ತಿಲ್ಲ 
ಹಗಲು ಮಲಗಿದ ಮೇಲೆ ಮಂದ ಬೆಳಕಿನಲ್ಲಿ 
ಚಿಗುರು ಮೊಲೆಗಳ ನಡುವೆ ಉಗುರ
ಗುರುತ ನೋಡುತಾಳೆ ... ಮತ್ತಷ್ಟು ಸ್ವಗತ 
ಐ ಪಿಲ್ಲಿನ ಸಂಗತ್ಯದಲ್ಲಿ ಇಳಿದುಹೋದ 
ಗುಟ್ಟೊಂದನ್ನು ಬಚ್ಚಿಟ್ಟು ಮಲಗಿದವಳಿಗೆ
 ರಾತ್ರಿ ಎಲ್ಲಾ ಪೊರೆ ಬಿಟ್ಟ ಕನಸು!!
ಬೆಳಗೆದ್ದಾಗ ಕಂಡದ್ದು  ಬೆನ್ನಿಗೆ ಅಂಟಿಕೊಂಡ 
ಪಾತರಗಿತ್ತಿಯ ಬಣ್ಣ ಬಣ್ಣದ ರೆಕ್ಕೆಗಳು!!
ನೀವು ನೋಡಿದಿರಾ??

"ಮಹಿ"
(ಪಂಜುವಿನಲ್ಲಿ ಪ್ರಕಟವಾದ ಕವಿತೆ)

Friday, March 7, 2014

ಮನದಲ್ಲಿ ಹೊಳೆದದ್ದು !!


ಎದುರು ಬದುರು ಕುಳಿತಿದ್ದೆವು... ಬರೀ ದೂರವಾಣಿಯಲ್ಲಿ ಮಾತಿತ್ತು ನಿನ್ನೆಯ ತನಕ ,ಇವತ್ತು ತುಂಬಾ ಚರ್ಚೆಗಳು.. ನನಗೆ ಆರೋಗ್ಯಕರವಾದ ಸಂವಾದ ಬೇಸರ ತರುವದಿಲ್ಲ ..ಯಾವ ವಿಷಯಕ್ಕೂ ಸೈ,ನನಗೆ ಗೊತ್ತಿದ್ದನ್ನು ಹೇಳಿ ಗೊತ್ತಿಲ್ಲದ್ದನ್ನು  ಕೇಳುವ ತನಕ ... ನಾನು ಆಗಷ್ಟೇ ಓಶೋ ಪುಸ್ತಕ ಓದಿ ಮುಗಿಸಿದ್ದೆ..ಮಾತಾಡುತ್ತಾ ಆಡುತ್ತಾ ಮುಕ್ತ ಲೈಂಗಿಕತೆ ಎಡೆಗೆ ಮಾತು ಹೊರಳಿತು... ನನ್ನ ಅಭಿಪ್ರಾಯ ಕೇಳಿದ ..ನಾನು ಹೇಳಿದೆ... ಮನಸ್ಸು ಒಪ್ಪಿದವರೊಡನೆ ಇರುವುದು ಖಂಡಿತಾ ತಪ್ಪಲ್ಲ,ಮನಸ್ಸು ಮುರಿದವರೊಡನೆ ಬದುಕುವುದು ತಪ್ಪು .. ಈಗವನ ಬಾರಿ , ಒಂದು ಕ್ಷಣ ಏನು ಹೇಳಲಿಲ್ಲ ..ನಂತರ ನನ್ನ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ "ನನ್ನ ಮನೆ ಮನಸ್ಸು ಖಾಲಿ ಇದೆ ..ಬಿಟ್ಟು  ಬಂದು ಬಿಡು " ನಿರುತ್ತರಳಾಗುವ ಸರದಿ ನನ್ನದು..ಆಡದೆ ಉಳಿದ ಮಾತಿತ್ತು .ಅದಕ್ಕು ಮೀರಿದ ಕರ್ತವ್ಯದ ಕರೆ ಇತ್ತು .. ಹಾಗೇ ಒಂದು ಕಲ್ಪನೆಗಾದರು ಕನಸಿಗಾದರೂ ಸಿಗಬಹುದಾದ ಅವನ ಲೋಕವನ್ನ ವಾಸ್ತವಕ್ಕೆ ಬಂದು ಕಳಕೊಳ್ಳೋ ಭಯವಿತ್ತು !! ಮತ್ತೆ ನಾ ಅವನೊಡನೆ ಮುಕ್ತ ಲೈಂಗಿಕತೆಯ ಬಗ್ಗೆ ಮಾತಾಡಲಿಲ್ಲ..ಅವನೂ ಸಹ!!



ಪಕ್ಕದ ಮನೆಯಾಕೆ ನೀರು ಹಾಕಿ ಒಪ್ಪವಾಗಿ ರಂಗೋಲಿ ಇಡುತ್ತಾಳೆ ..ನಮ್ಮವ ಅದನ್ನ ನೋಡಿದಾಗಲೆಲ್ಲಾ ನನ್ನತ್ತ ಕಣ್ಣು ಹರಿಸಿ ನಿಟ್ಟುಸಿರಿಡುತ್ತಾನೆ ... ನನಗೆ ಇವನಂತವರ  ಮನಸ್ಥಿತಿಗೆ  ಮರುಕ, ಸಂಬಳ ತಂದ ಹದಿನೈದು ದಿನ ಗೆಳೆಯರೆದುರು ದೇವತೆ   ಎಂದು ಅಟ್ಟಕ್ಕೆರಿಸುವುದು ,ಉಳಿದ ದಿನ ರಾತ್ರಿಗಳು ದೂರದೂರಿನ  ಮನೆಯವರೆದುರು ಅವಳು ಒಪ್ಪವಿಲ್ಲ ಅದು ಮಾಡೋದಿಲ್ಲ ಇದು ಮಾಡೋದಿಲ್ಲ ಎಂದು ದೂರೋದು ... ಮೊದಲೆಲ್ಲಾ ಏಣಿ ಹತ್ತಿದ್ದು ಇಳಿದದ್ದು ಗೊತ್ತಾಗುತ್ತಿರಲಿಲ್ಲ ..ಈಗೀಗ ಹುಶಾರಾಗಿದ್ದೇನೆ...  ಅವನ ಹೊಗಳಿಕೆಗೂ ತೆಗಳಿಕೆಗೂ ಆಕಾಶದಲ್ಲಿ ಕಣ್ಣು ನೆಟ್ಟು ಅಮವ್ಯಾಸೆಯಲ್ಲಿ ಕಾಣದ ಚಂದ್ರಮನ  ನೆನೆದು ನಿಟ್ಟುಸಿರಿಡುತ್ತೇನೆ !!



ಅವನು ಹತ್ತಿರದ ಗೆಳೆಯ ಅವನ ತೀರ  ವೈಯುಕ್ತಿಕ ವಿಷಯಗಳು ನನಗೆ ಗೊತ್ತು ..ನೋಡಲಿಕ್ಕೂ ಚನ್ನಾಗಿದ್ದಾನೆ..
ಓದಿಕೊಂಡಿದ್ದಾನೆ ..ಸ್ತ್ರೀವಾದದ ಬಗ್ಗೆ ಸ್ತ್ರಿಲಿಂಗಿಯಾದ  ನನ್ನೇ ಸೋಲಿಸುವಷ್ಟು ಮಾತಾಡುತ್ತಾನೆ , ಆದರೆ ನನ್ನ ಕಷ್ಟಗಳನ್ನ ಹೇಳಿದಾಗ ಮಾತ್ರ ಆಥವಾ  ಅಪ್ಪಟ ಅಪ್ಪನಂತೆ ಅಥವಾ ತಮ್ಮನಂತೆ "ನೀನು ಹೆಣ್ಣು ಕಣೇ ..ಸಹಿಸಿಕೋಬೇಕು ..ಏನೋ ಒತ್ತಡದ ಗಳಿಗೆಗಳು" ನನಗೆ ಉರಿದು ಹೋಗುತ್ತದೆ .. ಅವನೊಡನೆ ಶರಂಪರ ಕಿತ್ತಾಡಿ ಬರುತ್ತೇನೆ ..ಕಣ್ಣತುಂಬಾ ಪ್ರಶ್ನಾರ್ಥಕ ಚಿಹ್ನೆ ಹೊತ್ತು ಕಾಯುತ್ತಿರುವ ನನ್ನವನೆದುರು ನಿಂತು "ಆಯ್ತಾ,ಇವತ್ತು ಜಗಳವಿಲ್ಲ...ಏನು ಮಾಡಲಿ ಊಟಕ್ಕೆ.. ಕಾಫಿ ಕುಡಿತೀಯಾ?" ಕೇಳುತ್ತೇನೆ, ಕಿತ್ತಾಟಕ್ಕೆ ಸಿದ್ಧವಾಗಿ ಶಸ್ತ್ರ ಸಜ್ಜಿತನಾಗಿದ್ದ ಅವ ಕತ್ತು  ಕೆಳಗಿಳಿಸಿ" ಕಾಫೀ ಮಾಡು" ಅನ್ನುತ್ತಾನೆ ..ಕಣ್ಣಲ್ಲಿ  ತುಂಟ ವಿಜಯದ ನಗು ಹೊತ್ತು ನಾನು ಅಡಿಗೆ ಮನೆಯತ್ತ ಧಾವಿಸುತ್ತೇನೆ ಮನದಲ್ಲಿ ದಿನವೂ ಅವನು ಸಿಗಬಾರದೇ ಎಂದು ಶಾಪ ಹಾಕುತ್ತಾ  !!

ಚಿತ್ರಕೃಪೆ :ಅಂತರ್ಜಾಲ 

Saturday, January 4, 2014

ಪ್ರೇಮ ನಾದ ಮತ್ತು ಬೆಳಕು(ಕಾವ್ಯ ಗುಚ್ಛ)

 ನಾದ -೧

ತೂಗುವ ಸಮಯದ ತೂಗುಯ್ಯಾಲೆ
ಇತ್ತಿಂದತ್ತ ಅತ್ತಿಂದಿತ್ತ ತೂಗದೆ ನಿಂತ ಹಾಗಿದೆ!!

ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
ದೋಣಿ ಇಲ್ಲೆ ಇದೆ
ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
ಹುಡುಕುವ ದರ್ದು ನಮಗೂ ಇಲ್ಲ

ನಿನ್ನೆದೆಯ ಮೇಲಿನ ಅಷ್ಟೂ ಕೂದಲ ಎಣಿಸುತ್ತಾ 
ಮಲಗಿದ್ದೇನೆ
ಯಾರು ಎಚ್ಚರಿಸುವದಿಲ್ಲ

ಅನಾಹತ ದ  ಆಳದಲ್ಲಿ ಮಿಡಿಯುವ
ನಮ್ಮ ಆತ್ಮಗಳ ಮಿಲನದ ನಾದಕ್ಕೆ
ಜಗತ್ತು ಮನ ಸೋತಿದೆಯಂತೆ 

ಹೌದಾ ?? ನನ್ನ ಚಲುವ ಶ್ಯಾಮಾ??


ನಾದ-೨


ಕಾರಣ ನೀನೇ!!


ಬಕ್ಕ ಬಾರಲು ಬಿದ್ದಿದ್ದ ಆಸೆಗಳು
ನಿನ್ನ ನೋಡುತ್ತಲೇ ಚಿಗುರಿಕೊಂಡವು
ಮುಗುಳ್ನಕ್ಕು ವರ್ಷಗಟ್ಟಲೇ ತುಕ್ಕು
ಹಿಡಿದಿದ್ದ ನರನಾಡಿಗಳ ಸವರಿ ಮತ್ತೆ ದೇಹ
ವೀಣೆಯ ಶ್ರುತಿ ಹಿಡಿದವಳು ನೀನೇ!!

ತಾರೆಗಳ ಬೆಳಕಿನ ಮಳೆಯಲ್ಲಿ ಮಿಂದ ಕನಸಿತ್ತು
ಅಲ್ಲಿ ನನ್ನ ಕೈ ಚಾಚಿದ್ದು ನಿನ್ನ ಹೃದಯ ಚಂದ್ರಮನಿಗಾಗಿ
ಕಳೆದ ವಸಂತಗಳ ಲೆಕ್ಕವಿಟ್ಟಿರಲಿಲ್ಲ ನಾನೂ
ದಿನಾ ಇಣುಕುವ ಬಿಳಿ ಕೂದಲಿಗೆ
ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ!!

ಚಿಪ್ಪಿನಲ್ಲಿ ಅವಿತಿದ್ದ ತುಂಟತನ
ಈಗ ಕಚಗುಳಿ ಇಡುತ್ತಿದೆ
ಚಳೀಗಾಲವಿದು..ಎಳೆಬಿಸಿಲು 
ನೀ ಆದರೆ ಚಂದ, ಮಾತು ಬರದ
ನನ್ನ ಮೌನ ಒಲವಿಗೆ ನಿನ್ನ 
ಬಿಸಿ ಮುತ್ತಿನ ಒಪ್ಪಿಗೆ ಸಿಕ್ಕರೆ ಸಾಕು!!

ಕೇಳಬೇಡ ಈಗ, ಎಲ್ಲದಕು ಕಾರಣ
ನೀನೇ!!

ನಾದ -೩


ದಾರಿಯಲಿ ಬಿದ್ದವಳು ಕಣ್ತೆರೆವ ಮೊದಲೇ 
ತುಳಿದು ತಳ್ಳಿದವರು ಎಷ್ಟೋ ಮಂದಿ 
ತಿರಸ್ಕಾರ ನಿಂದೆಗಳಿಗೆ  ಪಕ್ಕಾಗಿ ಸುಕ್ಕಾದರೂ 
ಹರಿಯುತಿದ್ದ ಆಸೆಯ ಅಮೃತ ವಾಹಿನಿಯ ಹೊತ್ತು ಕಾಯುತಲಿದ್ದೆ... 

ಬಂದೇ ಬಂದನಲ್ಲ ಅವ.. 
ಯಾವ ಸೀಮೆಯ ಮಾಯಕಾರ ??
ಯಾವ ಲೋಕದ ಸಂತ??
ಬರುವ ಹಾದಿಗೆಲ್ಲಾ ಕಾಮನಬಿಲ್ಲು 
ನಿಂತಲ್ಲೆಲ್ಲ  ಕಿಲಿಸುವ ಹೂ ಹುಲ್ಲು 
ನನ್ನ ನೋಡಿ ಮುಗುಳ್ನಕ್ಕ 
ಅಂತಿದ್ದ ನೂರು ಜಾಢ್ಯಗಳ ಧೂಳ 
ತನ್ನ ಚಿಗುರು ಬೆರಳುಗಳಲ್ಲಿ ಸವರಿ 
ತನ್ನ ತುಟಿಗಿಟ್ಟ!!

ಇವ ಗಂಧರ್ವನೇ  ಇರಬೇಕು!!

ನಾನೀಗ ಹರಿಯುತ್ತಿದ್ದೇನೆ ಸಲಿಲ ಹೊಸ ರಾಗಗಳಲ್ಲಿ 
ನವ ರಂಧ್ರಗಳ ಕೊಳೆಯ ತೊಳೆದವನೇ ಹೇಳು 
ಅದೋ ಮಂದ್ರದಿಂದ ಷಡ್ಜದವರೆಗೆ 
ಕಣಕಣವ ಅರಳಿಸಿ 
ನನ್ನ ಭಾಗ್ಯದ ಕುಂಡಲಿನಿಯ 
ಮೂಲಾಧಾರದಿಂದ ಸಹಸ್ರಾರಕ್ಕೆ 
ತಾಕಿಸಿ ಹೋಳಾಗಿಸಿದೆ .. 


ಇದು ಚಂದ್ರ ಕೌಂಸ ವಲ್ಲ ಭೈರವಿಯೂ ಅಲ್ಲ 
ಬಹುಶಃ  ಮೋಹನವೇ ? ಇರಬೇಕು!!
ಋತುಕಾಲಗಳೆಲ್ಲ  ನಿಂತಿವೆ ..
ಸಪ್ತಋಷಿ ಮಂಡಲವೋ ಹಾಲ ಕಣಿವೆಯೋ 
ಇವನ ಕಣ್ಣ ಬೆಳಕಲ್ಲೇ ಹುಟ್ಟಿದವೇ??
ಸುತ್ತೆಲ್ಲ ಹರಿವ ನಾದಗಂಗೆ 
ಬೆಳಕೋ ಬೆಳಕು 
ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ 
ನಿನ್ನ ಉಸಿರಿಗೆ ಪಕ್ಕಾಗಿ 
ನಾನೀಗ ಅಲೌಕಿಕೆ !!

ನನಗಿನ್ನು  ಸಾವಿಲ್ಲ!!





Thursday, January 2, 2014

ಒಲವ ಭಾಷೆ

1 -ಒಲವು 

ಥೂ  ಇವತ್ತೂ ಲೇಟ್  ಆಯ್ತು . ಅಮ್ಮ ಬೈಯ್ಯೋದು  ಗ್ಯಾರಂಟಿ . ....   
ಹೇಳ್ತಾನೆ ಇದ್ದೀನಿ  "ಪಮ್ಮಿ ಲೇಟ್ ಆಗುತ್ತೆ" ಕೇಳೋದೇ ಇಲ್ಲ ನನ್ನ ಮಾತು, ಮಹತಿಯ ಮನದಲ್ಲಿ ಆತಂಕದ ಅಲೆ.. 
ಕಣ್ಣೆದುರು ಕನ್ನಡಕದ ಅಪ್ಪ,ಕೆಂಪು ಕಣ್ಣಿನ ಅಮ್ಮನ  ನೆನಪು ಬಂದು ತಲೆ ಸುತ್ತಿದ ಹಾಗಾಯ್ತು ... 
"ಏನೇ,ಮನೆ ಬರೋ ಮುಂಚೆನೇ ತಲೆ ಮೇಲೆ ಬಂಡೆ ಹೊತ್ತೋಳ ತರ ಆಡ್ತಾ ಇದ್ದೀಯ, ನಿನ್ನ ಅಪ್ಪ ಅಮ್ಮ ಏನು  ಹುಲಿ,ಸಿಂಹನಾ" ಪಮ್ಮಿಯ ಮಾತು ಚುಚ್ಚಿತು. ಹೌದು ಮತ್ತೆ ಹುಲಿ,ಸಿಂಹಾನೇ ,ಅದೇ ತನ್ನ ಫ್ರೆಂಡ್  ನಂದಿನಿ, ಥೆಕ್ ಹೋಗಿ ಬಂದರೂ ಏನ್ ಹೇಳಲ್ಲ , ತನಗೆ ಕಂಬೈನ್ ಸ್ಟಡಿಗು ಹೋಗೋಕ್ಕೆ ಬಿಡಲ್ಲ .. ಸಿಟ್ಟು  ಅಸಹಾಯಕತೆ ಒಟ್ಟೊಟ್ಟಿಗೆ  ಬಂತು,ಅಪ್ಪ ಅಮ್ಮನ ಮೇಲೆ ತಿರಸ್ಕಾರ  ಹುಟ್ಟಿತು.. 
"ಮನೆ ಬಂತು ಇಳ್ಕೋ,ಮೂತಿ ಹಾಗೆ ಇಟ್ಕೊಂಡಿರು,ನಿಂಗೆ ನಾನೇನೋ ಮಾಡಿದ್ದೀನಿ  ಅಂತ ನಿಮ್ಮಪ್ಪ,ಅಮ್ಮ ತಿಳ್ಕೊಳ್ಳಲಿ .."ಎಂದ ಪಮ್ಮಿಯ ಮುಖ ನೋಡಿದಳು ... " ಬೈ ..ನಾಳೆ ಸಿಗ್ತೀನಿ " ಅಂದು ಅವನು  ಬೇರೇನೋ ಹೇಳೋದಿಕ್ಕೆ ಮುಂಚೆ ಗೇಟ್ ತೆಗೆದು ಒಳಗೆ ಓಡಿದಳು.. ಬೆಲ್ ಬಾರಿಸಿದಳು... ಯಾರೂ  ತೆರೆಯಲಿಲ್ಲ..ಒಮ್ಮೆ ಬಾಗಿಲನ್ನು ಮೆಲ್ಲನೆ ತಳ್ಳಿದಳು .. ಬಾಗಿಲು ತೆರೆದಿತ್ತು..ಆತಂಕದ ಜೊತೆ ಸಂತಸವು ಆಯಿತು ..
ಅಪ್ಪ ಅಮ್ಮನ ಸುಳಿವಿಲ್ಲ.. "ಅಮ್ಮಾ,ಅಪ್ಪಾ " ಕೂಗಿ ನೋಡಿದಳು ..ಸದ್ದಿಲ್ಲ .. ಸ್ವತಂತ್ರವಾದ ಭಾವ   .. ಟಿ.ವಿ ಹಾಕಿದಳು..ಮುಖ ತೊಳೆದು ಬಂದು ಸೋಫಾ ಮೇಲೆ  ಕುಳಿತಳು..ಸಮಯ ಹೋದದ್ದೇ ಗೊತ್ತಾಗಲಿಲ್ಲ ..  ಗಂಟೆ ಹತ್ತೂವರೆ ಆಯ್ತು.. ಯಾಕೋ  ಒಂತರದ ನಡುಕ  ಶುರುವಾಯ್ತು .. 
ಅಪ್ಪನ ಫೋನಿಗೆ ಟ್ರೈ ಮಾಡಿದಳು ..ಸ್ವಿಚ್  ಆಫ್  ಬಂತು ..ಸಣ್ಣದಾಗಿ ಗಾಬರಿ ಶುರುವಾಯ್ತು.. ಅಮ್ಮನ ಮೊಬೈಲಿಗೆ    ಟ್ರೈ ಮಾಡಿದಳು. ..ವ್ಯಾಪ್ತಿ ಪ್ರದೇಶದಿಂದ ಹೊರಗೆ ಎಂದು ಬಂತು ... ಸಣ್ಣದಾಗಿ  ಭಯ ಕಾಡಲಾರಂಭಿಸಿತು.. 
ಈ ದೊಡ್ಡ ಮನೆಯಲ್ಲಿ  ಭೂತದ ತರ ಒಬ್ಬಳೇ ಯಾವತ್ತೂ ಇದ್ದವಳಲ್ಲ ತಾನು,ಒಮ್ಮೆ 5 ನೇ ತರಗತಿಯಲ್ಲಿದ್ದಾಗ ಅಮ್ಮ ಮನೆಯಲ್ಲಿ ಬಿಟ್ಟು ತರಕಾರಿ ತರಲು ಹೋಗಿದ್ದಾಗ ತಾನೆಷ್ಟು ಅತ್ತಿದ್ದೆ .. ಒಮ್ಮೆ ಅಪ್ಪ ಅಮ್ಮನ ರೂಮಿಗೆ ಹೋಗಿ ನೋಡಲೇ ?? 
ನಿಧಾನವಾಗಿ ರೂಮಿನ ಬಾಗಿಲು ತೆರೆದಳು.ಅಪ್ಪನ ಆಫೀಸಿನ ಬ್ಯಾಗು.ಅಮ್ಮನ  ಸೀರೆ  ಮಂಚದ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು..  ಯಾವತ್ತು ಅಪ್ಪನ ವಾರ್ಡ್ ರೋಬಿಗೆ  ಕೈ ಹಾಕಿದವಳಲ್ಲ..ಈ ದಿನ ಕೆಟ್ಟ ಕುತೂಹಲ.... ತೆರೆಯುತ್ತಿದ್ದ ಹಾಗೆ ಕಂಡದ್ದು ಫೈಲುಗಳ ರಾಶಿ.. ಹಾಗೇ ಒಂದು ಪುಟ್ಟ ಕೆಂಪು ಬಾಕ್ಸ್ ..... ಆಹ್ !! ಎಷ್ಟು ಸುಂದರವಾಗಿದೆ...ತೆರೆಯಲು ಪ್ರಯತ್ನಿಸಿದಳು..  ಲಾಕ್  ತೆರೆಯಲಾಗಲಿಲ್ಲ ..ಯೋಚಿಸುತ್ತಾ  ಕುಳಿತಳು.. 
"ಮಹತಿ .. ಏನ್ ಮಾಡ್ತಾ ಇದ್ದೀಯ??"
ಅಮ್ಮನ ದ್ವನಿ ಎಚ್ಚರಿಸಿತು.. ಭಯ ಬಿದ್ದವಳಂತೆ ನೋಡಿದಳು.ಮೊಗದ ತುಂಬಾ ಪ್ರೀತಿ  ಹೊತ್ತ ಅಮ್ಮ ಅಪ್ಪ.. ಆದರೆ ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ?.. 
"ನಮ್ಮ ರೂಮ್ನಲ್ಲಿ ಅದೂ ಅಪ್ಪನ ವಾರ್ಡ ರೋಬ್  ತೆಗೆದು  ಏನ್ ಮಾಡ್ತಾ ಇದ್ದೀಯ?? ಯಾವ್ಯಾವುದೋ  ಮುಖ್ಯ ಫೈಲುಗಳಿರುತ್ವೆ .."
ಕೇಳಿಸದವಳಂತೆ  ಅಮ್ಮನನ್ನೇ ದಿಟ್ಟಿಸಿದಳು ... ಮುಖದಲ್ಲಿ ಕುತೂಹಲ  ಮಾತಾಗಿತ್ತು.. 
"ಅಮ್ಮಾ, ಆ ಕೆಂಪು ಬಾಕ್ಸ್ ನಲ್ಲಿ  ಏನಿದೆ??"
"ಓ  ಅದಾ.. ಬಿಡು ..ನಿಮ್ಮಪ್ಪ ಅಮ್ಮನ ಆಸ್ತಿ... ನಿಂಗೇನು ಅದು ಮುಖ್ಯವಲ್ಲ ಆಲ್ವಾ??"
ಅಮ್ಮನ ಸಣ್ಣ ಚುಚ್ಚುವಿಕೆ ತಾಗಿದವಳಂತೆ ಮುಖ ಬಾಡಿತು.. 
"ಅಮ್ಮಾ..ಪ್ಲೀಸ್ ಹಾಗೆಲ್ಲ ಮಾತಾಡಬೇಡ ಅಮ್ಮಾ, ಏನಿದೆ ಅಮ್ಮಾ..ಪ್ಲೀಸ್ ತೋರಿಸು "
"ತಗೋ..ನೋಡು " ಅಮ್ಮ ಕೊಟ್ಟ ಸಣ್ಣ ಕೀಲಿಯನ್ನ ನೋಡಿ ಕುಶಿಯಾಯ್ತು.. 
ತೆರೆದಾಗ ಕಂಡದ್ದೇನು ??
ಪುಟ್ಟದಾದ ಫ್ರಾಕು ,ಒಂದು ಪುಟ್ಟ ಬಿಳೀ ಕೋಟು..  ಕಾಗೆ ಗುಬ್ಬಿ ಅಕ್ಷರದಲ್ಲಿ  ಗೀಚಿದ್ದ "ಅಮ್ಮ. ಅಪ್ಪ ಲವ್ ಯು " ಅನ್ನೋ ಅಕ್ಷರಗಳು..  ಅರ್ಥವಾಗಲಿಲ್ಲ..
ಅಪ್ಪನಿಗೆ ಇವಳ ಮುಖ ನೋಡಿಯೇ ಗೊತ್ತಾಯಿತು...
ಪಕ್ಕದಲ್ಲಿ ಬಂದು ಕೂತರು...
ಕೈ ಹಿಡಿದು "ಪುಟ್ಟಾ ,ಇದೆಲ್ಲ ನಿನ್ನ ಪುಟ್ಟ ಕನಸುಗಳು..ನಮ್ಮ ಆಸ್ತಿ.. ನನಗೆ ಗೊತ್ತು..ನಿನ್ನೆಲ್ಲಾ ಆಸೆಗಳನ್ನ ಪೂರೈಸಲು ಸಾಧ್ಯವಾಗುತ್ತಿಲ್ಲ..ನಿನ್ನ ವಯಸ್ಸಿಗೆ ತಕ್ಕಂತೆ ಬಯಕೆಗಳಿಗೆ ಸ್ವಾತಂತ್ರದ ರೆಕ್ಕೆ ತೊಡಿಸಲಾಗುತ್ತಿಲ್ಲ ಎಂದು.. ಆದರೆ ಪುಟ್ಟಾ..
ನಿನ್ನ ಬದುಕು ದೊಡ್ಡದಿದೆ..ನಿನ್ನ ಪುಟ್ಟ ಆಸೆಗಳನ್ನ ಯಾವತ್ತೂ ಪೂರ್ತಿ ಮಾಡಿದ್ದೀವಿ..ನೀನು ನಂಗೆ ಇರೋ ಒಂದೇ ಆಸ್ತಿ..ನಿನ್ನ ದೇಹ ಮನಸ್ಸು ಎರಡು ಸ್ವಸ್ಥ ಮತ್ತು ಬಲಿಷ್ಟವಾಗಿ ಬೆಳೆಯಬೇಕು..ಎಲ್ಲಾ ವಯೋಸಹಜ ಆಸೆಗಳನ್ನ ಮೀರಿ ನಿನ್ನ ಗುರಿಯತ್ತ ಗಮನ ಹರಿಸು..
ನೀನು ಚಿಕ್ಕೊಳಿದಾಗ ಈ ಪುಟ್ಟ ಕೋಟನ್ನ ಅದೆಷ್ಟು ಪ್ರೀತಿಸಿದ್ದೀಯಾ..ನಾನು ದಾಖ್ತೊರ್ರು ಆಗ್ತೀನಿ ಅಂತಿದ್ದೆ.. ಅವೇ ನಮ್ಮ ಅಸ್ತಿ ಪುಟ್ಟಾ"
ಮಹತಿಯ ಬಟ್ಟಲು ಕಂಗಳಲ್ಲಿ ಅಪ್ಪ ಅಮ್ಮನ ನಿರೀಕ್ಷೆಗಳು ಮಿನುಗಿತು ...ಅಪ್ಪ ಅಮ್ಮನನ್ನ ಶತ್ರುವಿನಂತೆ ಯೋಚಿಸುತ್ತಿದ್ದ ನೆನೆದು  ಕಂಗಳಲ್ಲಿ ಹಟ,ಪಶ್ಚಾತ್ತಾಪ ಕಣ್ಣೀರಾಗಿ ಹರಿಯಿತು... ಮನಸ್ಸು  ದೃಢವಾಯ್ತು..


2-ಒಲವು

ಒಂದು ವಾರ ಇರಲಿಲ್ಲ ...ಇನ್ ಬಾಕ್ಸ್ ತುಂಬಾ ಸಂದೇಶಗಳ ರಾಶಿ ರಾಶಿ .... ಒಂದೊದಕ್ಕೆ  ಉತ್ತರಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಅವಳಿಗೆ ... ಮಧ್ಯಾಹ್ನದ ಊಟದ  ನಂತರ ಮುಖಪುಸ್ತಕವನ್ನು ಓದುವುದು ರೂಢಿ .. ನಿಧಾನಕ್ಕೆ ಒಂದು ಸ್ಟೇಟಸ್ ಹಾಕಿ ಬಂದ  ಸಂದೇಶಗಳನ್ನೆಲ್ಲಾ ಓದ ತೊಡಗಿದ್ದಳಷ್ಟೇ ... ಇದ್ದಕ್ಕಿದ್ದಂತೆ  ಐ ಲವ್ ಯೂ  ಅಂತ ಯಾರದ್ದೋ ಸಂದೇಶ ಕಾಣಿಸಿತು.. ಕುತೂಹಲ ಜೊತೆಗೆ ಇದನ್ನ ಹಾಕಿದವನ ಮನಸ್ಥಿತಿ ಎಂತದ್ದಿರಬಹುದೆನ್ನೋ ಯೋಚನೆ ಕೂಡ ಕಾಡಿತ್ತು .. ಆತನ ಪ್ರೊಫೈಲನ್ನ ತೆಗೆದು ನೋಡಿದಳು..ಒಂದಿಪ್ಪತ್ತೋ ಇಪ್ಪತ್ತೊಂದೋ ವಯಸ್ಸಿರಬಹುದು .. ತುಂಬಾ ಮುದ್ದಾದ ಹುಡುಗ... ಮನಸ್ಸು ಚಂಚಲವಾಯ್ತು... ಅವನ ಸಂದೇಶಕ್ಕೆ ಉತ್ತರಿಸಿದಳು.. ಸಂಜೆಯ ತನಕ ಕೆಲಸಗಳ ನಡುವೆಯೇ ಅವನ ಜೊತೆ ಸಂದೇಶಗಳೊಂದಿಗೆ ಮಾತಾಡುತ್ತಲೇ ಇದ್ದಳು .. ಮೊಬೈಲಿನ ನಂಬರು ಕೂಡ ಅದಲು ಬದಲಾಯಿತು..
ಮರುದಿನ ಏಳುವದಕ್ಕಿಲ್ಲ ಕರೆ ಬಂದಿತ್ತು . ಮಾತಾಡುತ್ತಲೇ ಕೆಲಸ ಮುಗಿಸಿ ತಯಾರಾಗಿ ಹೊರಟು ನಿಂತಳು ..ಇವರ ಸಂಭಾಷಣೆಯನ್ನ  ಕೇಳುತ್ತಿದ್ದ ಗಂಡನಿಗೆ ಏನೋ ಸಂಶಯ ..ಆಕೆ ಅವನ ಮುಖದ ಮೇಲಿದ್ದ ಪ್ರಶ್ನೆಗಳನ್ನೆಲ್ಲಾ ನಿವಾಳಿಸಿ ಒಗೆದವಳಂತೆ ಮೊಬೈಲನ್ನ ಕಿವಿಗೊತ್ತಿ ನಡೆದೆ ಬಿಟ್ಟಳು..
ಆ ದಿನದ ಕೊನೆಯಲ್ಲಿ ಅವರು ಮುಂದಿನ ಭಾನುವಾರ ಊಟಕ್ಕೆ ಸಿಗುವದೆಂತಲೂ  ಅವಳು ಗುಲಾಬಿ ಸೀರೆ ಉಟ್ಟು ಬರಬೇಕು ಅಂತಲೂ  ನಿರ್ಧಾರವಾಯಿತು...
ಇವತ್ತು ಭಾನುವಾರ..ಆಕೆ ತುಂಬಾ ಸಡಗರದಿಂದಲೇ ತಯಾರಾದಳು ಅವಳ ಗಂಡನಿಗೋ ಕುತೂಹಲ ಮುದ್ದಾಗಿ ಕಾಣುತ್ತಿದ್ದಳು ಬೇರೆ ..ಮುಖದಲ್ಲಿ ಮೊದಲನೆಯ ದಿನ ತಾನು ಕಂಡಾಗಿನ ಕುಶಿ ..ಯಾಕೊ ಇತ್ತೀಚಿನ ಅವಳ ನಡವಳಿಕೆಗಳು ವಿಚಿತ್ರವಾಗಿ ಕಾಣುತ್ತಿದ್ದವು.. ಸಂಶಯದ ನೆರಳಿತ್ತು... ಪರಿಹಾರಕ್ಕೆ ಅಂತ ಅವಳ ಜೊತೆ ನಾನು ಬರುತ್ತೇನೆ ಅಂದ "ಬೇಡ ..ನಿಮ್ಮನ್ಯಾರು ಅಲ್ಲಿ ಕರೆದಿಲ್ಲ " ಒರಟಾಗಿ ಅಂದು ಬಿಟ್ಟಳಲ್ಲ!!ಅವಳು ಹೋದ ಐದೇ ನಿಮಿಷಕ್ಕೆ ಬೈಕನ್ನು ತೆಗೆದುಕೊಂಡು ಗಂಡನು ಪತ್ತೇದಾರಿಕೆ ಮಾಡಲು ದೌಡಾಯಿಸಿದ ..

ತುಂಬಾ ಒಳ್ಳೆಯ ಹೋಟೆಲ್ .ಅವರಿಬ್ಬರೂ ಎದುರು ಬದರು ಕುಳಿತಿದ್ದಾರೆ. ಅವಳಿಗೆ ಅವನ ಕಸಿವಿಸಿ ನೋಡಿ ಒಳಗೊಳಗೇ ನಗು... ಕೇಳಿದಳು...
"ನಾನು ಬಂದೆ ಬರ್ತೀನಿ ಅಂತ ಗೊತ್ತಿತ್ತಾ?"

"ಬರದೇ!! ನಾನು ಅಷ್ಟ ಪ್ರೀತಿ ಇಂದ ಕರೆದಿದ್ದೀನಿ .. ಮೊದ ಮೊದಲು ನೀವು ಒಪ್ಪುತ್ತಿರೋ ಇಲ್ಲವೋ ಅಂತ ಭಯವಾಗಿತ್ತು"

"ನನಗಿಂತ ಚಂದದ ಹೆಣ್ಣುಗಳೂ ಕೂಡ ಅಲ್ಲಿದ್ದರು..ಆದರೂ ನನ್ನೇ ಯಾಕೆ ಕರೆದದ್ದು? ಅದಿರಲಿ..ನಿನ್ನ ತಂದೆ ತಾಯಿ??"

"ಅಪ್ಪ ಮನೆಯಲ್ಲಿ ಇಲ್ಲ ಸೌದಿಗೆ ಹೋಗಿ ಹತ್ತು ವರುಶಗಳಾಯ್ತು... ಅಮ್ಮ ಕೂಡ ಕೆಲಸಕ್ಕೆ ಹೋಗ್ತಾರೆ.. ನಂಗೆ  ಅಮ್ಮನ್ನ ಕಂಡರೆ ತುಂಬಾ ಇಷ್ಟ"

"ನಾನು ನಿನಗಿಂತ ತುಂಬಾ ದೊಡ್ದವಳು. ಮತ್ತೆ ನಿನ್ನ ಈ ವಯಸ್ಸಿನ ಎಲ್ಲ ತಳಮಳಗಳನ್ನ ದಾಟಿ ಬಂದವಳೂ ಕೂಡ ..ನಿನ್ನ ಕರೆಗೆ ಒಪ್ಪಿದ್ದು ಒಂದೆ ಕಾರಣಕ್ಕೆ "

ಅವನ ಮುದ್ದು ಮುಖದಲ್ಲಿ  ಪ್ರಶ್ನಾರ್ಥಕ ಚಿಹ್ನೆ " ಏನದು"

"ನೀ ನನ್ನ ಪ್ರೀತಿಸ್ತೀಯ ಆಲ್ವಾ?"

"ಹೌದು"

" ಹಾಗಾದರೆ  ನನ್ನ ಗಂಡ ಅಲ್ಲಿ ಹಿಂದೇ ಕೂತಿದ್ದಾರೆ ಅವರನ್ನ ಒಂದು ಮಾತು ಕೇಳಲಾ??"

ಅವನ ಮುಖದಲ್ಲಿ ಭಯ ಟಿಸಿಲೊಡೆಯಿತು"ನೀವು ಇಷ್ಟ ಇಲ್ಲ ಅಂದಿದ್ರೆ ಸಾಕಿತ್ತು..ಇದೆಲ್ಲಾ ಈ ತರ  ಮಾಡಿದ್ದು ಯಾಕೆ?"

"ಕೂತುಕೋ ..ನಾ ನಿಂಗೆ ಹೇಳ ಬಂದದ್ದು  ಬೇರೆ. ಮೊದಲು ಕೇಳು . ಆಮೇಲೆ ತೀರ್ಮಾನಿಸು "

"ಹೇಳಿ"

" ನಿನಗೀಗ ಇಪ್ಪತ್ತೊಂದು ನಿನ್ನ  ಎಂ ಬಿ ಎ  ಮೊದಲ ವರ್ಷ ಆಲ್ವಾ??
"ಹುಂ"
"ನಾ ಮದ್ವೆಯಾದದ್ದು ಹತ್ತೊಂಬತ್ತು ವರ್ಶಕ್ಕೆ..ನಮ್ಗೇನಾದ್ರು  ಮಗ ಇದ್ದಿದ್ರೆ ಆವಾ ನಿನಗಿಂತ ಎರಡು ವರ್ಷ  ಚಿಕ್ಕವನಿರ್ತಿದ್ದನೋ ಏನೋ ..ಆದರೆ ಅವನಿಗೆ ಐದು ತುಂಬುವ ಮೊದಲೇ ವಿಪರಿತ ಕಾಯಿಲೆ ಇಂದ ಕಳ್ಕೊಂಡು ಬಿಟ್ವಿ.. ..ನನಗೆ ಆಪರೇಷನ್  ಆಗಿತ್ತು ಹಾಗಾಗಿ ಮತ್ತೆ ಮಗು ಆಗೋದು ಕನಸಾಗೇ ಉಳೀತು... ನಿನ್ನ ಪರಿಚಯ ನಂಗೆ ಮಗನ ಮತ್ತೆ ನೋಡಿದಂತೆ  ಭಾಸ ಆಯಿತು .ಜೊತೆಗೆ ನಿನ್ನಂತಹ ಪುಟ್ಟ ಯುವಕರು ಸೋಶಿಯಲ್  ನೆಟ್ ಅನ್ನ  ಈ ತರ ಬಳಸ್ತಿರೋದು ನೋಡಿ ಖೇದವೂ ಆಯ್ತು ..ಇಲ್ಲಿ ಕೇಳು .ನಾ ನಿನಗೆ ಅಮ್ಮನೂ ಆಗಬಹುದಲ್ಲವಾ. ಹೆಣ್ಣು ಅಂದಾಕ್ಷಣ ಬರಿ ಕಾಮವೇ ಯಾಕೆ ಮನಸ್ಸಿಗೆ ಬರಬೇಕು ..ಇಷ್ಟ  ಅಂದಾಕ್ಷಣ ಅದು ದೇಹದಲ್ಲೇ ಯಾಕೆ ಕೊನೆಗೊಳ್ಳಬೇಕು ?/ ಪ್ರೀತಿ ಅಂದರೆ ಕೇವಲ ದೈಹಿಕ ಮಾತ್ರವೇ?? ನಿನ್ನ ಮುಖ ನೋಡ್ತಾ  ನನಗೆ ಮಮತೆ ಉಕ್ಕುತ್ತೆ..ನನ್ನ ಸತ್ತು ಹೋದ ತಾಯ್ತನ ಮತ್ತೆ ಚಿಗುರಾಗುತ್ತೆ...ನಾನ್ಯಾಕೆ ನಿಂಗೆ ಅಮ್ಮನ ತರಾ ಅನ್ನಿಸಲಿಲ್ಲ??"
ಅವಳು ಹೇಳುತ್ತಲೇ ಹೋದಳು ... ಅವಳ ಮನದ ಮಾತುಗಳನ್ನ ಕೇಳಿ ಅವನ ಕಣ್ಣಿನ ಪೊರೆ ಸರಿಯಿತು.. ಅವಳ ಕಣ್ಣಿನಲ್ಲಿ ಬಂದ ಹನಿಗಳು ಅವನ ಕಣ್ಣಲ್ಲೂ ಸುರಿಯ ತೊಡಗಿದವು...

ಓಡಿ ಬಂದು ಎಲ್ಲರೆದುರು ಅವಳ ಕಾಲಿಗೆ ಬಿದ್ದ.."ನನ್ನ ಮಗ ಅಂತ ಸ್ವೀಕರಿಸಿ ಪ್ಲೀಸ್ ... ನಿಮ್ಮ ಈ ಪ್ರೀತಿನ ಕಳ್ಕೊಳ್ಳೋಕೆ ನಾ ತಯಾರಿಲ್ಲ..ನನಗೆ ಇವತ್ತಿಂದ ಎರಡು ಅಮ್ಮಂದಿರು ..ನನ್ನ ತಪ್ಪೆಲ್ಲ ಕ್ಷಮಿಸಿ" ಅವನನ್ನೆತ್ತಿ ಮಮತೆ ಇಂದ ಅಪ್ಪಿದಳು ಅವಳು..

ಸಂಶಯ ಹೊತ್ತು ಬಂದಿದ್ದ ಗಂಡ  ತಲೆ ಕೆಳಗೆ ಹಾಕಿ ಕುಳಿತ!!